ಮಂಡ್ಯ: bಧಾರಾಕಾರ ಮಳೆಗೆ ಕೆ.ಆರ್.ಎಸ್ ಡ್ಯಾಂ ಭರ್ತಿಯಾಗಲು ಕೆಲವೇ ಅಡಿಗಳು ಬಾಕಿ ಇದ್ದು, ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.
ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸುವ ಬಗ್ಗೆ ಕಾ.ನೀ.ನಿ. ಎಚ್ಚರಿಕೆ ನೀಡಿದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ನೀರು ಬಿಡುವ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಜಲಾಶಯ ಸುರಕ್ಷಿತೆಯ ದೃಷ್ಟಿಯಿಂದ ನದಿಗೆ 10 ಸಾವಿರದಿಂದ 25 ಸಾವಿರ ಕ್ಯೂಸೆಕ್ ವರೆಗೂ ನೀರು ಬಿಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡ್ಯಾಂ ಕೆಳಗಿನ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.
ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೋಣಿ ವಿಹಾರ ಬಂದ್ ಮಾಡಲಾಗಿದೆ.