ಮಂಡ್ಯ: ಮೊಹರಂ ಕಡೆ ದಿನ ಹಿನ್ನೆಲೆ ಮಂಡ್ಯದ ಕೆಆರ್ ಎಸ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಬೆಂಕಿ ಕೊಂಡೋತ್ಸವ ಆಚರಣೆ ಮಾಡಲಾಯಿತು.
ತಾತ ಮುತ್ತಾತರ ಕಾಲದಿಂದಲೂ ಸಂಪ್ರದಾಯ ನಡೆದು ಬಂದಿದೆ. ಮೊಹರಂ ಕಡೆ ಹಿಂದಿನ ದಿನವೇ ಕಟ್ಟಿಗೆಗೆ ಬೆಂಕಿ ಹಾಕಿ, ಬೆಂಕಿ ಮುಂದೆ ಸುತ್ತು ಹಾಕುತ್ತ ಅಸೇನ್ ಹುಸೇನ್ ಎಂದು ಪೂರ್ವಜರ ನಾಮಸ್ಮರಣೆ ಮಾಡುತ್ತಾರೆ.
ಅಸೇನ್ ಹುಸೇನ್ ಈ ಸಮುದಾಯದ ಧರ್ಮ ರಕ್ಷಕರಾಗಿದ್ದಾರೆ. ಹೂವಿನ ಅಲಂಕಾರದಲ್ಲಿ ಶೃಂಗರಿಸಿದ ದೇವರನ್ನ ಹೊತ್ತು ಬೆಂಕಿಯಲ್ಲಿ ನಡೆಯಲಾಗುತ್ತದೆ.
ಹರಕೆ ಪೂರ್ಣಗೊಂಡವರಿಂದ ಕೊಂಡೋತ್ಸವ ಮಾಡಲಾಗುವುದು. ದೇವರನ್ನ ಹೊತ್ತು ಕೆಂಡದಲ್ಲಿ ನಡೆದು ಹಲವರು ಹರಕೆ ತೀರಿಸುತ್ತಾರೆ.
ಮುಸ್ಲಿಮರ ಆಚರಣೆಗೆ ಹಿಂದುಗಳು ಸಾಥ್ ನೀಡುತ್ತಾರೆ. ಕೊಂಡಕ್ಕೆ ಬೇಕಾದ ಕಟ್ಟಿಗೆ ಒದಗಿಸುತ್ತಾರೆ. ಹಿಂದು ಮುಸ್ಲಿಂ ಭೇಧವಿಲ್ಲದೆ ಕೆಂಡದಲ್ಲಿ ಭಕ್ತರು ನಡೆಯುತ್ತಾರೆ.