Saturday, April 19, 2025
Google search engine

Homeಕ್ರೀಡೆಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ

ನವದೆಹಲಿ: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಚೇತನ್ ಶರ್ಮಾ ರಾಜೀನಾಮೆ ನೀಡಿದ್ದರಿಂದ ಬಿಸಿಸಿಐ ಮುಖ್ಯ ಆಯ್ಕೆಗಾರ ಸ್ಥಾನವು ಫೆಬ್ರವರಿಯಿಂದ ಖಾಲಿ ಇತ್ತು. ಇದೀಗ ಆ ಸ್ಥಾನವನ್ನು 45 ವರ್ಷದ ಅಜಿತ್ ಅಗರ್ಕರ್ ತುಂಬಿದ್ದಾರೆ.

ಅಗರ್ಕರ್ ಅವರು ಈಗಾಗಲೇ ಶಿವಸುಂದರ್ ದಾಸ್, ಸಲೀಲ್ ಅಂಕೋಲಾ , ಸುಬ್ರೋತೊ ಬ್ಯಾನರ್ಜಿ ಮತ್ತು ಎಸ್.ಶರತ್ ಅವರನ್ನು ಒಳಗೊಂಡಿರುವ ಭಾರತ ಪುರುಷರ ಆಯ್ಕೆ ಸಮಿತಿಯ 5ನೇ ಸದಸ್ಯರಾಗಿದ್ದಾರೆ. ಸೋಮವಾರ ಸಂದರ್ಶನ ನಡೆಸಿದ ಅಶೋಕ್ ಮಲ್ಹೋತ್ರಾ, ಸುಲಕ್ಷಣಾ ನಾಯ್ಕ್ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಮೂವರು ವ್ಯಕ್ತಿಗಳ ಕ್ರಿಕೆಟ್ ಸಲಹಾ ಸಮಿತಿ(CAC)ಯು ಅಗರ್ಕರ್ ರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ.

ಜ್ಯೇಷ್ಠತೆ (ಒಟ್ಟು ಟೆಸ್ಟ್ ಪಂದ್ಯಗಳ ಸಂಖ್ಯೆ) ಆಧಾರದ ಮೇಲೆ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅಗರ್ಕರ್ ಅವರನ್ನು ಸಮಿತಿ ಶಿಫಾರಸು ಮಾಡಿದೆ. 191 ಏಕದಿನ ಪಂದ್ಯಗಳನ್ನು ಆಡಿರುವ ಅಗರ್ಕರ್ 5.07 ಎಕಾನಮಿಯೊಂದಿಗೆ 288 ವಿಕೆಟ್ ಕಬಳಿಸಿದ್ದಾರೆ. 26 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 3.39ರ ಎಕಾನಮಿಯೊಂದಿಗೆ 58 ವಿಕೆಟ್‍ಗಳನ್ನು ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಅಗರ್ಕರ್ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಪರ ಅವರು 42 ಪಂದ್ಯಗಳನ್ನು ಆಡಿದ್ದು, 8.83ರ ಎಕಾನಮಿಯಲ್ಲಿ 29 ವಿಕೆಟ್‍ಗಳನ್ನು ಪಡೆದಿದ್ದಾರೆ.

ಬಿಸಿಸಿಐ ಪುರುಷರ ಆಯ್ಕೆ ಸಮಿತಿ

ಅಜಿತ್ ಅಗರ್ಕರ್ (ಅಧ್ಯಕ್ಷರು), ಶಿವ ಸುಂದರ್ ದಾಸ್, ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್.

RELATED ARTICLES
- Advertisment -
Google search engine

Most Popular