Saturday, April 19, 2025
Google search engine

Homeರಾಜ್ಯದಲಿತ ಮಹಿಳೆ ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ: ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ

ದಲಿತ ಮಹಿಳೆ ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ: ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ದಲಿತ ಮಹಿಳೆ ಎಂಬ ಒಂದೇ ಕಾರಣಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ನಡೆಸಲು ಬಿಡುತ್ತಿಲ್ಲ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ರವರು ಗ್ರಾಮ ಪಂಚಾಯಿತಿ ಸದಸ್ಯ ಜಲೇಂದ್ರ ವಿರುದ್ದ ಆರೋಪಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಜಂಟಿಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಅಧಿಕಾರಕ್ಕೆ ಬಂದ ದಿನದಿಂದ ಗ್ರಾಮ ಪಂಚಾಯಿತಿ ಸದಸ್ಯ ಜಲೇಂದ್ರ ಅನಗತ್ಯ ಕಿರುಕುಳ ನೀಡಿ ಪಂಚಾಯಿತಿಯಲ್ಲಿ ಯಾವ ಕೆಲಸವೂ ಅಗದಂತೆ ತಡೆಯಿಡಿಯುವುದು ಮತ್ತು ಅದಕ್ಕೆ ಏನಾದರೂ ತಕರಾರು ಸಲ್ಲಿಸುವುದು ಯಾವ ಅಭಿವೃದ್ದಿ ಕಾರ್ಯವೂ ಕೂಡ ಪಂಚಾಯಿತಿಯಲ್ಲಿ ಇವರಿಂದ ನಡೆಯುತ್ತಿಲ್ಲ ಇವರ ಸದಸತ್ವವನ್ನು ರದ್ದುಮಾಡಿ ಎಂದು ಮೇಲಾಧಿಕಾರಿಗಳಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಪಂಚಾಯಿತಿಯಲ್ಲಿ ಯಾವ ಬ್ರಷ್ಟಚಾರವೂ ಅಗಿಲ್ಲ ಇವರು ಬ್ಲಾಕ್‌ಮೇಲ್ ವ್ಯಕ್ತಿಯಾಗಿದ್ದು ಕಾಮಗಾರಿಯನ್ನು ನಮ್ಮ ಕಡೆಯವರಿಗೆ ಕೊಡಬೇಕು ಇಲ್ಲದಿದ್ದಲ್ಲಿ  ೨ ಲಕ್ಷ ರೂ ಕೊಡಬೇಕು ಎಂದು ಬೇಡಿಕೆಯನ್ನು ನನಗೆ ಮತ್ತು ಪಿಡಿಓ ರವರಿಗೆ ಇಟ್ಟಿದ್ದರು ಅದರೆ ಇದನ್ನು ನಾವು ಒಪ್ಪದೇ ಇದಿದ್ದಕ್ಕೆ ಈ ರೀತಿ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಇದರಿಂದ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದರು.

        ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಅಮೃತ ಯೋಜನೆಯ ಕಾಮಗಾರಿಯಲ್ಲಿ ಲಕ್ಷಾಂತರ ರೂ ದುರುಪಯೋಗ ಅಗಿದೆ  ಮತ್ತು ಕಾಮಗಾರಿ ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಖರಿದಿಸಿರುತ್ತಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದದ್ದು ಹೇಗೆಂದರೆ ಆಮೃತಯೋಜನೆಯಡಿ ಮಂಜೂರು ಆಗಿರುವ ಕಾಮಗಾರಿಗಳು ನಿಯಮನುಸಾರ ಇ ಟೆಂಡರ್ ಮೂಲಕ ನಡೆಸಲಾಗಿದೆ ಇದಕ್ಕೆ ಅಗತ್ಯ ದಾಖಲಾತಿಗಳು ನಮ್ಮ ಬಳಿ ಇವೆ ಎಂದರು ಜೊತೆಗೆ ಈ ಕಾಮಗಾರಿಗೆ ಬಿಲ್ಲನ್ನು ಇನ್ನು ನಾವು ಸಂಬಂಧಪಟ್ಟವರಿಗೆ ಪಾವತಿಯೇ ಮಾಡಿಲ್ಲ ಆಗಿದ್ದಮೇಲೆ ಹಣದ ದುರುಪಯೋಗ ಎಲ್ಲಿದ್ದ ಬಂತು. ಇದು ಬೆದರಿಸುವ ತಂತ್ರವಾಗಿದೆ ಎಂದರು.

        ಮಾನ್ಯ ಜಲೇಂದ್ರರರವರು ಕಳೆದ ಒಂದು ತಿಂಗಳಿಂದ ಹಣ ಕೊಡದಿದ್ದರೆ ನಮ್ಮ ವಿರುದ್ದ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ನಾವು ಹಣವನ್ನು ನೀಡಲು ನಿರಾಕರಿಸಿದ ಕಾರಣ ಮಾಧ್ಯಮಗಳ ಮೂಲಕ ಈ ರಾದ್ಧಾಂತಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ದೂರಿದರು. ಜೊತೆಗೆ ನಮ್ಮ ಸ್ನೇಹಿತ ಜಲೇಂದ್ರ ಒಬ್ಬ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಾನೆ. ನಮ್ಮ ಪಂಚಾಯಿತಿ ಅಲ್ಲದೇ ಬೇರೆ ಬೇರೆ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಕೆಲಸಗಳಲ್ಲಿ ಕೈ ಹಾಕಿ ಕೆಲಸ ಮಾಡದಂತೆ ಅವರಿಗೆ ಬೆದರಿಸುವ ಒಬ್ಬ ಬ್ಲಾಕ್‌ಮೇಲ್ ವ್ಯಕ್ತಿಯಾಗಿದ್ದಾನೆ ಎಂದು ದೂರಿದರು.

        ದಲಿತ ಮುಖಂಡ ಸತೀಶ್ ಮಾತನಾಡಿ ಈ ಜಲೇಂದ್ರ ರವರು ನಮ್ಮ ಹೆಬ್ಬಾಳು ಪಂಚಾಯಿತಿಯ ಮಾನ ಮರ್ಯಾದೆ ಹರಾಜು ಮಾಡುತ್ತಿದ್ದಾರೆ. ಇದೇ ರೀತಿ ಇವರುಗಳು ದಲಿತ ಹೆಣ್ಣು ಮಗಳಗೆ ಅನಗತ್ಯ ಕಿರುಕುಳ ನೀಡುತ್ತಿದ್ದು ಅಕ್ರಮ ನಡೆದಿದ್ದರೆ ಸೂಕ್ತ ದಾಖಲೆ ಒದಗಿಸಬೇಕು ಸುಖಸುಮ್ಮನೆ ದಲಿತ ಮಹಿಳೆ ಎಂಬ ಒಂದೇ ಕಾರಣಕ್ಕಾಗಿ ಆಡಳಿತ ಮಾಡಲು ಬಿಡದೇ ಅನಗತ್ಯ ಕಿರುಕುಳ ನೀಡುವುದನ್ನು ಮುಂದುವರೆಸಿದರೆ ಇವರ ವಿರುದ್ದ  ನಾವು ತಾಲ್ಲೂಕ್ ಪಂಚಾಯಿತಿ ಅಧಿಕಾರಿ ಸೇರಿದಂತೆ ಮೇಲಿನ ಅಧಿಕಾರಿಗಳಿಗೆ ಲಿಖಿತ ದೂರು ನೀಡುತ್ತೇವೆ ಮತ್ತು ಎಸ್ಸಿ ಎಸ್.ಟಿ ಕಾಯಿದೆಯಡಿ ಇವರುಗಳ ಮೇಲೆ ದೌರ್ಜನ್ಯದ ದೂರು ದಾಖಲಿಸಿ ಕೇಸ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಶೇಖರ್, ಕಾಂತರಾಜು ಹೆಚ್.ಎನ್.ರವಿ, ಮುಖಂಡರಾದ ಹೆಚ್.ಎಸ್.ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular