ಮಂಡ್ಯ: ಕರ್ನಾಟಕದಲ್ಲಿ ಹಂಚಿ ಹೋಗಿರುವ ನಟರು, ತಂತ್ರಜ್ಞರು, ಕಲಾವಿದರನ್ನು ಒಟ್ಟುಗೂಡಿಸುವುದು ನಿರ್ದಿಗಂತ ಉದ್ದೇಶವಾಗಿದೆ. ನಿರ್ದಿಗಂತ ಸರಕಾರದ ಯಾವುದೇ ಸವಲತ್ತು ಪಡೆಯದೇ ಕೆಲಸ ಮಾಡುತ್ತಿದೆ ಎಂದು ಚಲನಚಿತ್ರ ಬಹುಭಾಷಾ ನಟ ಪ್ರಕಾಶ್‌ರಾಜ್ ಹೇಳಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಲೋಕಪಾವನಿ ನದಿ ತೀರದಲ್ಲಿ ಭಾನುವಾರ ನಡೆದ ನಿರ್ದಿಂಗತ ವರ್ಷದ ಸಂಭ್ರಮ, ವಾರ್ಷಿಕ ಸಂಚಿಕೆ ಬಿಡುಗಡೆ, ಭಿತ್ತಿಪತ್ರ ಪ್ರದರ್ಶನ, ಹಾಡುಗಳು ಹಾಗೂ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರ್ದಿಗಂತ ಪ್ರಾರಂಭವಾಗಿ ಒಂದು ವರ್ಷ ಕಳೆದಿದೆ. ಎರಡು ವರ್ಷದಲ್ಲಿ ಕರ್ನಾಟಕದ ಎಲ್ಲಾ ರಂಗತಂಡಗಳನ್ನು ಒಟ್ಟುಗೂಡಿಸುವ ಕೆಲಸ ಮಾಡಲಾಗುತ್ತದೆ. ನಿರ್ದಿಗಂತದಿಂದ ಈಗಾಗಲೇ ೯ ಹೊಸ ನಾಟಕಗಳು ಬಂದಿವೆ. ಸಮತೆ, ಸಮಾನತೆ, ಮಾನವೀಯತೆಯನ್ನು ನಟಕಗಳ ಮೂಲಕ ಹೇಳಿಕೊಡಲಾಗುತ್ತದೆ. ನಾವು ಬಳಗ, ಶಾಲಾರಂಗತಂಡ, ಶಾಲಾರಂಗ ವಿಕಾಸ ತಂಡಗಳ ಮೂಲಕ ರಾಜ್ಯದ ಮೂಲೆ, ಮೂಲೆಯಲ್ಲಿ ನಾಟಕಗಳು ಪ್ರದರ್ಶನವಾಗುತ್ತಿವೆ. ಶಾಲಾ ರಂಗ ತಂಡದಿಂದ ೨೦೦ ನಾಟಕಗಳ ಪ್ರದರ್ಶನವಾಗಿದೆ.
ಒಂದು ವರ್ಷದಲ್ಲಿ ದೇಶದ ಶಾಲೆಗಳು ಹೇಗೆ ಇವೆ. ಪಠ್ಯಕ್ರಮ ಹೇಗಿದೆ. ನಾಟಕದ ಪರಿಣಾಮ ಹೇಗೆ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಲಾಗುತ್ತಿದೆ. ಶಾಲೆಯಲ್ಲಿ ವಿಜ್ನಾನ, ಗಣಿತ, ಜೀವಶಾಸ್ತ್ರ ಹೊರತುಪಡಸಿದ ಜ್ನಾನವನ್ನು ನಾಟಕಗಳ ಮೂಲಕ ನೀಡಲಾಗುತ್ತದೆ. ಪ್ರತಿಯೊಂದು ಬೀಜವೂ ಮೊಳಕೆಯೊಡೆಯುತ್ತದೆ. ಅದಕ್ಕೆ ಮಣ್ಣಿನ ಸತ್ವ ಬೇಕಾಗುತ್ತದೆ ನಿರ್ದಿಂಗತ ತಂಡದಲ್ಲಿರುವ ಎಲ್ಲರೂ ಪ್ರತಿಭಾನ್ವಿತರೇ, ಕಲಾವಿದರ ತಂಡಗಳಿಗೆ ಫೆಲೋಶಿಪ್ ಕೂಡ ನೀಡಲಾಗುತ್ತಿದೆ. ಈ ಕೆಲಸಕ್ಕೆ ಹತ್ತಾರು ಮಂದಿ ನನ್ನ ಜತೆ ಕೈ ಜೋಡಿಸಿದ್ದಾರೆ. ಸರಕಾರದಿಂದ ಯಾವುದೇ ಅನುದಾನ ಪಡೆದುಕೊಳ್ಳದೇ ರಂಗಭೂಮಿಯ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಕಲಾವಿದ ಶ್ರೀಪಾದ ಭಟ್ ಮಾತನಾಡಿದರು.
ರಂಗಭೂಮಿಯನ್ನು ಮುಂದಿನ ಪೀಳಿಗೆಗೂ ಉಳಿಸುವುದು ಮಕ್ಕಳಲ್ಲಿ ವೈಜ್ನಾನಿಕ ಮನೋಭಾವವನ್ನು ಪ್ರಶ್ನಿಸುವ, ಆತ್ಮಸ್ಥೆರ್ಯ ತುಂಬುವ ಉದ್ದೇಶದಿಂದ ಯುವ ಪೀಳಿಗೆಯಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ನಿರ್ದಿಂಗತ ಹುಟ್ಟು ಹಾಕಲಾಗಿದೆ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಿರ್ದಿಂಗತ ವೈಬ್ ಸೈಟ್‌ನ್ನು ಕೃಪಾಕರ ಮತ್ತು ಸೇನಾನಿ ಬಿಡುಗಡೆ ಮಾಡಿದರು. ಸೇನಾನಿ ಮಾತನಾಡಿ ನಿರ್ದಿಂಗತವನ್ನು ಆರಂಭದಿಂದಲೂ ನಾನು ನೋಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮ ತಂಡವಾಗಿ ಬೆಳೆಯುತ್ತದೆ ಎಂದು ಹೇಳಿದರು. ಹಿರಿಯ ಪ್ರತ್ರಕರ್ತೆ ವಿಜಿಯಮ್ಮ ಹಾಗೂ ಕೃಷ್ಣಮೂರ್ತಿ ಹನೂರು ನಿರ್ದಿಂಗತ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದರು.
ಚಲನಚಿತರ ನಟರಾದ ಕಿಶೋರ್, ಅಚ್ಯುತಕುಮಾರ್, ಅರುಣ್‌ಸಾಗರ್ ಸೇರಿದಂತೆ ಕಿರುತರೆ ಕಲಾವಿದರು, ತಂತ್ರಜ್ನರು, ಬರಹಗಾರರು, ರಂಗಭೂಮಿ ತಂಡದ ನಾನಾ ರಾಜ್ಯ ಕಲಾವಿದರು ಹಾಜರಿದ್ದರು. ಸಂಜೆ ಮಂಟೆ ಸ್ವಾಮಿ ಕಾವ್ಯ ಪ್ರಯೋಗ ಪ್ರದರ್ಶನ ನಡೆಯಿತು.