ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಇಂದು ಎಚ್. ಡಿ. ಕೋಟೆ ತಾಲೋಕು ಆಡಳಿತ ಸೌಧದ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ನೆನಪಿಗಾಗಿ ಯುದ್ಧದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಕಂದಾಯ ಇಲಾಖೆಯ ಅಧಿಕಾರಿ ವರ್ಗದವರೊಂದಿಗೆ ತಹಶಿಲ್ದಾರ್ ಶ್ರೀನಿವಾಸ ಮೌನಚಾರಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, ನಾನು ಕೂಡ ಕಾರ್ಗಿಲ್ ಯುದ್ಧದ ಬೆಟಾಲಿಯನ್ ನಲ್ಲಿ ಇದ್ದು ಯುದ್ಧ ಮಾಡಿ ಪ್ರಾಣಪಾಯದಿಂದ ಪಾರಗಿ ಬಂದವನು. 26 ವರ್ಷಗಳ ಹಿಂದಿನ ಆ ದಿನವನ್ನ ನೆನೆಸಿಕೊಂಡರೇ ಇಂದಿಗೂ ಮೈ ನಡುಕ ಬರುತ್ತದೆ. ಅನ್ನ ಆಹಾರ ನೀರು ಇಲ್ಲದೇ ದಿನಗಟ್ಟಲೇ ವಾರಗಟ್ಟಲೇ ಯುದ್ಧ ಮಾಡುವ ಪರಿ ಬಹುಶಃ ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಮೊದಲೇ ಬೆಟಾಲಿಯನ್ ನ ಸುಮಾರು 800ಕ್ಕೂ ಹೆಚ್ಚು ಯೋಧರು ಪಾಕಿಸ್ತಾನದ ಉಗ್ರಗಾಮಿಗಳ ಗುಂಡೆಟಿಗೆ ಬಲಿಯಾದ ಎರಡನೇ ತಂಡದಲ್ಲಿಯೇ ನಾನು ಯುದ್ದಕ್ಕೆ ಸನ್ನದ್ಧನಾಗಿ ಕಾದುಕುಳಿತಿದ್ದೆವು. ಅಷ್ಟರಲ್ಲಾಗಲೇ ನಮ್ಮ ಭಾರತೀಯ ಸೈನ್ಯದ ವೀರಾಸೇನಾನಿಗಳ ತುಕ್ಕಡಿಗಳು ಉಗ್ರರನ್ನ ಹುಟ್ಟಡಗಿಸಿ ವಿಜಯ ಪತಾಕೆಯನ್ನು ಬೆಟ್ಟದ ತುದಿಯಿಂದ ಹಾರಿಸಿದರು ಎಂದು ತಮ್ಮ ಜೀವನದ ಸೇವಾವಧಿಯಲ್ಲಿ ಎಂದು ಮರೆಯಲಾಗದ ಕಾರ್ಗಿಲ್ ಯುದ್ಧದ ತಮ್ಮ ಅನುಭವವನ್ನು ಹಂಚಿಕೊಂಡರು.
ಆ ಕ್ಷಣವನ್ನು ನೆನೆದು ಭಾವುಕರಾದ ಶ್ರೀನಿವಾಸ್ ಕೆಲವು ಸಮಯ ಮೌನವಾದರು. ಮುಂದುವರಿದು ಮಾತಾನಾಡಿ, ಸೈನ್ಯದಲ್ಲಿ ಸೇವೆ ಮಾಡುತ್ತಿರುವ ಪ್ರತಿಯೊಬ್ಬರೂ ಈ ದೇಶದ ಕೂಲಿಕಾರ್ಮಿಕರು. ರೈತರು. ಜನಸಾಮಾನ್ಯರ ಮಕ್ಕಳೇ ವಿನಃ ಯಾವ ರಾಜಕಾರಣಿ ಅಥವಾ ಶ್ರೀಮಂತರ ಮಕ್ಕಳಲ್ಲ ಹಾಗಾಗಿ ದಯಮಾಡಿ ಅಧಿಕಾರಿಗಳಾದ ನೀವು ನಿಮ್ಮ ಮಕ್ಕಳನ್ನು ದೇಶ ಸೇವೆಗೆ ಮಿಲಿಟರಿಗೆ ಸೇರಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶಿಲ್ದಾರ ಶ್ರೀಧರ್. ಶಿರಸ್ತೆದಾರ್ ಮಹೇಶ್. ಸಿದ್ದರಾಜ್. ಸುಗುಣ ರಾಜಸ್ವನಿರೀಕ್ಷಕರಾದ ವಿಶ್ವನಾಥ್. ಗೋವಿಂದರಾಜ. ಕಂದಾಯ ಅಧಿಕಾರಿಗಳಾದ VA ದಿವ್ಯ, ವೇದಕುಮಾರ್. ಸುರೇಶ್. ಗೌಸ್ ಮೋದಿನ್. ಜಾಹೇದಾ. ತಸ್ಮೀಯ. ಬಸಪ್ಪ. ಮುಂತಾದವರು ಭಾಗವಹಿಸಿದ್ದರು.