Saturday, April 19, 2025
Google search engine

Homeಸ್ಥಳೀಯಚಾಮುಂಡಿ ಬೆಟ್ಟ ಅನ್ನದಾಸೋಹ ಭವನಕ್ಕೆ ವಿ-ಗಾರ್ಡ್ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ ಸಮರ್ಪಣೆ

ಚಾಮುಂಡಿ ಬೆಟ್ಟ ಅನ್ನದಾಸೋಹ ಭವನಕ್ಕೆ ವಿ-ಗಾರ್ಡ್ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ ಸಮರ್ಪಣೆ

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರ ಅನೂಕಲಕ್ಕಾಗಿ  ಶುದ್ಧ ಕುಡಿಯುವ ನೀರಿನ ಘಟಕವನ್ನು ವಿ-ಗಾರ್ಡ್ ಕಂಪನಿ ವತಿಯಿಂದ ಅನ್ನದಾಸೋಹ ಭವನಕ್ಕೆ ಉಚಿತವಾಗಿ ಸ್ಥಾಪಿಸಿ ಇಂದು ಹಸ್ತಾಂತರಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿಟಿ.ದೇವೆಗೌಡ ರವರು ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನ ಶಾಶ್ವತವಾಗಿ ಒದಗಿಸಲು ಸಿ.ಎಸ್. ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತಾಧಿಗಳಿಗೆ ಪ್ರತಿದಿನ 50ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ವಿ-ಗಾರ್ಡ್ RO plant ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ- ಗಾರ್ಡ್ ಕಂಪನಿಯ ಉಪಾಧ್ಯಕ್ಷರಾದ ಸೂರ್ಯಪ್ರಸಾದ್ ವಿಜೆ, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ರವರು ಹಸ್ತಾಂತರಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷತ್ ರವರು ಕುಡಿಯುವ ನೀರಿನ ಘಟಕ ಯಂತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಮನುಷ್ಯನಿಗೆ ಶುದ್ಧವಾದ ನೀರು ಗಾಳಿ ಆಹಾರ ಬಹಳ ಮುಖ್ಯವಾದದು. ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳ ಮತ್ತು ಸಾರ್ವಜನಿಕರ ಅನೂಕೂಲಕ್ಕೆ ವಿವಿಧ ಮೂಲಭೂತ ಸೌಲಭ್ಯ ಸರ್ಕಾರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒದಗಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳ ಸಾರ್ವಜನಿಕ ಸಹಭಾಗಿತ್ವ ಬಹಳ ಮುಖ್ಯವಾದುದು ಎಂದರು.

 ವಿ-ಗಾರ್ಡ್ ಕಂಪನಿ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯವಾದುದು ಇದರಿಂದ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಅನೂಕೂಲವಾಗುತ್ತದೆ ಮತ್ತು ಸಂಘಸಂಸ್ಥೆಗಳು ಇಂತಹ ಸೇವಾಮನೋಭಾವದ ಕೊಡುಗೆಗೆ ಮುಂದೆ ಬಂದಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯನ್ನ ಸಂಪರ್ಕಿಸಬೇಕಾಗಿ ತಿಳಿಸಿದರು.

ಇದೇ ಸಂಧರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ವಿ- ಗಾರ್ಡ್ ಕಂಪನಿಯ ಉಪಾಧ್ಯಕ್ಷರಾದ ಸೂರ್ಯಪ್ರಸಾದ್ ವಿಜೆ, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್.ಕೆ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ ,ತನ್ವಿ ಟ್ರೇಡಿಂಗ್ ಕಾರ್ಪೋ ದೀಪಕ್ ಆರ್ ಹೆಬ್ಬಾಳ್,  ಚಮನ್, ಪುರುಷೋತ್ತಮ್, ಅರಣ್,  ಇದ್ದರು.

RELATED ARTICLES
- Advertisment -
Google search engine

Most Popular