ನವದೆಹಲಿ: ಮುಂದಿನ ಸೋಮವಾರ ಸಂಸತ್ ಅಧಿವೇಶನ ಶುರುವಾಗಲಿರುವಂತೆಯೇ ರಾಜ್ಯಸಭೆಯಲ್ಲಿ ೪ ನಾಮನಿರ್ದೇಶಿತ ಸದಸ್ಯರು ನಿವೃತ್ತರಾಗಿದ್ದಾರೆ. ಹೀಗಾಗಿ, ಮೇಲ್ಮನೆಯಲ್ಲಿ ಬಿಜೆಪಿಯ ಬಲ ೮೬ಕ್ಕೆ ಕುಸಿದಿದೆ.
ಎನ್‌ಡಿಎ ಬಲ ೧೦೧ಕ್ಕೆ ಕುಸಿದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ೮೭ ಸದಸ್ಯರನ್ನು ಹೊಂದಿದೆ. ಸದ್ಯ ಬಿಜೆಪಿ ಇತರೆ ನಾಮನಿರ್ದೇಶಿತ ಸದಸ್ಯರು, ವೈಎಸ್‌ಆರ್ಸಿಪಿ, ಎಐಎಡಿಎಂಕೆಯಂತಹ ಮಿತ್ರಪಕ್ಷಗಳ ನೆರವಿನಿಂದ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಪಾಸ್ ಮಾಡುವ ಅವಕಾಶ ಇದೆ.
ಶೀಘ್ರವೇ ರಾಜ್ಯಸಭೆ ನಡೆಯಲಿರುವ ಉಪಚುನಾವಣೆಯತ್ತ ಬಿಜೆಪಿ ಕಣ್ಣಿಟ್ಟಿದ್ದು, ಸದ್ಯ ರಾಜ್ಯಸಭೆಯಲ್ಲಿ ೧೯ ಸ್ಥಾನಗಳು ಖಾಲಿಯಿವೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ೧೦ ಮಂದಿ ತಮ್ಮ ಸ್ಥಾನಕ್ಕೆ ಕಳೆದ ತಿಂಗಳೇ ರಾಜೀನಾಮೆ ನೀಡಿದ್ದರು.
ಒಟ್ಟು ಸದಸ್ಯ ಬಲ-೨೪೫, ಖಾಲಿಯಿರುವ ಸ್ಥಾನಗಳು-೧೯, ಸದ್ಯದ ಸದಸ್ಯ ಬಲ-೨೨೬, ಬಹುಮತಕ್ಕೆ ಅಗತ್ಯ ಸ್ಥಾನ-೧೧೪, ಎನ್ಡಿಎ ಸದಸ್ಯ ಬಲ-೧೦೧, ಬಿಜೆಪಿ ಸದಸ್ಯರ ಸಂಖ್ಯೆ-೮೬, ಇಂಡಿಯಾ ಮಿತ್ರಕೂಟದ ಸಂಖ್ಯೆ-೮೭,ಕಾಂಗ್ರೆಸ್ -೨೬, ಇತರರು -೨೯ ಇದ್ದಾರೆ.