ಹನಗೋಡು: ದೊಡ್ಡ ದೊಡ್ಡ ಬಂಗಲೆ, ಕಾರುಗಳು ನಮ್ಮ ನೆಲದ ಸಂಸ್ಕೃತಿಯಲ್ಲ, ಕಳಸ, ನೇಗಿಲು, ಬೀಸುವ ಕಲ್ಲು, ಸೇರು, ಮೊರ ನಮ್ಮ ದೇಶದ ಪ್ರತೀಕವಾಗಿದ್ದು ಈ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಲು ಇಂದಿನ ಯುವಜನತೆ ಚಿಂತಿಸಬೇಕಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ (ಜನ್ನೀ) ತಿಳಿಸಿದರು.
ಹನಗೋಡು ಹೋಬಳಿಯ ಯಶೋಧರಪುರದಲ್ಲಿ ಮೈಸೂರಿನ ವಿದ್ಯಾ ವರ್ಧಕ ಕಾನೂನು ಕಾಲೇಜು, ವಿದ್ಯಾವಿಕಾಸ ಕಾನೂನು ಅಧ್ಯಯನ ಕೇಂದ್ರ, ಶೇಷಾದ್ರಿಪುರಂ ಪದವಿ ಕಾಲೇಜು, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕನಿಧಿ ಹಾಗೂ ತುಳಸಿದಾಸಪ್ಪ ಸಾಮಾಜಿಕ ವಿಚಾರ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀ ಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮಾತನಾಡಿ ಆದಿವಾಸಿಗಳು ಸಹ ಈ ನೆಲದ ಮೂಲ ಸಂಸ್ಕೃತಿಯ ಸಂರಕ್ಷಕರು, ಆಧುನಿಕ ಸಮಾಜ ಇವರನ್ನು ದೂರವಿಟ್ಟಿದ್ದರೂ ಸಹ ಆದಿವಾಸಿಗಳು ಹಸಿವಿನಿಂದ ಸತ್ತರೂ, ಸೈಜುಗಲ್ಲು ಹೊತ್ತರೂ, ಮಾನವೀಯ ಮೌಲ್ಯ ಉಳ್ಳವರು. ಹಸಿವು ಮುಕ್ತ, ಅನ್ಯಾಯ ಮತ್ತು ಅಸಮಾನತೆ ಮುಕ್ತ ಸಮಾಜದಲ್ಲಿ ಇರುವವರು.
ಕುವೆಂಪುರವರ ತರುಣರಿರಾ ಎದ್ದೇಳಿ, ಎಚ್ಚರಗೊಳ್ಳಿ ಏಳಿ ಹಳೆ ಮತದ ಕೊಳೆಯನ್ನು ಹೊಸ ಮತದ ಹೊಳೆಯಲ್ಲಿ ಕೊಚ್ಚು ಹೋಗಲಿ. ಓ ಬನ್ನಿ ಮನುಜರೇ , ಮನುಜ ಮತಕ್ಕೆ ವಿಶ್ವಪಥಕ್ಕೆ ಎಂದು ಹೇಳುವ ಮೂಲಕ ೧೦೫ ವ?ಗಳ ಹಿಂದಿನ ಕವಿ ಹಾಗೂ ಕಾವ್ಯ ಪರಂಪರೆಯನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿಕೊಟ್ಟರು.
ಪ್ರೊ. ಕಾಳಚೆನ್ನೇಗೌಡ ಮಾತನಾಡಿ ಗಾಂಧಿ ಮತ್ತು ಯಶೋಧರ ದಾಸಪ್ಪ ಅವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿ ರಾಷ್ಟ್ರಾ ಕಟ್ಟುವಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿ ಗ್ರಾಮಗಳಲ್ಲಿ ಗಾಂಧಿ ಸ್ವರಾಜ್ಯ ಕಲ್ಪನೆ ಕುರಿತು ಮಾಹಿತಿ ನೀಡುವ ಕಾಯಕದಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಶಿವಸ್ವಾಮಿ ಶಿಬಿರದ ಮಾರ್ಗದರ್ಶಕ ಡಾ.ಜಿ.ಬಿ ಶಿವರಾಜಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ವಾಸು ವಹಿಸಿದ್ದರು.
ಕಾರ್ಯಕ್ರಮ ಯೋಜನಾಧಿಕಾರಿ ಪ್ರೊ.ಬಿರಾದಾರ್, ಪ್ರಾಚಾರ್ಯರಾದ ಡಾ.ಸೌಮ್ಯಾ, ಶಿಬಿರದ ನಿರ್ದೇಶಕ ಡಾ.ದೀಪು, ಶಿಭಿರಾಧಿಕಾರಿ ಡಾ.ಕುಮಾರ್, ಸಹಶಿಭಿರಾಧಿಕಾರಿಗಳಾದ ಡಾ.ಶಿವಕುಮಾರ್ ಡಾ.ರಾಘವೇಂದ್ರ ಸೇರಿದಂತೆ ಶಿಬಿರಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.