ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಬಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದು ಸುಮಾರು ೨ ಲಕ್ಷರೂಪಾಯಿಗಳ ನಷ್ಟ ಸಂಭವಿಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ನಿವಾಸಿ ಮಹದೇವಮ್ಮ ಚಿಕ್ಕೇಗೌಡ ಎಂಬುವರ ಮನೆ ಮಳೆಗೆ ಕುಸಿದು ಬಿದ್ದಿದ್ದು ಇದರಿಂದ ಮನೆಲ್ಲಿದ್ದ ಪಾತ್ರೆಗಳು, ದಿನಸಿ ಸಾಮಗ್ರಿಗಳು,ಬಟ್ಟೆ ಬರೆ ಹಾನಿಗೊಳಗಾಗಿವೆ ಘಟನೆ ನಡೆದಾಗ ಮನೆಯಲ್ಲಿದ್ದವರು ಮನೆಯಿಂದ ಹೊರ ಬಂದ ಪರಿಣಾಮವಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಈ ಘಟನೆಯಿಂದ ಸರೋಜಮ್ಮ ದೇವೇಗೌಡ ಅವರು ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಸಾಲಿಗ್ರಾಮ ತಾಲೂಕು ಅಡಳಿತ ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕುಪ್ಪೆ ಗ್ರಾ.ಪಂ.ಸದಸ್ಯ ಸಿ.ಬಿ.ಧರ್ಮ ಒತ್ತಾಯಿಸಿದ್ದಾರೆ.
