ಮಂಡ್ಯ: ಪುನರ್ವಸು ಮಳೆಯಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.
ಕಾವೇರಿಯ ನದಿಯಿಂದ ಗಗನಚುಕ್ಕಿ ಜಲಪಾತಕ್ಕೆ ಮಳೆಯಿಂದ ಜೀವ ಕಳೆ ಬಂದಿದೆ.
ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ ಜಲಪಾತ ಹಾಲ್ನೊರೆಯಂತೆ ದುಮ್ಮಿಕ್ಕಿ ಭೋರ್ಗರೆಯುತ್ತಿದೆ. ಗಗನಚುಕ್ಕಿ ಜಲಪಾತದ ಜಲವೈಭವ ನೋಡಲು ಪ್ರವಾಸಿಗರ ದಂಡು ಆಗಮಿಸುತ್ತಿದ್ದಾರೆ.
ಜಲಪಾತದ ಮುಂದಿನ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಫಿಧಾ ಆಗಿದ್ದಾರೆ. ಕುಟುಂಬದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.