ಮೈಸೂರು: ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವಮೆಂಟ್ (ರಿ ) ತಂಡದವರು ಇಂದು ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಕಾರ್ಗಿಲ್ ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಂ ಭತ್ರ, ಲೆಫ್ಟಿನೆಟ್ ಮನೋಜ್ ಕುಮಾರ್ ಪಾಂಡೆ ಮತ್ತು ಕ್ಯಾಪ್ಟನ್ ಸೌರಭ್ ಕಾಲಿಯ ರವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಪುಷ್ಪಾರ್ಚನೆ ಮಾಡಿದರು.
ಪಾದಯಾತ್ರೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು – ದೊಡ್ಡ ಗಡಿಯಾರ – ಗಾಂಧಿ ವೃತ್ತ – ದೇವರಾಜ ಅರಸ್ ರಸ್ತೆ ಮೂಲಕ ಮೆಟ್ರೋಪಾಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಪ್ರತಿಮೆ ಹತ್ತಿರ ಮುಕ್ತಾಯವಾಯಿತು.
ಕಾರ್ಯಕ್ರಮಕ್ಕೆ ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವಮೆಂಟ್ ನ 70ಕ್ಕಿಂತಲೂ ಹೆಚ್ಚು ಮಾಜಿ ಸೈನಿಕರುಗಳು, 250 ಕ್ಕೂ ಹೆಚ್ಚು NCC ವಿದ್ಯಾರ್ಥಿಗಳು, 60 ಕ್ಕಿಂತಲೂ ಹೆಚ್ಚು ಸೈನಿಕ್ ಅಕಾಡೆಮಿಯ ಭವಿಷ್ಯದ ಸೈನಿಕರುಗಳು ಮತ್ತು 50ಕ್ಕಿಂತಲೂ ಹೆಚ್ಚು ದೇಶಭಿಮಾನಿಗಳು,ದೇಶಭಕ್ತರುಗಳು ಒಟ್ಟಾಗಿ 400 ಕ್ಕಿಂತಲೂ ಹೆಚ್ಚು ಜನರು ಪಾದಯಾತ್ರೆಯ ಉದ್ದಕ್ಕೂ ಭಾರತ್ ಮಾತಾಕೀ ಜಯ ಎಂಬ ಘೋಷಣೆಯೊಂದಿಗೆ ಸಾಗಿದರು.
ಫೀಲ್ ಮಾರ್ಷಲ್ ಕೆ ಎಮ್ ಕಾರಿಯಪ್ಪ ರವರ ಪ್ರತಿಮೆ ಹತ್ತಿರ ಹುತಾತ್ಮರಾದ ಕಾರ್ಗಿಲ್ ಯೋಧರಿಗೆ ಮುಖ್ಯ ಅತಿಥಿಗಳಾದ ನಿವೃತ್ತ ಸೈನ್ಯಧಿಕಾರಿ ಕಾರ್ನಲ್ ಮಹೇಂದ್ರ ಸಿಂಗ್ ರವರಿಂದ ರಿತ್ ಪೆರೇಡ್ ಮಾಡಿಸಿಲಾಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಎಲ್ಲರಿಗೂ ಕಾರ್ಗಿಲ್ ವಿಜಯ ದಿನದ ಶುಭಾಶಯಗಳನ್ನು ತಿಳಿಸಿದರು.ಮತ್ತು ನಾವುಗಳು ಇಲ್ಲಿ ಸುರಕ್ಷಿತವಾಗಿ ಇದ್ದೇವೆ ಎನ್ನುವುದಕ್ಕೆ ಗಡಿಯಲ್ಲಿರುವ ನಮ್ಮ ಸೈನಿಕರೇ ಕಾರಣ ಮತ್ತು ಹುತಾತ್ಮರಾದ ವೀರಯೋಧರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ನಿವೃತ್ತ ಕಾರ್ನಲ್ ಮಹೇಂದ್ರ ಸಿಂಗ್ ರವರು ಕಾರ್ಗಿಲ್ ಯುದ್ಧದ ಬಗ್ಗೆ ತಿಳಿಸಿದರು.

ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವಮೆಂಟ್ ನ ಸಂಸ್ಥಾಪಕರಾದ ಮಹೇಶ್ ವಿ ರವರು ಮಾತನಾಡಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ರಾಗಿರುವ 527 ಮಾಣಿಕ್ಯಗಳನ್ನು ಪ್ರತಿದಿನ ನಾವುಗಳು ಸ್ಮರಿಸಬೇಕು ಹಾಗೂ ಈ ದಿನ ವಿಶೇಷವಾಗಿ ಆಚರಣೆ ಮಾಡಬೇಕು ಏಕೆಂದರೆ ಇಂದು ಭಾರತ ಮತ್ತು ಪಾಕಿಸ್ತಾನ ಕಾರ್ಗಿಲ್ ಎಂಬ ಸ್ಥಳದಲ್ಲಿ ನಡೆದ ಯುದ್ಧದಲ್ಲಿ ಭಾರತದ ಸೈನಿಕರು ವಿಜಯಪತಾಕೆಯನ್ನು ಹಿಡಿದ ದಿನ. ಇಲ್ಲದಿದ್ದರೆ ಸ್ವರ್ಗದಲ್ಲಿರುವ ಅವರುಗಳು ಅಯ್ಯೋ ಈ ದೇಶಕ್ಕಾಗಿ ನಾನು ಪ್ರಾಣತ್ಯಾಗ ಮಾಡಬೇಕಾಗಿತ್ತಾ ಅಂತ ಭಾವಿಸಬಾರದು. ಈ ದಿನವನ್ನು ಆಚರಣೆ ಮಾಡುವುದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕಾರ್ಪೋರೇಶನ್ ಉಪ ಆಯುಕ್ತರಾಗಿರುವ ಮಂಜುನಾಥ್ ರೆಡ್ಡಿ,ಮಣಿಪಾಲ ಆಸ್ಪತ್ರೆಯ ಡಾಕ್ಟರ್ ಸುಮಿತ್, MEM ನ ಉಪಾಧ್ಯಕ್ಷರು ವಿವೇಕಾನಂದ,ಪ್ರಧಾನ ಕಾರ್ಯದರ್ಶಿ ಶ್ರೀಧರ್, ನಿರ್ದೇಶಕರುಗಳಾದ ಕಿಶೋರ್ ಕದಂ, ವಿಶ್ವನಾಥ್, ಲೋಕೇಶ್, ಧನಂಜಯ, ಸುರೇಶ್, ರಾಮನಾರಾಯಣ, ಮೋಹನ್, ಮಹದೇವ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರಿಗೂ ಲಘು ಉಪಹಾರ ನೀಡಲಾಯಿತು.