ಹುಣಸೂರು: ನಗರದ ಮುತ್ತುಮಾರಮ್ಮನ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ಎರಡನೇ ಆಷಾಢ ಶುಕ್ರವಾರದ ಪೂಜಾಕೈಂಕರ್ಯ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆ ಬೆಳಿಗ್ಗೆ 6 ರಿಂದಲೇ ದೇವಿಯ ಸಾವಿರಾರು ಮಹಿಳಾ ಭಕ್ತರು ನಿಂಬೆಹಣ್ಣಿನ ತುಪ್ಪದ ದೀಪ ಹಚ್ಚಲು ಭಕ್ತಿ ಭಾವದಿಂದ ಸಾಲುಗಟ್ಟಿ ನಿಂತಿದ್ದು, ನೀರೆಯರದೇ ಪಾಲು ಹೆಚ್ಚಾಗಿತ್ತು.
ಹಾಗೆ ಸಂಜೆ ತಾಯಿ ಚಾಮುಂಡಿ ಉತ್ಸವ ಮೂರ್ತಿಯ ಮೆರವಣಿಗೆ ಇರುತ್ತದೆ. ಹಾಗೆ ಮುಂದಿನ ಮೂರನೆ ಆಷಾಡ ಶುಕ್ರವಾರದಂದು ಐದು ಸಾವಿರ ಭಕ್ತರಿಗೆ ಲಾಡು ನೀಡಲು ಸಮಿತಿಯ ಸಹಕಾರ್ಯದರ್ಶಿ ಅಶೋಕ್ ರಾಜಲಿಂಗಯ್ಯ ನೀಡಿದ್ದಾರೆ ಎಂದರು.
ಅಲ್ಲೇ ದೇವರ ಸನ್ನಿಧಿಗೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗವಿರುತ್ತೆ. ಈಗಾಗಲೇ ಮುತ್ತುಮಾರಮ್ಮನಿಗೆ ಭಕ್ತಾಧಿಗಳು ನೀಡಿದ ಬೆಳ್ಳಿರಥ ನಿರ್ಮಾಣದ ಹಂತದಲ್ಲಿದ್ದು, ಮುಂದೆಯೂ ಭಕ್ತಾಧಿಗಳು ನೆರವಾಗಬೇಕು ಎಂದು ಮುತ್ತುಮಾರಮ್ಮನ ಸಮಿತಿಯ ಅಧ್ಯಕ್ಷ ಹೆಚ್.ವೈ . ಮಹದೇವ್ ಮನವಿ ಮಾಡಿದ್ದಾರೆ.
ಕಾರ್ಯದರ್ಶಿ ಈಶ್ವರ್, ಸಹಕಾರ್ಯದರ್ಶಿ ಅಶೋಕ ರಾಜಲಿಂಗಯ್ಯ, ಖಜಾಂಚಿ ಗುಂಡುಮಣಿ, ನಿರ್ದೇಶಕ ಗಿರೀಶ್ ಕುಮಾರ್ ಎಸ್. ನರಸಿಂಹಯ್ಯ ಇದ್ದರು.