Saturday, April 19, 2025
Google search engine

Homeರಾಜ್ಯಸುದ್ದಿಜಾಲಕಾರ್ಗಿಲ್ ವಿಜಯ ಭಾರತೀಯ ಸೈನ್ಯದ ಸೈನಿಕರ ಶೌರ್ಯ, ಸಾಹಸ ಮತ್ತು ತ್ಯಾಗವನ್ನು ಎಂದು ಮರೆಯಲಾಗದು-ಸುರೇಶ್ ಎನ್...

ಕಾರ್ಗಿಲ್ ವಿಜಯ ಭಾರತೀಯ ಸೈನ್ಯದ ಸೈನಿಕರ ಶೌರ್ಯ, ಸಾಹಸ ಮತ್ತು ತ್ಯಾಗವನ್ನು ಎಂದು ಮರೆಯಲಾಗದು-ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕಾರ್ಗಿಲ್ ವಿಜಯಕ್ಕೆ 25 ರ ಸಂಭ್ರಮ ಆಗಿದ್ದು ಕಾರ್ಗಿಲ್ ವಿಜಯ ಭಾರತೀಯ ಸೈನ್ಯದ ಸೈನಿಕರ ಶೌರ್ಯ, ಸಾಹಸ ಮತ್ತು ತ್ಯಾಗವನ್ನು ಎಂದು ಮರೆಯಲಾಗದು. ಕಾರ್ಗಿಲ್ ಸಮರ ಭಾರತೀಯರ ದೇಶಭಕ್ತಿಯನ್ನು ಇಮ್ಮಡಿಗೊಳಿಸಿತು. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕಾರ್ಗಿಲ್ ಪ್ರದೇಶದಲ್ಲಿ ಭಾರತೀಯ ಧ್ವಜದ ಪತಾಕೆಯನ್ನು ಹಾರಿಸುವ ಮೂಲಕ ಭಾರತೀಯ ಸೈನಿಕರ ತ್ಯಾಗ ಬಲಿದಾನವನ್ನು ನೆನೆಯುವ ಮೂಲಕ ಭಾರತೀಯ ಸೈನಿಕರ ಧೈರ್ಯವನ್ನು ಸದಾ ಕಾಲ ಸ್ಮರಿಸುವ ಹಾಗು ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುತ್ತಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅಮಚವಾಡಿ ಯುವಕರ ಸಂಘ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ 25 ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಭಾರತೀಯ ವೀರ ಸೈನಿಕರು ತಮ್ಮ ಪ್ರಾಣವನ್ನು ರಾಷ್ಟಕ್ಕೆ ಅರ್ಪಿಸಿಕೊಂಡರು. ರಾಷ್ಟ್ರವೇ ಮೊದಲು ರಾಷ್ಟ್ರವೇ ಅಂತಿಮ ಎಂಬ ಗುರಿ ವೀರ ಸೈನಿಕರಲ್ಲಿತ್ತು.

ಯುವಕರಲ್ಲಿ ರಾಷ್ಟ್ರೀಯತೆ ,ರಾಷ್ಟ್ರಭಕ್ತಿ,ರಾಷ್ಟ್ರ ಚಿಂತನೆ ಬೆಳೆಯಬೇಕು. ಕಾರ್ಗಿಲ್ ವಿಜಯ ಭಾರತೀಯ ಸೈನಿಕರ ಬಲಿದಾನದ ಸ್ಮರಣೆಯನ್ನು ಯುವಶಕ್ತಿ ಸದಾ ನೆನೆಸಿಕೊಳ್ಳಬೇಕು. ನೂರಾರು ಸೈನಿಕರ ತ್ಯಾಗ , ಬಲಿದಾನದಿಂದ ಕಾರ್ಗಿಲ್ ಪ್ರದೇಶ ಉಳಿದು ಶತ್ರು ರಾಷ್ಟ್ರಗಳಿಗೆ ಮತ್ತೆ ಭಾರತದ ಕಡೆ ಮುಖ ಹಾಕದಂತೆ ಎಚ್ಚರಿಸಿದ ಕಾರ್ಗಿಲ್ ಸಮರ ಅಮರವಾದದ್ದು. ಯುವಕರು ಒಟ್ಟಿಗೆ ಸೇರಿ ಕಾರ್ಗಿಲ್ ವಿಜಯದ ಮೂಲಕ ಯುವಕ ಸಂಘ ಸತ್ಕಾರ್ಯವನ್ನು ಮಾಡಿರುವುದು ಬಹಳ ಸಂತೋಷವಾದುದು.

ಯುವಶಕ್ತಿ ರಾಷ್ಟ್ರೀಯತೆಯ ಸಂಕೇತವಾಗಿ ರಾಷ್ಟ್ರಕ್ಕಾಗಿ ದುಡಿಯುವ, ರಾಷ್ಟ್ರಕ್ಕೇ ಸದಾಕಾಲ ತಮ್ಮ ಸಮಯವನ್ನು ಇಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಭಾರತೀಯರಲ್ಲಿ ರಾಷ್ಟ್ರಭಕ್ತಿಯನ್ನು ಸ್ಪೂರ್ತಿಯತವಾಗಿ ತುಂಬಿದ ಸಮರ ಕಾರ್ಗಿಲ್ ಸಮರವಾಗಿದೆ. 25 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ವಿಜಯದ ವಿಜಯೋತ್ಸವದ ದಿನ ನಾವೆಲ್ಲರೂ ಸಂಭ್ರಮಿಸಿದ್ದು ಅಂದು ಇಡೀ ದೇಶವೇ ಬಾಲಕರಿಂದ ಹಿಡಿದು ವೃದ್ಧರವರೆಗೆ ವಿಜಯಪತಾಕೆಯನ್ನು ಹಾರಿಸಿತು .

ಗಡಿಯನ್ನು ಕಾಯುವ ಯೋಧರನ್ನು ಗೌರವಿಸುವ ಮತ್ತು ಅವರಿಗೆ ದಿವ್ಯಶಕ್ತಿಯನ್ನು ನೀಡುವ ಕಾರ್ಯವನ್ನು ಯುವಶಕ್ತಿ ಮಾಡುತ್ತಿರುವುದು ಮತ್ತಷ್ಟು ಹೆಮ್ಮೆ ಎಂದು ತಿಳಿಸಿದರು. ರಾಷ್ಟಕ್ಕೆ ತಮ್ಮ ತ್ಯಾಗ ಬಲಿದಾನ ಮಾಡಿದ ಸೈನಿಕರ ಪುಣ್ಯ ಸ್ಮರಣೆಯ ಮೂಲಕ ಗೌರವಿಸೋಣ. ಪ್ರತಿ ಹಳ್ಳಿಯಲ್ಲೂ ಯುವಕರ ಸಂಘವನ್ನು ಕಟ್ಟುವ ಮೂಲಕ ಸಮಾಜಕ್ಕೆ ಯುವಶಕ್ತಿಯ ಸದ್ಬಳಕೆಯನ್ನು ಮಾಡಿಕೊಳ್ಳುವ ದಿಕ್ಕಿನಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಋಗ್ವೇದಿ ತಿಳಿಸಿದರು.

ಅಮಚವಾಡಿ ಯುವಕ ಸಂಘದ ರಘು , ಕನ್ನಡ ಸಾಹಿತ್ಯ ಪರಿಷತ್ತಿನ ಪವನ್ , ಶಂಕರ್, ರಾಜು, ರಮೇಶ್,ಮಾದೇವಸ್ವಾಮಿ ಜೆ, ಸುರೇಶ್, ಮಹದೇವಸ್ವಾಮಿ ಇತರರು ಇದ್ದರು.

RELATED ARTICLES
- Advertisment -
Google search engine

Most Popular