ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಪಟ್ಟಣದ ಪುರಸಭೆ ವಾಣಿಜ್ಯ ಮಳಿಗೆಗಳನ್ನು ಫೆ.29 ರಂದು ಆನ್ ಲೈನ್ ಮೂಲಕ ಹರಾಜಾಗಿರುವ ಬಿಡ್ ದಾರರಿಗೆ ಇನ್ನೂ ಮಳಿಗೆಗಳನ್ನು ನೀಡದೆ 36 ವರ್ಷಗಳಿಂದ ಪುರಸಭೆ ಮಳಿಗೆಗಳಲ್ಲಿ ವಹಿವಾಟು ಮಾಡುತ್ತಿರುವ ಹಳೆ ಮಳಿಗೆ ದಾರರಿಗೆ ಕೊಡುತ್ತಿರುವ ಹುನ್ನಾರ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಆಕ್ರೋಶ ಹೊರ ಹಾಕಿದರು.
ಪಟ್ಟಣ ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿ ಮಾತನಾಡಿದ ಅವರು ಯಶಸ್ವಿ ಬಿಡ್ ದಾರರಿಗೆ ಮಳಿಗೆಯನ್ನು ಹಸ್ತಾಂತರ ಮಾಡದೆ ಒಂದು ತಿಂಗಳಿಗೆ 24 ಲಕ್ಷ ಪುರಸಭೆಗೆ ಲಾಭ ಆಗುತ್ತಿದ್ದು ಇದರಿಂದ ಪುರಸಭೆಗೆ ಬಾರಿ ನಷ್ಟ ಉಂಟಾಗಿದೆ ಎಂದು ಹೇಳಿದರು.
ಈ ಸಂಬಂಧ ಎಲ್ಲಾ ಅಧಿಕಾರಿಗಳಿಗೆ ಹಾಗೂ ಹಳೆ ಜಿಲ್ಲಾಧಿಕಾರಿಗಳಿಗೂ ಹಲವಾರು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಈ ಬಗ್ಗೆ ಈ ಪ್ರಕ್ಯೂರ್ ಮೆಂಟ್ ಹರಾಜಿನಲ್ಲಿ ಇಲ್ಲದೆಂತಹ ಹೊಸ ಕಾನೂನು ಹೇಳುತ್ತಿದ್ದು ಪುರಸಭೆ ಮುಖ್ಯ ಅಧಿಕಾರಿ ಜಯಣ್ಣನವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾನೂನು ಬದ್ದವಾಗಿ ಹರಾಜು ಮಾಡಿದ್ದು ಅದರಲ್ಲಿ ನಾವು ಯಶಸ್ವಿ ಬಿಡ್ಡುದಾರರಾಗಿದ್ದು ಈ. ಪ್ರಕ್ಯೂರ್ ಮೆಂಟಿನ ಎಲ್ಲಾ ಷರತ್ತು ಗಳಿಗೆ ಬದ್ಧರಾಗಿದ್ದು ಕೇವಲ ಆರು ದಿನಗಳಲ್ಲಿ ಮಳಿಗೆಗಳನ್ನು ಹಸ್ತಾಂತರಿಸುದಾಗಿ ಹೇಳಿ ಅದರಂತೆ ನಮಗೆ ಮಳಿಗೆಗಳು ನೀಡದೆ ಕೇವಲ ನೀತಿ ಸಂಹಿತೆಯ ಕಾರಣ ಹೇಳಿ ಸುಳ್ಳು ಹೇಳುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಬೀಗ ಹಾಕಿರುವ ಮಳಿಗೆಗಳ ಮುಂದೆ ವ್ಯಾಪಾರ ವಹಿವಾಟು ಮಾಡಲು ಅನುವು ಮಾಡಿ ಕೊಟ್ಟು ಹಾಗೂ ವಿದ್ಯುತ್ ಸಂಪರ್ಕದ ಕಡಿತದ ಜೊತೆಗೆ ಆ ಮಳಿಗೆಗಳಿಗೆ ಬೀಗ ಹಾಕಿರುವ ಹಾಗೆ ನಾಟಕವನ್ನು ಮಾಡಿ ಬೀಗದ ಕೈಗಳನ್ನು ಆಯಾ ಮಳಿಗೆದಾರರಿಗೆ ಕೊಟ್ಟಿರುವ ಘಟನೆ ಜರುಗಿದೆ.ಈ ಹಳೆಯ ಸುಮಾರು 72 ಮಳಿಗೆ ದಾರದಿಂದ 2 ಕೋಟಿ 70ಲಕ್ಷಕ್ಕೂ ಅಧಿಕ ಹಣ ವಸೂಲು ಮಾಡಿ ಲಂಚದ ರೂಪದಲ್ಲಿ ಎಲ್ಲಾ ಅಧಿಕಾರಿಗಳಿಗೂ ಮತ್ತು ಪುರಸಭೆ ಸದಸ್ಯರಿಗೆ ಕೂಡ ನೀಡಿರುವ ಬಗ್ಗೆ ಗಾಳಿ ಸುದ್ದಿ ಹರಡಿದೆ ಎಂದು ಆರೋಪಿಸಿದರು.
ಹರಾಜು ಪ್ರಕ್ರಿಯೆ ನಡೆದು ಆರು ತಿಂಗಳಾದರೂ ಕೂಡ ಮಳಿಗೆಗಳನ್ನು ಏಕೆ ನೀಡುತ್ತಿಲ್ಲ ಇದರಲ್ಲಿ ಹಳೆ ಮಳಿಗೆ ದಾರರಿಗೆ ಅನುಕೂಲ ಮಾಡಿಕೊಡುತ್ತಿರುವ ಸಂಶಯವೂ ಕೂಡ ನಮಗಿದೆ.ಈ ಎಲ್ಲಾ ಅವ್ಯವಹಾರಕ್ಕೆ ಮುಖ್ಯ ಕಾರಣ ಪುರಸಭೆ ಮುಖ್ಯ ಅಧಿಕಾರಿ ಅವರೇ ನೇರ ಕಾರಣವೆಂದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಕೆ.ರವಿಂದ್ರ, ನಟೇಶ್, ಬಂಗಾರಿ, ಹರೀಶ್, ಅನುಷ್, ಪ್ರದೀಪ್, ಕೃಷ್ಣಚಾರಿ, ಹೆಚ್.ಡಿ.ಸುನೀಲ್, ಮಂಜುನಾಥ್, ಕೆ.ಸುನೀಲ್. ಮತ್ತು ವಿಜಯ ಸೇರಿದಂತೆ ಇನ್ನಿತರರು ಹಾಜರಿದ್ದರು.