ಮಂಡ್ಯ: ನೀರಿನ ರಭಸಕ್ಕೆ ಕುಸಿದ ನಗುವನ ತೋಟದ ಎದುರಿನ ಕೆಆರ್ ಎಸ್ ತಡೆಗೋಡೆ ಕುಸಿತವಾಗಿದೆ.
ಕೆಆರ್ ಎಸ್ ನಿಂದ ನಗುವನದ ಎದುರಿನ ಅಣೆಕಟ್ಟೆ ಗೇಟ್ ತೆಗೆದು ನದಿಗೆ ನೀರು ಬಿಟ್ಟ ಕೆಲ ತಾಸಿನಲ್ಲೇ ತಡೆಗೋಡೆ ಕುಸಿತಗೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು, ಸಿಬ್ಬಂದಿಗಳು ಆ ಗೇಟ್ ನ ನೀರು ನಿಲ್ಲಿಸಿದ್ದಾರೆ.
ತಕ್ಷಣ ನೀರು ನಿಲ್ಲಿಸದಿದ್ದರೇ ತಡೆಗೋಡೆ ಭಾಗಶಃ ಕೊಚ್ಚಿ ಹೋಗುವ ಅಪಾಯವಿತ್ತು.
ಕಳಪೆ ಕಾಮಗಾರಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.