Saturday, April 19, 2025
Google search engine

Homeಅಪರಾಧನೋಯ್ಡಾ: ಕಳೆದ 24 ಗಂಟೆಯಲ್ಲಿ 6-7 ಮನೆಗಳಲ್ಲಿ ಕಳ್ಳತನ

ನೋಯ್ಡಾ: ಕಳೆದ 24 ಗಂಟೆಯಲ್ಲಿ 6-7 ಮನೆಗಳಲ್ಲಿ ಕಳ್ಳತನ

ನೋಯ್ಡಾ: ಸರಣಿ ಮನೆಕಳ್ಳತನವಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿರುವುದು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 6-7 ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ನಮಗೆ ದೂರು ಬಂದಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ.

ಪ್ರತಿ ಕಳ್ಳತನದ ಘಟನೆಯಲ್ಲಿ ಕಳ್ಳರು ಒಂದೇ ರೀತಿಯ ವಿಧಾನವನ್ನು ಅನುಸರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳರು ಬೆಲೆಬಾಳುವ ವಸ್ತುಗಳನ್ನು ಹಾಗೂ ಲಕ್ಷಾಂತರ ರೂಪಾಯಿಯನ್ನು ಕಳ್ಳತನಗೈಯುವ ವೇಳೆ ಮನೆಯಲ್ಲಿನ ಪ್ರಿಡ್ಜ್‌ ನಲ್ಲಿ ಆಹಾರಕ್ಕಾಗಿ ಜಾಲಾಡಿ, ಪ್ರತಿ  ಮನೆಯಲ್ಲಿ ಏನಾದರೂ ಅಡುಗೆ ಮಾಡಿ ಅದನ್ನು ತಿಂದು ಅಲ್ಲಿಂದ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನೋಯ್ಡಾದ ಸೆಕ್ಟರ್ 87ರ ಜಂತಾ ಫ್ಲಾಟ್‌ ನಲ್ಲಿ 6-7 ಕಳ್ಳತನ ಪ್ರಕರಣಗಳು ವರದಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಕೋಡಾ ತಯಾರಿಸಿ ತಿಂದು ತೇಗಿದ ಬಳಿಕ ಪರಾರಿ.. 

ಸೆಕ್ಟರ್ 82 ರಲ್ಲಿ ವಾಸಿಸುವ ಶ್ರೀರಾಮ್ ತ್ರಿಪಾಠಿ ಮನೆಯನ್ನು ಗುರಿಯಾಗಿಸಿದ ಕಳ್ಳರು, ಮನೆಯಿಂದ ಕನಿಷ್ಠ 40 ಲಕ್ಷ ರೂಪಾಯಿ ಮೌಲ್ಯದ ನಗದು, ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದರೋಡೆಗೈದಿದ್ದಾರೆ. ತ್ರಿಪಾಠಿ ಅವರು ಮಧ್ಯಪ್ರದೇಶದಲ್ಲಿರುವಾಗ ಈ ಘಟನೆ ನಡೆದಿದೆ.

ಬಾಗಿಲು ಒಡೆದು ಮನೆಯೊಳಗೆ ಬಂದ ಕಳ್ಳರು ದರೋಡೆ ಮಾಡಿ, ಅವರ ಮನೆಯಲ್ಲಿ ಪಕೋಡಾವನ್ನು ತಯಾರಿಸಿ ಅದನ್ನು ಸೇವಿಸಿ, ವಿಶ್ರಾಂತಿ ಪಡೆದು ಮತ್ತೊಂದು ಮನೆಗೆ ಹೋಗಿದ್ದಾರೆ. ಅಲ್ಲಿ ಕೂಡ ಇದೇ ರೀತಿಯಾಗಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಯ್ಡಾದ ಸೆಕ್ಟರ್ 25 ರಲ್ಲಿ ರಿಚಾ ಬಾಜ್‌ಪೇಯ್ ಅವರ ಮನೆಗೆ ನುಗ್ಗಿ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ರಿಚಾ ಪ್ರಕಾರ, ಅವರ ಮನೆಯಲ್ಲಿದ್ದ ಫ್ರಿಡ್ಜ್‌ನಿಂದ ಹಲವಾರು ನೀರಿನ ಬಾಟಲಿಗಳನ್ನು ಖಾಲಿ ಮಾಡಿದ್ದಾರೆ. ಅವರು ಓಡಿಹೋಗುವ ಮೊದಲು ಬೀಡಿ ಸೇದಿದರು, ಪಾನ್ ತಿಂದು ಅದನ್ನು ಬಾತ್‌ ರೂಮ್‌ ನಲ್ಲಿ ಉಗುಳಿ ಹೋಗಿದ್ದಾರೆ ಎನ್ನಲಾಗಿದೆ.

ಕಳ್ಳರ ಬಂಧನಕ್ಕಾಗಿ ಠಾಣಾಧಿಕಾರಿಗಳಿಗೆ ಸೂಚನೆ ನೀಡಿ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಕಳ್ಳರನ್ನು ಬಂಧಿಸಲಾಗುವುದು ಎಂದು ಕೇಂದ್ರೀಯ ನೊಯ್ಡಾದ ಹೆಚ್ಚುವರಿ ಡಿಸಿಪಿ, ಹೃದೇಶ್ ಕಥೇರಿಯಾ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular