ಮೈಸೂರು: ಊಂಚಿ ಉಡಾನ್ ಯೋಜನೆಯಡಿ ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಭಾರತ್ ಕೇರ್ಸ್ ಸಂಸ್ಥೆಯ ಪ್ರಜ್ವಲ್ ತಿಳಿಸಿದರು.
ನಗರದಲ್ಲಿ ಸಾಯ್ಲ್ ಫೌಂಡೇಷನ್, ಭಾರತ್ ಕೇರ್ಸ್ ಹಾಗೂ ವಾಸ್ತು ಫೈನಾನ್ಸ್ ಸಹಯೋಗದಲ್ಲಿ ಊಂಚಿ ಉಡಾನ್ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ಯೋಜನೆಯಡಿಯಲ್ಲಿ ಮೈಸೂರು ನಗರದ ನೂರು ಜನ ಸ್ವಯಂ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಉದ್ಯಮ ನಿರ್ವಹಣೆ, ಆರ್ಥಿಕ ಸಾಕ್ಷರತೆ ಸೇರಿದಂತೆ ಹಲವು ಅವಶ್ಯಕ ವಿಚಾರಗಳ ಬಗ್ಗೆ ಹತ್ತು ದಿನಗಳ ತರಬೇತಿ ನೀಡಲಾಗುತ್ತದೆ. ಬಳಿಕ ಯಶಸ್ವಿಯಾಗಿ ತರಬೇತಿ ಮುಗಿಸಿದ ಅರ್ಹ ಫಲಾನುಭವಿಗಳಿಗೆ ಅವರ ಉದ್ಯಮ ನಡೆಸಲು ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಲಾಗುವುದು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.