Saturday, April 19, 2025
Google search engine

Homeಅಪರಾಧರಾಜಸ್ಥಾನದ ಬಿಕಾನೇರ್​ ನಲ್ಲಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು

ರಾಜಸ್ಥಾನದ ಬಿಕಾನೇರ್​ ನಲ್ಲಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು

ರಾಜಸ್ಥಾನ:  ಬಿಕಾನೇರ್ ​ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಬಿಕಾನೇರ್ ​ನ ಮಹಾಜನ್ ​ನ ಜೈತ್​ ಪುರ ಟೋಲ್​ ಬಳಿ ಅಪಘಾತ ಸಂಭವಿಸಿದ್ದು, ಮೃತರು ಹನುಮಾನ್‌ ಗಢ್‌ ನ ದಬ್ವಾಲಿ ನಿವಾಸಿಗಳಾಗಿದ್ದು, ಹರ್ಯಾಣದ ನಂಬರ್​ ಪ್ಲೇಟ್ ಹೊಂದಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಮೃತರನ್ನು ಆರತಿ, ದುಬ್ಬು, ಭೂಮಿಕಾ, ನೀರಜ್ ಕುಮಾರ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸಿಕ್ಕಿಬಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು.

ಅಪಘಾತದ ವೇಳೆ ಇಬ್ಬರು ಪ್ರಯಾಣಿಕರು ಕಾರಿನಿಂದ ಹೊರಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿದೆ. ಹನುಮಾನ್​ಗಢದಿಂದ ಬಿಕಾನೇರ್​ ಕಡೆಗೆ ಹೋಗುತ್ತಿದ್ದ ಕಾರೊಂದು ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ, ಆ ರಭಸಕ್ಕೆ ಕಾರು ಹಾರಿ ಹೋಗಿತ್ತು.

ಮಹಾಜನ್ ಪೊಲೀಸರು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸ್ಥಳಕ್ಕೆ ಆಗಮಿಸಿದ್ದಾರೆ. ಕಾರು ವೇಗವಾಗಿತ್ತು ಅಷ್ಟೇ ಅಲ್ಲದೆ ರಾತ್ರಿಯಾಗಿತ್ತು, ಚಾಲಕನಿಗೆ ಟ್ರಕ್ ಮುಂದೆ ಹೋಗುತ್ತಿರುವುದು ಕಾಣಿಸಿರಲಿಲ್ಲ. ಇದರಿಂದಾಗಿ ಅವಘಡ ಸಂಭವಿಸಿದೆ. ಕುಡಲೇ ಅಂಬ್ಯುಲೆನ್ಸ್​ ಅಲ್ಲಿಗೆ ತಲುಪಿತ್ತು ಈ ಅಪಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದವರನ್ನು ಕ್ರೇನ್ ಬಳಸಿ ಹೊರತೆಗೆದಾಗ ಒಬ್ಬ ಬಾಲಕಿ ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದರು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯೂ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ದಬ್ವಾಲಿ ತಹಸಿಲ್ ನಿವಾಸಿಗಳು.

RELATED ARTICLES
- Advertisment -
Google search engine

Most Popular