ಮಂಡ್ಯ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುಗಡೆಗೆ CWRC ಆದೇಶ ನೀಡಿರುವುದನ್ನು ಖಂಡಿಸಿ ಮಳೆಯನ್ನು ಲೆಕ್ಕಿಸದೆ ರಸ್ತೆಗಿಳಿದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕನ್ನಡ ಸೇನೆ ವತಿಯಿಂದ ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾವೇರಿ ವಿಚಾರದಲ್ಲಿ ಶಾಸಕರು, ಸಂಸದರು ಒಗ್ಗಟ್ಟು ಪ್ರದರ್ಶನ ಮಾಡುವಂತೆ ಆಗ್ರಹಿಸಿದ್ದಾರೆ.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಂಸದರು ಹಾಗೂ ಶಾಸಕರ ವಿರುದ್ದ ಘೋಷಣೆ ಕೂಗಿ, ಅಯ್ಯಯ್ಯೋ ಅನ್ಯಾಯ ಎಂದು ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದ್ದಾರೆ. CWRC ಆದೇಶ ಪಾಲನೆ ಮಾಡದಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.
ಸದನದಲ್ಲಿ ಸಂಸದರು, ಶಾಸಕರು ಕಾವೇರಿ ವಿಷಯ ಚರ್ಚೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಕಾವೇರಿ ವಿಚಾರವನ್ನ ಪ್ರಸ್ತಾಪ ಮಾಡದೆ ಮೌನವಾಗಿದ್ದಾರೆ. ತಮಿಳುನಾಡಿಗೆ ನಾಲ್ಕು ನದಿಗಳಿಂದ 20ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗ್ತಿದೆ. ರಾಜ್ಯದ ಜನರಿಗೆ ಮುಖ್ಯಮಂತ್ರಿ ಮೋಸ ಮಾಡ್ತಿದ್ದಾರೆ. ರಾಜ್ಯದ ಸಂಸದರು, ಶಾಸಕರು ಸದನದಲ್ಲಿ ಧ್ವನಿ ಎತ್ತಿಲ್ಲ. ಯಾವುದೇ ಕಾರಣಕ್ಕೂ ಜಿಲ್ಲೆಗೆ ಬರಬೇಡೆ ಮೊದಲು ಕಾವೇರಿ ಉಳಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಸದರು, ಶಾಸಕರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಅವೈಜ್ಞಾನಿಕ ಆದೇಶವನ್ನು ಪ್ರಾಧಿಕಾರಗಳು ಮಾಡ್ತಿವೆ ಮನವರಿಕೆ ಮಾಡಿಕೊಡಿ. ತಮಿಳುನಾಡಿನಲ್ಲಿರುವ ಸ್ವಾಭಿಮಾನ ನಿಮಗು ಬರಲಿ. ಸದನದಲ್ಲಿ ಧ್ವನಿ ಎತ್ತದಿದ್ದರೆ ಜನ ಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.