ಮಂಡ್ಯ: ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ರಾಗಿ ವಿತರಣೆ ಹಿನ್ನೆಲೆ ಕಳಪೆ ರಾಗಿ ತಿಪ್ಪೆಗೆ ಸುರಿದು ಸರ್ಕಾರ ವಿರುದ್ಧ ಪಡಿತರದಾರರು ಆಕ್ರೋಶ ಹೊರಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನ್ಯಾಯಬೆಲೆ ಅಂಗಡಿ -66 ರಲ್ಲಿ ಸುತ್ತಮುತ್ತಲ ಗ್ರಾಮದ ನೂರಾರು ಫಲಾನುಭವಿಗಳಿಗೆ ಕಳಪೆ ರಾಗಿ ವಿತರಣೆ ಮಾಡಲಾಗಿದೆ.

ನ್ಯಾಯಬೆಲೆ ಅಂಗಡಿ ಮಾಲೀಕ ಕಲ್ಲು,ಧೂಳು, ಸೇರಿದಂತೆ ಇಲಿ, ಹೆಗ್ಗಣಗಳ ಪಿಕ್ಕೆ ಮಿಶ್ರಿತ ಕಳಪೆ ರಾಗಿ ವಿತರಣೆ ಮಾಡಿದ್ದರು.
ಕಳಪೆ ರಾಗಿ ವಿತರಣೆ ಮಾಡಿದ ಅಂಗಡಿ ಮಾಲೀಕ ಸೇರಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಅಸಮಧಾನ ಹೊರಹಾಕಿದ್ದಾರೆ.
ಕಳಪೆ ಪಡಿತರ ವಿತರಿಸಿ ಬಡವರ ಜೀವದ ಜೊತೆ ಚೆಲ್ಲಾಟವಾಡುವ ಸರ್ಕಾರಕ್ಕೆ ಬಡ ಜನರು ಛೀಮಾರಿ ಹಾಕಿದ್ದಾರೆ.