ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲಿನ ಊಟ ನನಗೆ ಸರಿ ಹೊಂದುತ್ತಿಲ್ಲ, ಹಾಗಾಗಿ ಮನೆಯ ಊಟ, ಪುಸ್ತಕ ಸೇರಿದಂತೆ ಹಲವು ವಸ್ತುಗಳಿಗಾಗಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು ನಾಳೆ ಮಧ್ಯಾಹ್ನ ೨ ಗಂಟೆಗೆ ವಿಚಾರಣೆ ಮುಂದೂಡಿದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ನಟ ದರ್ಶನ್ ಸಲ್ಲಿಸಿದ್ದ ವಿಚಾರಣೆ ನಡೆಯುತ್ತಿದ್ದು, ಮನೆಯಿಂದ ಊಟ ಹಾಸಿಗೆ ಪುಸ್ತಕ ಕೋರಿ ದರ್ಶನವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.ಈ ಕುರಿತು ಇಂದು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್ ನಟ ದರ್ಶನ್ ಅರ್ಜಿಗೆ ಸರ್ಕಾರ ಹಾಗೂ ತನಿಖಾಧಿಕಾರಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ವೇಳೆ ನ್ಯಾಯ ಪೀಠವು ಸರ್ಕಾರ ಆಕ್ಷೇಪಣೆ ಸಲ್ಲಿಸಬಹುದು. ಆದರೆ ತನಿಖಾಧಿಕಾರಿ ಅಲ್ಲ ಎಂದು ದರ್ಶನ್ ಪರ ಹಿರಿಯ ವಕೀಲ ಕೆಎನ್ ಫಣಿಂದ್ರ ವಾದ ಮಂಡಿಸಿದರು. ಈ ವೇಳೆ ನ್ಯಾಯಾದೀಶರು ನಾಳೆ ಮಧ್ಯಾಹ್ನ ೨:೩೦ ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.