Thursday, April 17, 2025
Google search engine

Homeಅಪರಾಧನಾನು ಪೊಲೀಸ್ ಹಣ ನೀಡದಿದ್ದರೆ ಅತ್ಯಾಚಾರ ಮಾಡುವೆ ಎಂದು ಬೆದರಿಸಿ ಮಹಿಳಾ ಥೆರಪಿಸ್ಟ್ ​ಗೆ ವಂಚಿಸಿದವನ...

ನಾನು ಪೊಲೀಸ್ ಹಣ ನೀಡದಿದ್ದರೆ ಅತ್ಯಾಚಾರ ಮಾಡುವೆ ಎಂದು ಬೆದರಿಸಿ ಮಹಿಳಾ ಥೆರಪಿಸ್ಟ್ ​ಗೆ ವಂಚಿಸಿದವನ ಬಂಧನ

ಬೆಂಗಳೂರು: ನಾನೊಬ್ಬ ಪೊಲೀಸ್ ಎಂದು ನಂಬಿಸಿ ಮಹಿಳಾ ಮಸಾಜ್ ಥೆರಪಿಸ್ಟ್  ಬಳಿ ಸುಲಿಗೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹೇಂದ್ರ ಕುಮಾರ್(33) ಬಂಧಿತ ಆರೋಪಿ.

ಮಸಾಜ್​ಗಾಗಿ ಜುಲೈ 3 ರಂದು ಆರೋಪಿ ಮಹೇಂದ್ರ ಕುಮಾರ್, ತನ್ನ‌ ಹೆಸರು ಸುರೇಶ್ ಎಂದು ಆನ್ಲೈನ್ ಮೂಲಕ 25 ವರ್ಷದ ಥೆರಪಿಸ್ಟ್ ಬುಕ್ ಮಾಡಿದ್ದ. ಥೆರಪಿಸ್ಟ್​ನನ್ನು ರಾಮಮೂರ್ತಿ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಕರೆಸಿದ್ದ. ರಾತ್ರಿ‌ 10;30ರ ಸುಮಾರಿಗೆ ಮಹಿಳಾ ಥೆರಪಿಸ್ಟ್ ಸ್ಥಳಕ್ಕೆ ಬಂದಿದ್ದು ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಒಂದು ಕಿ.ಮೀ. ಹೋದ ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದ.

ತಾನು ಪೊಲೀಸ್ ಎಂದು ಹೇಳಿ 10 ಲಕ್ಷ ಹಣ ನೀಡಬೇಕು, ಇಲ್ಲ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾರೆ. ಬಳಿಕ ಯುವತಿಯ ಸ್ನೇಹಿತನಿಂದ ಮಹೇಂದ್ರನಿಗೆ 1 ಲಕ್ಷದ 50 ಸಾವಿರ ಹಣ ವರ್ಗಾವಣೆ ಆಗಿದೆ. ನಂತರ ಯುವತಿಯನ್ನು ಇಡೀ ರಾತ್ರಿ‌ ಹೆಬ್ಬಾಳ ಸೇರಿ ಹಲವೆಡೆ ಸುತ್ತಾಡಿಸಿದ್ದ ಆರೋಪಿ, ಬೆಳಗಿನ ಜಾವ ಏರ್ಪೋರ್ಟ್ ಬಳಿ ಇಳಿಸಿ ನಿನ್ನ ಊರಿಗೆ ಹೋಗಬೇಕು ಇಲ್ಲ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ.

ಸದ್ಯ ಈಗ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ಮಹೇಂದ್ರ ಈ ರೀತಿ ಸುಲಿಗೆ ಮಾಡುವುದನ್ನೂ ಕಾಯಕ ಮಾಡಿಕೊಂಡಿದ್ದ. ಈತ ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಸುಲಿಗೆಗೆ ಇಳಿದಿದ್ದ. ಬಂಧನದ ನಂತರ ಈ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಮಾರತ್ತಳ್ಳಿ, ಪುಲಿಕೇಶಿ ನಗರ ಠಾಣೆಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular