ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಭಾನುವಾರ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳು ಪದವಿ ಪ್ರಧಾನ ಸಮಾರಂಭ ನಡೆಯಿತು.
ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆರ್.ವೆಂಕಟೇಶ್ ಬಾಬು ಹಾಗೂ ಉಪಾಧ್ಯಕ್ಷರಾಗಿ ಬಿ.ಚಿಕ್ಕಬಸವಯ್ಯ, ಡಿ.ಕೆ.ರಮೇಶ್ ಬಾಬು, ಕಾರ್ಯದರ್ಶಿಯಾಗಿ ಸಿ.ಚೇತನ್, ಜಂಟಿ ಕಾರ್ಯದರ್ಶಿಯಾಗಿ ಮಾದೇಶ್, ಖಜಾಂಜಿಯಾಗಿ ಇಂದ್ರೇಶ್, ನಿರ್ದೇಶಕರುಗಳಾಗಿ ಬಿ.ಎನ್.ವಿರೂಪಾಕ್ಷಸ್ವಾಮಿ, ಜಯಪ್ರಕಾಶ್ ನಾರಾಯಣ್, ನಂದಕುಮಾರ್, ಜಿ.ಎಸ್.ಮಹದೇವ ಪ್ರಸಾದ್, ಕೆ.ವಿ.ವೆಂಕಟೇಶ್, ಮದನ್, ಅಪರ್ಣಸತೀಶ್, ಒ.ವಿ.ಸತೀಶ್, ಕೆ.ಸಿ.ರಾಮಯ್ಯ, ವಿಮಲ, ಪಿ.ಮಹಾದೇವ, ಜಿ.ಶೀಲಾ, ಆರ್.ಸುಮಲತಾ ಅವರುಗಳು ಅಧಿಕಾರ ಸ್ವೀಕಾರ ಮಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಎನ್.ಸುಬ್ರಮಣ್ಯ ಮಾತನಾಡಿ,ಲಯನ್ಸ್ ಸಂಸ್ಥೆಯು ವಿಶ್ವದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೊಂದು ಅತಿ ದೊಡ್ಡ ಸೇವಾಸಂಸ್ಥೆಯಾಗಿದ್ದು ಅಂಗವಿಕರಿಗೆ, ಬಡವರಿಗೆ ನಿರಂತರವಾಗಿ ಸೇವೆಯನ್ನು ನೀಡುತ್ತಾಬಂದಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ನೂತನ ಸದಸ್ಯರು ಸೇರ್ಪಡೆಯಾದರು. ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸುರೇಶ್ ಬಾಬು, ವಲಯ ಅಧ್ಯಕ್ಷ ಜವರೇಶ್, ನಿಕಟಪೂರ್ವ ಅಧ್ಯಕ್ಷ ಎಸ್.ನಾಗರಾಜು, ಅಪರ್ಣ ಸತೀಶ್, ಚನ್ನಮಾದೇಗೌಡ, ಸಂಸ್ಥಾಪನಾ ಕಾರ್ಯದರ್ಶಿ ಗಿರಿರಾಜನ್ ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.