ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಚಾಮರಾಜನಗರ: ನಗರದ ಆರಾಧ್ಯ ಟ್ರಸ್ಟ್(ರಿ) ಹಾಗೂ ಗುಂಡ್ಲುಪೇಟೆ ಆರಾಧ್ಯ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಜಗದ್ಗುರು ಶ್ರೀ ಪಂಚಾಚಾರ್ಯರ ಯುಗಮಾನೋತ್ಸವ ಹಾಗು ಟ್ರಸ್ಟ್ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು.17 ರ ಬುಧವಾರ ಮೂಡಲಪುರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಕೆ.ಹೊಸೂರು ಮಹದೇವರಾದ್ಯ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 7 ಗಂಟೆಗೆ ಪಂಚಾಚಾರ್ಯರ ಯುಗಮಾನೋತ್ಸವ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಬಳಿಕ 9 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ, ಟ್ರಸ್ಟ್ ನೂತನ ಅಧ್ಯಕ್ಷರಾಗಿ ಅಗರ ರಾಮಾರಾಧ್ಯರು ಆಯ್ಕೆಯಾಗಿದ್ದು ಪದಗ್ರಹಣ ಕಾರ್ಯಕ್ರಮದಲ್ಲಿ
ಕೆ.ಹೊಸೂರು ಗುರುಮಠದ ಮಲ್ಲಾರಾಧ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು ಎ.ಎನ್ ವಿಶ್ವರಾಧ್ಯರು ಅಧ್ಯಕ್ಷತೆ ವಹಿಸಲಿದ್ದಾರೆ, ಟ್ರಸ್ಟ್ ಗೌರವಾಧ್ಯಕ್ಷರಾದ ವಕೀಲರಾದ ರುದ್ರಾರಾಧ್ಯರು ನಿವೃತ್ತ ಉಪನ್ಯಾಸಕರಾದ ನಾಗಭೂಷಣಾರಾಧ್ಯರು, ಮಂಡ್ಯ ಜಿಲ್ಲೆ ಮೂಡ ಕಮಿಷನರ್ ಆರ್.ಐಶ್ವರ್ಯ ಭಾಗವಹಿಸಲಿದ್ದಾರೆ, ಈ ವೇಳೆ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು, ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ದಿಡ್ಡಾಪುರ ವಿಶ್ವೇಶ್ವರ ಆರಾಧ್ಯ ಮತ್ತು ಅಂತರಾಷ್ಟ್ರೀಯ ಸ್ಕೇಟಿಂಗ್ ಪಟು ಆಕಾಶ್ ಆರಾಧ್ಯ ಮತ್ತು ಆರಾಧ್ಯ ಜನಾಂಗದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು ಮಂಡ್ಯ ಬೆಂಗಳೂರು ಹಾಗೂ ವಿವಿದೆಡೆಯ ಆರಾಧ್ಯ ಸಮಾಜದ ಬಂಧುಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಮೂಡಲಪುರ ಶಿವಶಂಕರಾರಾಧ್ಯ ಕೋರಿದ್ದಾರೆ.