ಮತ್ತೆ ಹಳೇ ದೋಸ್ತಿಗೆ ಸಾಕ್ಷಿಯಾದ ಎಚ್ಡಿಕೆ ಕೃತಜ್ಞತಾ ಸಮಾವೇಶ
ಕೆ.ಆರ್.ಪೇಟೆ: ಕೆ. ಆರ್ ಪೇಟೆಯಲ್ಲಿ ಎಚ್ಡಿಕೆ ಕೃತಜ್ಞತೆ ಸಮಾರಂಭ ಆಯೋಜಿಸಲಾಗಿತ್ತು. ಜ್ಯೋತಿ ಬೆಳಗುವ ಮೂಲಕ ವೇದಿಕೆ ಸಮಾರಂಭಕ್ಕೆ ಎಚ್ಡಿಕೆ ವಿದ್ಯುಕ್ತ ಚಾಲನೆ ನೀಡಿದರು. ವೇದಿಕೆ ಬಳಿ ಹೆಚ್‍ಡಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ದಳ- ಕಮಲ ಕಾರ್ಯಕರ್ತರು ಜೈಕಾರ ಕೂಗಿದರು.

ಶಿಳ್ಳೆ ಚಪ್ಪಾಳೆ ಮೂಲಕ ಕಾರ್ಯಕರ್ತರು ಸ್ವಾಗತ ಕೋರಿದರು. ವೇದಿಕೆ ಏರುವ ಮುನ್ನ ಎಚ್ ಡಿ ಕುಮಾರಸ್ವಾಮಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. ಕುಮಾರಸ್ವಾಮಿ ಬರುವವರೆಗೂ ಕಾದು ನಿಂತು ಜನರು ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಪಡೆದು ಕೇಂದ್ರ ಸಚಿವ ಕುಮಾರಸ್ವಾಮಿ ಜನರ ಬಳಿ ತಮ್ಮ ಸಮಸ್ಯೆಗಳ ಬಗ್ಗೆ ಕೇಳಿದರು. ನಂತರ ಕೃತಜ್ಞತಾ ಸಭೆಯಲ್ಲಿ ಮತಕೊಟ್ಟು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಕೇಂದ್ರ ಸಚಿವ ಎಚ್ಡಿಕೆ ಮಾತನಾಡಿ, ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮಳೆ ಆಗಿದೆ. ಕೆಲವು ಕಡೆ ಹೆಚ್ಚು ಮಳೆ ಆಗಿ ಅನಾಹುತ ಕೂಡ ಆಗಿದೆ. ಮಳೆಯಿಂದ ಮಂಡ್ಯ ಜಿಲ್ಲೆ ಸೇರಿ ಈ ಭಾಗದ ಜಲಾಶಯಗಳು ಭರ್ತಿ ಆಗಿವೆ ಎಂದರು. ನಂತರ ಸರ್ವಪಕ್ಷ ಸಭೆಗೆ ಹೋಗದ್ದಕ್ಕೆ ಹೆಚ್ ಡಿ ಕೆ ಮಾತನಾಡಿ , ಭಾನುವಾರ ಸಭೆ ಕರೆದು ಶನಿವಾರ ನೀರು ಬಿಟ್ಟಿದ್ದು ಸಭೆ ಕಾಟಚಾರಕ್ಕೆ ಅನ್ನುವಂತಿದೆ. ನನಗೆ ಕೈ ನಾಯಕರು ಸವಾಲು ಹಾಕಿದ್ದಾರೆ CWRC& CWMA ರದ್ದು ಮಾಡಲಿ ಅಂತಾ. ನಾನು ಜನರ ಸೇವೆಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಸಂಸದನಾಗಿ ಮಾಡಿದ ಈ ಜಿಲ್ಲೆಯ ಜನತೆಗೆ ಸದಾ ಕೃತಜ್ಞನಾಗಿರುತ್ತೇನೆ. ದೇಶದ ಪ್ರಧಾನಿ ನನಗೆ ಎರಡು ಪ್ರಮುಖ ಖಾತೆಗಳನ್ನು ಕೊಟ್ಟಿದ್ದಾರೆ. ಅದಕ್ಕೆ ಕಾರಣವಾಗಿದ್ದು ನೀವು ಕೊಟ್ಟ ಗೆಲುವಿನ ಶಕ್ತಿ ಮತ್ತು ಈ ಪಕ್ಷದ ಕಾರ್ಯಕರ್ತರ ಶಕ್ತಿ. HMT ಕಾರ್ಖಾನೆ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿತ್ತು. ಸಂಪೂರ್ಣವಾಗಿ ಮುಚ್ಚಿಸಿದ್ದಾರೆ, 13 ಸಾವಿರ ಕುಟುಂಬ ಬದುಕುತಿದ್ದ ಕಾರ್ಖಾನೆ.ಬದುಕಿದ್ದರೆ 25 ಸಾವಿರ ಕೋಟಿ ಲಾಭಾಂಶ ಬರುತ್ತಿತ್ತು. ಕಾರ್ಖಾನೆಗಳನ್ನ ಮತ್ತೆ ಪುನಶ್ಚೇತನ ಗೊಳಿಸಲು ಭೇಟಿ ಕೊಟ್ಟಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ಅವಕಾಶ ಒದಗಿ ಬಂದಿದೆ. ವಿಷಯ ಸಂಗ್ರಹ ಮಾಡುವ ಕೆಲಸ. ಮಂಡ್ಯ ಜಿಲ್ಲೆಯಲ್ಲಿ ಕೃಷಿ ನಂಬಿ ಯುವಕರು ಬದುಕಲು ಆಗಲ್ಲ. ಕಾರ್ಖಾನೆಗಳನ್ನ ತರುವ ಕೆಲಸ ಮಾಡ್ತೇನೆ ಎಂದರು.
ಮಂಡ್ಯಕ್ಕೆ ಯಾಕೆ ಬರ್ತಾರೆ ಅಂತ ಟೀಕೆ ಮಾಡ್ತಾರೆ. ಅಧಿಕಾರಿಗಳಿಗೆ ನಿರ್ಬಂಧ ಹೇರಿ ಆದೇಶ ಮಾಡ್ತಾರೆ. ಇದಕ್ಕೆಲ್ಲ ಆದೇಶ ಮಾಡುವವರು ವಿಧಾನ ಸೌದದಲ್ಲಿ ಸಭೆಗೆ ಕರೆಯುವ ನೈತಿಕತೆ ಇವಾರಿದ್ಯಾ? ನನ್ನ ಕಣ್ಣಲ್ಲಿ ರಕ್ತ ಬರುತ್ತಿದೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ತಮಿಳುನಾಡು ಕರ್ನಾಟಕದ ನೀರಿನ ಹಂಚಿಕೆ ವಿವಾದ ಇದೆ. ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸುವ ಕೆಲಸ. ನೀರಾವರಿ ಬಗ್ಹೆ ಸಂಪೂರ್ಣ ಜ್ಞಾನ ಹೊಂದಿರುವ ವ್ಯಕ್ತಿ ದೇವೇಗೌಡ್ರು. ಅವರು ಇನ್ನು ಬದುಕಿದ್ದಾರೆ ಅವರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಯುತ್ತೆ. ಪಕ್ಷ ಳಿಸಿಕೊಟ್ಟಿದ್ದಿರಿ ರೈತರಿಂದ ಉಳಿದಿರುವ ಪಕ್ಷ ರೈತರಿಗಾಗಿ ಇರುವ ಪಕ್ಷ. ಮಂಡ್ಯದಲ್ಲಿ ಚುನಾವಣೆಗೆ ನಿಂತು ಆಶೀರ್ವಾದ ಮಾಡಿದ್ದಿರಿ. ಭಗವಂತನ ಶಕ್ತಿ ಇದೆ. ಕುಮಾರಸ್ವಾಮಿ ರಾಜಕೀಯ ಭವಿಷ್ಯ ಮುಗಿತು ಅಂದ್ರು.
ಇವತ್ತು ಅವರೆಲ್ಲ ನಿದ್ದೆಗೆಟ್ಟಿದ್ದಾರೆ.
ಒಂದೇ ದಿನದಲ್ಲಿ ಪರಿಹರಿಸುವ ಸಮಸ್ಯೆ ಕಾವೇರಿದ್ದಲ್ಲ;
ಕಾವೇರಿ ಸಮಸ್ಯೆಯನ್ನು ಒಂದೇ ದಿನದಲ್ಲಿ ತೀರ್ಮಾನ ಮಾಡಲು ಆಗದು. ಭಾರತದ ಸಂವಿಧಾನದ ಒಕ್ಕೂಟದ ವ್ಯವಸ್ಥೆಯಡಿ ತೀರ್ಮಾನ ಮಾಡಬೇಕಾಗುತ್ತಿದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಇದನ್ನು ನ್ಯಾಯಕೊಡಿಸುವ ಕೆಲಸ ಮಾಡುತ್ತೇನೆ. ನನಗೆ ಗೊತ್ತಿಗೆ ಕಾವೇರಿಗಾಗಿ ನೀವು ರಕ್ತ ಹರಿಸಿದ್ಸೀರಿ… ಇದು ದಶಕಗಳ ಕಾಲದ ಸಮಸ್ಯೆ ಮುಂದೆ ಇದನ್ನ ಜಾಣ್ಮೆಯಿಂದ ಬಗೆ ಹರಿಸಬೇಕಾಗುತ್ತೆ. ದೇವೇಗೌಡರ ನೀರಾವರಿ ಅನುಭವದ ಜ್ಞಾನದಿಂದ ಇದನ್ನು ಬಗೆ ಹರಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಭೆಯಲ್ಲಿ ಕೆ ಸಿ ನಾರಾಯಣಗೌಡ ,ಸಾರಾ ಮಹೇಶ್, ಶಾಸಕ ಎಚ್ ಡಿ ಮಂಜು, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ಮಾಜಿ ಶಾಸಕರಾದ ಡಾಕ್ಟರ್ ಕೆ.ಅನ್ನದಾನಿ, ಸುರೇಶ್ ಗೌಡ ರವೀಂದ್ರ ಶ್ರೀಕಂಠಯ್ಯ, ಕೆ ಟಿ ಶ್ರೀಕಂಠೇಗೌಡ ,ಜಿಲ್ಲಾಧ್ಯಕ್ಷ ಟಿ ರಮೇಶ್ ,ಎಸ್. ಪಿ ಸ್ವಾಮಿ ಮತ್ತಿತರರು ಸಾಥ್ ನೀಡಿದರು.