Saturday, April 19, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ನದಿಯಲ್ಲಿ ಪ್ರವಾಹ ಹಿನ್ನಲೆ:ಸೇತುವೆ ಮೇಲಿಂದ ಅಸ್ಥಿ ವಿಸರ್ಜನೆ

ಕಾವೇರಿ ನದಿಯಲ್ಲಿ ಪ್ರವಾಹ ಹಿನ್ನಲೆ:ಸೇತುವೆ ಮೇಲಿಂದ ಅಸ್ಥಿ ವಿಸರ್ಜನೆ

ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಶ್ರೀರಂಗಪಟ್ಟಣದ ಪ್ರಮುಖ ಪಿಂಡ ತರ್ಪಣ ಸ್ಥಳಗಳು ಜಲಾವೃತಗೊಂಡಿದೆ. ಶ್ರೀರಂಗಪಟ್ಟಣದ ಪ್ರಮುಖ ಶ್ರಾದ್ದಕಾರ್ಯದ ಪಶ್ವಿಮ ವಾಹಿನಿ, ಸ್ನಾನಘಟ್ಟ, ಘೋಸಾಯ್ ಘಾಟ್, ಸಂಗಮ ಕೇಂದ್ರಗಳು ಜಲಾವೃತಗೊಂಡಿವೆ.

ಪಶ್ಚಿಮವಾಹಿನಿ, ಗೋಸಾಯಿಘಾಟ್‌, ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಇತರ ಕಾರ್ಯಗಳನ್ನು ನಿಷೇಧಿಸಲಾಗಿದೆ. ಜಲಾವೃತದಿಂದಾಗಿ ಪಿಂಡ ತರ್ಪಣ ಬಿಡಲು ಮೃತರ ಸಂಬಂಧಿಕರ ಪರದಾಡುತ್ತಿದ್ದಾರೆ . ಅಲ್ಲದೆ ಮೃತರ ಅಸ್ಥಿ ಗೆ ಪೂಜೆ ಸಲ್ಲಿಸಿ ಸೇತುವೆ ಮೇಲಿಂದ ಅಸ್ಥಿ ವಿಸರ್ಜಿಸುತ್ತಿರುವ ದೃಶ್ಯ ಕಂಡುಬಂದಿತು.

ಹಲವು ಕಡೆ ಕಾವೇರಿ ನದಿ ತಟದಲ್ಲಿ ಜಿಲ್ಲಾಡಳಿತದಿಂದ ಪೊಲೀಸರ ನಿಯೋಜನೆಗೊಳಿಸಲಾಗಿದೆ.

RELATED ARTICLES
- Advertisment -
Google search engine

Most Popular