ಮಿನುಗುತಾರೆ ಕಲ್ಪನಾ ಸವಿನೆನಪು ಮತ್ತು ಗೀತ ಗಾಯನ ಕಾರ್ಯಕ್ರಮ
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಿನುಗುತಾರೆ ಕಲ್ಪನಾ ಸವಿನೆನಪು ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚಿತ್ರನಟಿ ಕಲ್ಪನಾ ರವರ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕಲ್ಪನಾ ರವರು ಕನ್ನಡ ಚಲನಚಿತ್ರರಂಗದ ಅಪ್ರತಿಮ, ಅದ್ಭುತ ಪ್ರತಿಭೆ .ತಮ್ಮ ಅಭಿನಯದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಲಕ್ಷಾಂತರ ಅಭಿಮಾನಿಗಳಲ್ಲಿ ನಿರಂತರವಾಗಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ.
ಸುಮಾರು 78 ಚಿತ್ರಗಳಿಗೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಲ್ಪನಾ ರವರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿ ತಮ್ಮ ಗೆಜ್ಜೆಪೂಜೆ, ಶರಪಂಜರ ,ಬೆಳ್ಳಿಮೋಡ ,ಎರಡು ಕನಸು ಹೀಗೆ ಹತ್ತು ಹಲವು ಸಿನಿಮಾಗಳಲ್ಲಿ ತಮ್ಮ ಅದ್ಭುತವಾದ ಅಭಿನಯದ ಮೂಲಕ ಮೂಕ ವಿಸ್ಮಿತರನ್ನಾಗಿ ಮಾಡಿದವರು. ತಮ್ಮ ಪಾತ್ರಗಳಿಗೆ ಜೀವಂತಿಕೆ ತುಂಬಿ ನಟಿಸುತ್ತಿದ್ದ ಕಲ್ಪನಾ ರವರು ಕನ್ನಡದ ಮರೆಯಲಾಗದ ಮಿನುಗುತಾರೆ ಎಂದು ತಿಳಿಸಿದರು.

ಬರಹಗಾರ ಎಸ್ ಲಕ್ಷ್ಮೀನರಸಿಂಹ ಕಲ್ಪನಾ ರವರ ಚಲನಚಿತ್ರ ನಟನೆಯ ಬಗ್ಗೆ ಸಭೆಯಲ್ಲಿ ವಿವರಿಸಿ ಕಲ್ಪನಾ ಅಭಿನಯ ಯುವ ನಟಿಯರಿಗೆ ಮಾರ್ಗದರ್ಶನದಂತೆ. ಗೆಜ್ಜೆಪೂಜೆ, , ಶರಪಂಜರ ಅಭಿನಯ ಕನ್ನಡ ಚಿತ್ರರಂಗ ಮರೆಯಲಾಗದು. ರಾಜ್ ಕುಮಾರ್, ಗಂಗಾಧರ, ಕಲ್ಯಾಣಕುಮಾರ್ ಜೊತೆ ಅಭಿನಯ , ಅವರ ಉಡುಪು, ಶೈಲಿ, ಹೊಸತನದಿಂದ ಇತ್ತು.ಜೀವನದಲ್ಲಿ ಹಲವು ಏರಿಳಿತ ಕಂಡವರು ಕಲ್ಪನ ದುರಂತ ನಾಯಕಿಯಾಗಿ ಕಣ್ಮರೆಯಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಗಾರರಾದ ಶ್ರೀನಿವಾಸಗೌಡ ಮಾತನಾಡಿ ಅವರ ಚಿತ್ರಗಳ ಹಾಡುಗಳು ಇಂದಿಗೂ ಜನರ ಹೃದಯದಲ್ಲಿದೆ.ಏನು ಸಭ್ಯತೆ, ಇದೇನು ಸಂಸ್ಕೃತಿ ಹಾಡು ಕೇಳಿದಷ್ಟು ಕೇಳುವಂತಹ ಹಾಡು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ರವರು ಕಲ್ಪನಾ ನಟನೆಯ ಪೂಜಿಸಲೆಂದೆ ಹೂಗಳ ತಂದೆ, ಏನು ಸಭ್ಯತೆ, ಏನು ಸಂಸ್ಕೃತಿ, ಅನೇಕ ಹಾಡುಗಳನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಸರಸ್ವತಿ, ಶಿವಲಿಂಗ ಮೂರ್ತಿ, ಪಣ್ಯದ ಹುಂಡಿ ರಾಜು,ಸುರೇಶ್ ಗೌಡ, ಬೊಮ್ಮಾಯಿ, ಗೋವಿಂದರಾಜು, ಮಾದೇವಸ್ವಾಮಿ ,ಪರಮೇಶ್ವರಪ್ಪ, ಸತೀಶ್, ಮಹದೇವು ಮುಂತಾದವರು ಉಪಸ್ಥಿತರಿದ್ದರು.