ರಾಮನಗರ: ರಾಮನ ಹೆಸರಂತೂ ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲ. ೨೦೨೮ರೊಳಗೆ ಮತ್ತೆ ರಾಮನಗರ ಅಂತಾ ಬರುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸ್ವಲ್ಪ ದಿನ ಅವರು ಖುಷಿಯಾಗಿರಲಿ. ರಾಜಕೀಯ ಪತನ ಆರಂಭವಾಗಿದೆ. ಜಿಲ್ಲೆಯ ಹೆಸರು ಬದಲಿಸಲು ಅರ್ಜಿ ಕೊಟ್ಟವ ಯಾರು ಹೆಸರು ಬದಲಿಸುವುದರಿಂದ ಏನು ಸಿಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ. ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ?ಕಾನೂನು ಸುವ್ಯವಸ್ಥೆ ಹೇಗಿದೆ ನೋಡಬೇಕು ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತೆ ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಬಂತು ಎಂದು ಕಿಡಿಕಾರಿದ್ದಾರೆ.