Sunday, April 20, 2025
Google search engine

Homeರಾಜ್ಯಜನ ಸಂಖ್ಯೆ ನಿಯಂತ್ರಿಸಿ - ದೇಶದ ಅಭಿವೃದ್ಧಿಗೆ ಸಹಕರಿಸಿ: ಡಾ. ರಾಜು

ಜನ ಸಂಖ್ಯೆ ನಿಯಂತ್ರಿಸಿ – ದೇಶದ ಅಭಿವೃದ್ಧಿಗೆ ಸಹಕರಿಸಿ: ಡಾ. ರಾಜು

ರಾಮನಗರ: ಸೂಕ್ತ ಸಮಯದಲ್ಲಿ ಗರ್ಭಧಾರಣೆ ಹಾಗೂ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ ಎಂಬ ಧ್ಯೇಯದೊಂದಿಗೆ ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳಿಗೆ ಹೆಮ್ಮೆತರುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿ. ಮಂಜುನಾಥ್ ಅವರುಅಭಿಪ್ರಾಯ ಪಟ್ಟರು.

ಅವರು ಜು.೨೨ರ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಮನಗರ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ವಿವಿಧಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ರಾಮನಗರ ಟೌನಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿಜಿಲ್ಲಾ ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆ -೨೦೨೪ ರ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ರಾಜುಅವರು ಪ್ರಾಸ್ತಾವಿಕವಾಗಿ ಮಾತನಾಡಿ, ೧೯೫೨ ರಲ್ಲಿಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ ಎಂದರು. ವಿಶ್ವ ಈಗಾಗಲೇ ತೀವ್ರಗತಿಯ ಜನಸಂಖ್ಯೆಯ ಬೆಳವಣಿಗೆಯಿಂದಾಗಿ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.ಜನಸಂಖ್ಯೆ ಹೀಗೆ ಸ್ಪೋಟಗೊಳ್ಳುತ್ತಿದ್ದರೆ ಭವಿ?ದಲ್ಲಿಇನ್ನೂಜಟಿಲವಾದ ಸಮಸ್ಯೆಗಳು ಉಲ್ಬಣಗೊಳ್ಳುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಬಾಲ್ಯ ವಿವಾಹ, ಅಂತರದ ಹೆರಿಗೆಗೆ ಪ್ರೋತ್ಸಾಹ, ಕುಟುಂಬ ಕಲ್ಯಾಣ ಯೋಜನೆಗಳ ವಿಧಾನಗಳ ಬಳಕೆ ಮಾಡುವುದರಿಂದಜನಸಂಖ್ಯಾ ನಿಯಂತ್ರಣ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿಯುವಜನತೆಯ ಪಾತ್ರಅರಿತುಕೊಂಡುಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಮತ್ತು ಸಮೃದ್ಧಿಯಜೀವನವನ್ನುಆಯ್ಕೆ ಮಾಡಿಕೊಳ್ಳುತ್ತೇವೆಎಂದು ಪ್ರತಿಜ್ಞೆಯನ್ನು ಮಾಡುವ ಮೂಲಕ ಜನ ಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕೆಂದು ತಿಳಿಸಿದರು.

ಜಿಲ್ಲಾಕ್ಷಯರೋಗ ನಿರ್ಮೂಲನಾಧಿಕಾರಿಡಾ. ಕುಮಾರ್‌ಅವರು ಮಾತನಾಡಿ, ವಿಶ್ವಜನಸಂಖ್ಯೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದ್ದುಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರಜವಬ್ಧಾರಿಯಾಗಿರುತ್ತದೆ.ಅಂತರದ ಹೆರಿಗೆತಾತ್ಕಾಲಿಕಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆ, ಶಾಶ್ವತ ಸಂತಾನ ಹರಣ ಶಸ್ತ್ರಚಿಕಿತ್ಸೆ, ಪುರು?ರಿಗಾಗಿ ನೋಸ್ಕಾಲ್ ಪೆಲ್ ವ್ಯಾಸಕ್ಟಮಿಯಂತಹ ಸುಧಾರಿತ ಮತ್ತುಗುಣಾತ್ಮಕ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಪಡೆಯುವ ಮೂಲಕ, ಪ್ರತಿಕುಟುಂಬವೂ ೧-೨ ಮಕ್ಕಳಿಗೆ ಸೀಮಿತವಾಗಬೇಕು.ಈ ಎಲ್ಲಾ ಸೇವಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣಉಚಿತವಾಗಿದೊರೆಯುತ್ತದೆ, ಮತ್ತುಇದರೊಂದಿಗೆಆರ್ಥಿಕ ಸೌಲಭ್ಯಗಳನ್ನೂ ಸರ್ಕಾರ ನೀಡುತ್ತಿದೆ ಎಂದರು.


ವಿಶ್ವಜನಸಂಖ್ಯಾ ದಿನಾಚರಣೆ ಪ್ರಯುಕ್ತ ಪದವಿ ಪೂರ್ವಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪೋಸ್ಟರ್‌ರಚನೆ, ಸಾಕ್ಷ್ಯಚಿತ್ರ (ಕಿರುಚಿತ್ರ) ಹಾಗೂ ವೀಡಿಯೋರೀಲ್ಸ್ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿಡಿ.ಎಂ.ಒಡಾ.ಶಶಿಧರ್, ಡಿ.ಟಿ.ಒಡಾ.ಕುಮಾರ್, ಟಿ.ಹೆಚ್.ಒಡಾ. ಉಮಾ, ವೈದ್ಯಾಧಿಕಾರಿಡಾ. ಹರ್ಷಿತ್, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾಕೆ.ಜೆ, ಕಾಲೇಜಿನಉಪನ್ಯಾಸಕ ವಿಜಯ್, ಕಾಂತರಾಜು, ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕ ನಾಗೇಶ್, ಹಿರಿಯಆರೋಗ್ಯ ಮೇಲ್ವಿಚಾರಣಾಧಿಕಾರಿದಾಸಪ್ಪ, ಹಿರಿಯ ಪ್ರಾಥಮಿಕಆರೋಗ್ಯ ಸುರಕ್ಷತಾಧಿಕಾರಿಉಮಾದೇವಿ, ಪ್ರಿಯಾ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular