ಮಂಡ್ಯ: ಕಾಂಗ್ರೆಸ್ ಸರ್ಕಾರ ದಲಿತ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಎಂದು ಆರೋಪಿಸಿರುವ ಮಾಜಿ ಸಚಿವ ಎನ್.ಮಹೇಶ್ 7C ACT ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ, ಸಂವಿಧಾನ ವಿರೋಧಿ, ಹಗರಣದ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿ ತಂತ್ರ ಬಳಸಿದ್ದಾರೆ. ಐದು ಗ್ಯಾರಂಟಿ ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸುವ ಬಗ್ಗೆ ಎಲ್ಲು ಹೇಳಿಲ್ಲ. 40 ಸಾವಿರ ಕೊಟ್ಟಿ ಆದಾಯ ಸಂಗ್ರಹ ಮಾಡ್ತೇವೆ ಅಂದಿದ್ರು. ಆದರೆ SC/ST ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ 11,144ಕೋಟಿ ಬಳಕೆಯಾಗಿದೆ, ಈ ವರ್ಷ 39 ಸಾವಿರ ಕೋಟಿಯಲ್ಲಿ 14,563 ಸಾವಿರ ಕೋಟಿ ಬಳಕೆ ಮಾಡಿಕೊಂಡಿದ್ದಾರೆ ಎಂದರು.
SCPTSP ಹಣ ಬಳಕೆ ಮಾಡಿಕೊಂಡಿದ್ದಾರೆ. ಎರಡು ವರ್ಷದಲ್ಲಿ ದಲಿತರ 25 ಸಾವಿರ ಕೋಟಿಯ ಅನುದಾನ ಬಳಕೆಯಾಗಿದೆ. ಇದಕ್ಕೆ ದಲಿತ ವಿರೋಧಿ ಸರ್ಕಾರ ಕಾಂಗ್ರೆಸ್. 7ಡಿ ತೆಗೆಯಲು ಹೋರಾಟ ಮಾಡಿದ್ದೆ ಸಿದ್ದರಾಮಯ್ಯ ತೆಗೆದಿದ್ದಾರೆ. 7ಸಿ ಆ್ಯಾಕ್ಟ್ ಬಳಸಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಐದು ಗ್ಯಾರಂಟಿಗೆ SCPTSP ಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಸಿದ್ದರಾಮಯ್ಯ ಸಮರ್ಥಿಸಿಕೊಳ್ಳಲು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
SCPTSP ಹಣ ಗ್ಯಾರಂಟಿ ಗೆ ಬಳಕೆಯಿಂದ ದಲಿತ ಸಮುದಾಯದ ಬೆಳವಣಿಗೆ ಕುಂಠಿತವಾಗಿದೆ. ಎಸ್ಪಿ,ಎಸ್ಟಿ ಸಬಲರನ್ನಾಗಿ ಮಾಡಲು ನಿಗಮಗಳಲ್ಲಿ ಅನುಕೂಲ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 170ಕೋಟಿ. ಭೋವಿ 50 ಕೋಟಿ.510 ಎಲ್ಲಾ ನಿಗಮಕ್ಕೆ ಕೊಟ್ಟಿದ್ದಾರೆ ಅಷ್ಟೆ. ವಾಲ್ಮೀಕಿ ಅಭಿವೃದ್ಧಿ ನಿಗಮ 197 ಕೋಟಿ ಅನುದಾನದಲ್ಲಿ 92 ಕೋಟಿ ಹಣವನ್ನು ರಾಜಾರೋಷವಾಗಿ ಬೇಕಾ ಬಿಟ್ಟಿ ಟ್ರಾನ್ಸ್ ಫರ್ ಮಾಡಲಾಗಿದೆ ಎಂದರು.
ಎಂಎಲ್ಎಗೆ ಅನುದಾನ ಕೂಡ ಕೊಡ್ತಿಲ್ಲ. ಯಾವುದೇ ಅಭಿವೃದ್ಧಿ ಆಗ್ತಿಲ್ಲ, ಇಂತಹ ಸರ್ಕಾರ, ಇಂತಹ ಮುಖ್ಯಮಂತ್ರಿ ಇರಬೇಕಾ? ಮೈಸೂರು ಮುಡಾ ಹಗರಣ ನಡೆದಿದೆ. ಸಿದ್ದರಾಮಯ್ಯ ಅವರಿಗೆ 62 ಕೋಟಿ ಯಾವ ಆಧಾರದ ಮೇಲೆ ಕೊಡಬೇಕು? ಸಿದ್ದರಾಮಯ್ಯ ಅವರ ಕೈ ಕಂಟ್ರೋಲ್ ಗೆ ಆಡಳಿತ ಸಿಕ್ತಿಲ್ಲ ಅಭಿವೃದ್ಧಿಯಲ್ಲಿ ಜೀರೊ ಆಗಿರುವ ಸರ್ಕಾರ ಎಂದು ಹರಿಹಾಯ್ದರು.