Sunday, April 20, 2025
Google search engine

Homeಅಪರಾಧಗಣೇಶನ ವಿಗ್ರಹವನ್ನು ತಾನೇ ಒಡೆದು, ಮುಸ್ಲಿಂ ಯುವಕರ ಮೇಲೆ ದೂರು ದಾಖಲಿಸಿದ ಅರ್ಚಕ

ಗಣೇಶನ ವಿಗ್ರಹವನ್ನು ತಾನೇ ಒಡೆದು, ಮುಸ್ಲಿಂ ಯುವಕರ ಮೇಲೆ ದೂರು ದಾಖಲಿಸಿದ ಅರ್ಚಕ

ಸಿದ್ಧಾರ್ಥನಗರ: ಗಣಪತಿ ವಿಗ್ರಹವನ್ನು ತಾನೇ ಭಿನ್ನಗೊಳಿಸಿ, ನಂತರ ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೇಲೆ ಅರ್ಚಕನೊಬ್ಬನ ಆರೋಪ ಹೊರಿಸಿದ ಘಟನೆ ಉತ್ತರ ಪ್ರದೇಶದ ತೌಲಿಹವಾಹ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕೃಚ್ ರಾಮ್ ಎಂಬ ಹೆಸರಿನ ಅರ್ಚಕ ಜುಲೈ ೧೬ರಂದು ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕಥೇಲಾ ಸಮಯಮತ ಪೊಲೀಸ್ ಠಾಣೆಯಲ್ಲಿ ಮನ್ನನ್ ಮತ್ತು ಸೋನು ಎಂಬ ಇಬ್ಬರು ಮುಸ್ಲಿಂ ವ್ಯಕ್ತಿಗಳು ತೌಲಿಹವಾಹ್ ಗ್ರಾಮದಲ್ಲಿರುವ ದೇವಸ್ಥಾನದ ಗಣೇಶ ವಿಗ್ರಹವನ್ನು ಮುರಿದಿದ್ದಾರೆ ಎಂದು ಆರೋಪಿಸಿದ್ದ.
ಅಷ್ಟೇ ಅಲ್ಲದೇ ಆರೋಪಿಗಳು ನನಗೆ ಪೂಜೆ ಮಾಡಲು ಬಿಡುವುದಿಲ್ಲ. ದಿನ ನಿತ್ಯ ಹಿಂಸೆ ಕೊಡುತ್ತಾರೆ, ಹಲ್ಲೆ ನಡೆಸುತ್ತಾರೆ, ನನ್ನ ಪತ್ನಿ ಮಧ್ಯಪ್ರವೇಶಿಸಿದ್ದಕ್ಕೆ ಆಕೆಯ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ.

ಅರ್ಚಕನ ದೂರಿನನ್ವಯ ಎಫ್ ಐಆರ್ ದಾಖಲಿಸಿದ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಗಣಿಸಿ ತನಿಖೆಯನ್ನು ಶುರು ಮಾಡಿದರು. ಈ ವೇಳೆ ಈ ವೇಳೆ ಗಣೇಶ ಮೂರ್ತಿಯನ್ನು ಒಡೆದಿರುವುದು ಮುಸ್ಲಿಂ ವ್ಯಕ್ತಿಗಳಲ್ಲ, ಬದಲಾಗಿ ಪೂಜಾರಿಯೇ ಎಂಬುವುದು ಗೊತ್ತಾಗಿದೆ.

ವಿಚಾರಣೆಯ ವೇಳೆ ಅರ್ಚಕ ವೈಯಕ್ತಿಕ ದ್ವೇಷದ ಹಿನ್ನಲೆ ಈ ರೀತಿ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ವಿರುದ್ಧ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular