ಮಂಡ್ಯ: ಜಿಲ್ಲಾ ಹಾಪ್’ಕಾಮ್ಸ್ ನ ನೂತನ ಅಧ್ಯಕ್ಷರಾಗಿ ಉಮ್ಮಡಹಳ್ಳಿ ಯು.ಸಿ.ಶೇಖರ್, ಉಪಾಧ್ಯಕ್ಷರಾಗಿ ಬೋಜನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಿಕಟಪೂರ್ವ ಅಧ್ಯಕ್ಷ ಡಿ.ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷ ಕಾಳಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ.
17 ಸದಸ್ಯ ಬಲದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಉಮ್ಮಡಹಳ್ಳಿ ಯು.ಸಿ.ಶೇಖರ್ ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ವೇಳೆ ಹಾಪ್’ಕಾಮ್ಸ್ ನಿರ್ದೇಶಕರಾದ ನಾಗೇಂದ್ರ, ಸಿದ್ದರಾಮಯ್ಯ, ಮಹೇಶ್, ತಮ್ಮಣ್ಣ ಹಾಗೂ ಮನ್’ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಸೂರಿ ಭಾಗಿಯಾಗಿದ್ದರು.
ನೂತನ ಅಧ್ಯಕ್ಷರಿಗೆ ಹಲವರು ಶುಭ ಕೋರಿದರು.