Sunday, April 20, 2025
Google search engine

Homeಸ್ಥಳೀಯಮೈಸೂರು: ಒಲಂಪಿಯ ಚಿತ್ರಮಂದಿರದ ಕಟ್ಟಡ ಕುಸಿದು ಇಬ್ಬರಿಗೆ ಗಾಯ

ಮೈಸೂರು: ಒಲಂಪಿಯ ಚಿತ್ರಮಂದಿರದ ಕಟ್ಟಡ ಕುಸಿದು ಇಬ್ಬರಿಗೆ ಗಾಯ

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ ಒಲಂಪಿಯ ಚಿತ್ರಮಂದಿರ ಹಿಂಬಾಗದ ಶಿಥಿಲಗೊಂಡಿದ್ದ ಕಟ್ಟಡ ಕುಸಿದುಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತವಾಗಿ ಹಲವು ವರ್ಷಗಳೇ ಉರುಳಿದೆ. ಕಟ್ಟಡದ ಬಗ್ಗೆ ನ್ಯಾಯಾಲಯದಲ್ಲಿ ವಿವಾದವಿದೆ ಎಂದು ಹೇಳಲಾಗಿದೆ.

ಹೀಗಿದ್ದೂ ಕಾಮಗಾರಿ ನಡೆಸಲು ಯತ್ನಿಸಿದ್ದರೆ ಎನ್ನಲಾಗಿದ್ದು, ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದಿದೆ ಎಂಬ ಮಾತುಗಳು ಕೇಳಿಬಂದಿದೆ.

ಕಟ್ಟಡದ ಬಳಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪಾಲಿಕೆ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಕುಸಿದ ಕಟ್ಟಡದ ಅವಶೇಷಗಳನ್ನ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular