ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನಲ್ಲಿ ಸತತ ಮೂರು ದಿನದಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೋಟೆ ಹುಣಸೂರು ರಸ್ತೆಯಲ್ಲಿ ದಿನನಿತ್ಯ ಸಮಯ ಬಿಡುವಿಲ್ಲದೆ ವಾಹನಗಳು ಚಲಿಸುತ್ತವೆ.
ಇಂದು ಶಾಂತಿಪುರ ಗ್ರಾಮದ ವಿದ್ಯಾ ಸಿಂಚನ ಖಾಸಗಿ ಶಾಲೆ ಸಮೀಪ ಸುಮಾರು 11 20ಕ್ಕೆ ಬೃಹತ್ ಗಾತ್ರದ ಮರ ಮೇನ್ ರೋಡ್ ಗೆ ಬಿದ್ದಿದೆ ಅದೃಷ್ಟವಶ ಹುಣಸೂರು ಕಡೆಯಿಂದ ಹೋಗುತ್ತಿದ್ದ ಗೂಡ್ಸ್ ಆಟೋ ಮತ್ತು ಚಾಲಕ ಮರ ಬೀಳುವುದನ್ನು ಕಂಡು ತಕ್ಷಣ ಬ್ರೇಕ್ ಹೊಡೆದಿದ್ದಾರೆ ಆಟೋ ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಜೊತೆಯಲ್ಲಿ ಬರುತ್ತಿದ್ದ ನಂಜಯ್ಯನ ಕಾಲೋನಿಯ ಚೂಡಾಮಣಿ ಎಂಬುವರು ದ್ವಿಚಕ್ರ ವಾಹನದಲ್ಲಿ ಇದೇ ಸಂದರ್ಭದಲ್ಲಿ ಬಂದಿದ್ದಾರೆ ಮರ ಬೀಳುವುದನ್ನು ನೋಡಿ ದ್ವಿಚಕ್ರ ವಾಹನದಲ್ಲಿ ಬಿದ್ದು ಗಾಬರಿಯಿಂದ ಕಿರುಚಾಡಿಕೊಂಡಿದ್ದಾರೆ.

ತಕ್ಷಣ ವಾಹನ ಚಾಲಕರು ನಿಲ್ಲಿಸಿ ಅವರನ್ನು ಎತ್ತಿದ್ದಾರೆ ಮರ ಬಿದ್ದ ರಭಸಕ್ಕೆ ಕೆಇಬಿ ವಿದ್ಯುತ್ ಕಂಬ ಮತ್ತು ತಂತಿ ನೆಲಸಮಗೊಂಡಿವೆ ಯಾವುದೇ ಹಾನಿಯಾಗಿಲ್ಲ ನಂತರ ತಕ್ಷಣ ಅಲ್ಲೇ ಇದ್ದ ಸಾರ್ವಜನಿಕರು ಕೆಇಬಿ ಆಫೀಸಿಗೆ ಫೋನ್ ಮಾಡಿದ್ದಾರೆ.
ತಕ್ಷಣ ಸ್ಪಂದಿಸಿದ ಕೆಇಬಿ ಅಧಿಕಾರಿಗಳು ಕರೆಂಟ್ ಅನ್ನು ತೆಗೆದಿದ್ದಾರೆ ಮತ್ತು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಜೊತೆ ಲೈನ್ ಮ್ಯಾನ್ ಗಳು ಸೇರಿ ಮರವನ್ನು ತೆರವುಗೊಳಿಸಲು ಸಹಕರಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿದರು. ಕರೆ ಸ್ವೀಕರಿಸಲಿಲ್ಲ ಬಂದು ತೆರವುಗೊಳಿಸಲಿಲ್ಲ ಎಂದು ಆಕ್ರೋಶಗೊಂಡ ಸಾರ್ವಜನಿಕರು ಯಾವುದೇ ಆಯುಧಗಳಿಲ್ಲದೆ ಕೈಗಳಿಂದ ಕೊಂಬೆಗಳನ್ನು ಮುರಿದು ಮರವನ್ನು ಪಕ್ಕಕ್ಕೆ ತಳ್ಳಿ ವಾಹನಗಳಿಗೆ ಜಾಗ ಮಾಡಿಕೊಟ್ಟಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನಗಳು ಎರಡು ಕಿಲೋಮೀಟರ್ ವರೆವರೆಗೆ ಸಾಲು ನಿಂತಿದ್ದ ದೃಶ್ಯ ಕಂಡು ಬಂತು.