Saturday, April 19, 2025
Google search engine

Homeರಾಜ್ಯಸುದ್ದಿಜಾಲಮಿತ ಆಹಾರ ಸೇವನೆ ಇಲ್ಲದೆ ಗೊಬ್ಬಿನ ಅಂಶಗಳಿಂದ ಹೃದಯ ಸ್ಥಂಭನ ಹೆಚ್ಚಾಗುತ್ತಿದೆ: ಡಾ. ಸಿ.ಆರ್.ಚಂದ್ರಶೇಖರಚಾರ್

ಮಿತ ಆಹಾರ ಸೇವನೆ ಇಲ್ಲದೆ ಗೊಬ್ಬಿನ ಅಂಶಗಳಿಂದ ಹೃದಯ ಸ್ಥಂಭನ ಹೆಚ್ಚಾಗುತ್ತಿದೆ: ಡಾ. ಸಿ.ಆರ್.ಚಂದ್ರಶೇಖರಚಾರ್

ಚನ್ನಪಟ್ಟಣ: ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಚಿಂತೆಯಿಂದ ದೂರವಾದರೆ ಮಾತ್ರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ದೀರ್ಘಕಾಲ ಜೀವನ ಮಾಡಲು ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರಚಾರ್‌ಅವರು ಸಲಹೆ ನೀಡಿದರು. ಪಟ್ಟಣದ ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಶ್ರೀ ಚಾಮುಂಡೇಶ್ವರಿ ಜನ್ಮದಿನೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಅಮ್ಮನವರ ಉತ್ಸವ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಹಿರಿಯರು ೭೫ ವರ್ಷ ಬದುಕುತ್ತಿದ್ದರೆ ಯುವಕರು ೩೫ ವರ್ಷಕ್ಕೆ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿ ಮಾನಸಿಕ ಖಿನ್ನತೆ ಹೆಚ್ಚಾದಂತೆ ನಮ್ಮ ಹೃದಯವೂ ಮೃದುವಾಗುತ್ತಾ ಹೋಗುತ್ತದೆ. ಇದರೆ ಜೊತೆಗೆ ಮಿತ ಆಹಾರ ಸೇವನೆ ಇಲ್ಲದೆ ಗೊಬ್ಬಿನ ಅಂಶಗಳಿಂದ ಹೃದಯ ಸ್ಥಂಭನ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಲಾಭ-ನಷ್ಠ, ಸೋಲು ಗೆಲುವನ್ನು ಸಮನಾಗಿ ಸ್ವೀಕಾರ ಮಾಡಿ ಚಿಂತೆಯಿಂದ ದೂರ ಉಳಿದರೆ ಮಾನಸಿಕ ನೆಮ್ಮದಿಯ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂದು ಸಲಹೆ ನೀಡಿದರು.

ದಿನನಿತ್ಯದ ಆರಂಭದಿಂದ ದಿನದ ಅಂತ್ಯದ ವರೆಗೆ ನಾವು ಮಾಡುವ ಕೆಲಸಗಳಿಂದ ಹೃದಯಕ್ಕೆ ಹೆಚ್ಚು ಒತ್ತಡ ಕೊಡುತ್ತೇವೆ. ಈ ನಿಟ್ಟಿನಲ್ಲಿ ಹೃದಯ ತಜ್ಞರಾದ ಡಾ. ಸಿ.ಎನ್. ಮಂಜುನಾಥ್‌ಅವರೆ ಹೇಳುತ್ತಾರೆ ನೀವು ಹೃದಯಕ್ಕೆ ೧೦ ನಿಮಿಷ ಪ್ರೀತಿ ಕೊಟ್ಟರೆ ಹೃದಯ ನಿಮ್ಮನ್ನು ೧ ದಿನ ಹೆಚ್ಚು ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ನೀವು ಎಲ್ಲರನ್ನು ಪ್ರೀತಿಸಿ ನಿಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಂಡರೆ ನಿಮ್ಮ ಆರೋಗ್ಯವೂ ಚನ್ನಾಗಿರುತ್ತದೆ ಎಂದು ಡಾ. ಸಿ.ಚಂದ್ರಶೇಖರಚಾರ್ ಕಿವಿಮಾತು ಹೇಳಿದರು. ಅಯೋಧ್ಯೆಯ ಶ್ರೀ ರಾಮಲಲ್ಲ ವಿಗ್ರಹ ರೂವಾರಿ ಅರುಣ್ ಯೋಗಿರಾಜ್ ವಿಶ್ವಕರ್ಮಅವರು ಮಾತನಾಡಿ, ನಾವು ನಮ್ಮ ಕಲೆ, ಪರಂಪರೆಗೆ ಗೌರವ ಕೊಟ್ಟಾಗ ಯಶಸ್ಸಿನ ರೂಪದಲ್ಲೆ ನಮಗೆ ಬೇರೆಯವರಿಂದ ಗೌರವ ತಂದುಕೊಡುತ್ತದೆ ಎಂಬುದಕ್ಕೆ ನನಗೆ ಸಿಕ್ಕಿರುವ ಗೌರವ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಗೌರವಿಸಿ ಶ್ರದ್ದೆಯಿಂದ ಕೆಲಸ ಮಾಡಿದರೆ ಅವರಿಗೆ ದೇವರೆ ಯಶಸ್ಸು ನೀಡುತ್ತಾನೆ ಎಂದು ಅಭಿಪ್ರಾಯಿಸಿದರು.

ಇಂದು ನಾನು ಅಯೋಧ್ಯಯ ಶ್ರೀರಾಮಲಲ್ಲ ವಿಗ್ರಹ ಕೆತ್ತನೆ ಮಾಡಿದ್ದೇನೆ ಎಂದು ಎಲ್ಲರೂ ನನ್ನನ್ನು ಅಭಿನಂದಿಸುತ್ತಿದ್ದಾರೆ. ಆದರೆ ಅದನ್ನು ನಾನು ಮಾಡಿದ್ದಲ್ಲ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಂಡು ಶ್ರದ್ದೆ ಮತ್ತು ಏಕಾಗ್ರತೆಯಿಂದ ನನ್ನ ಕೆಲಸ ಮಾಡಿದ್ದರಿಂದ ಕಲ್ಲಿನಲ್ಲಿ ಬಾಲರಾಮನು ನೆಲೆಗೊಂಡಿದ್ದಾನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ದೇವರು ಕೊಡುವ ಅವಕಾಶವನ್ನು ಶ್ರದ್ಧೆಯಿಂದ ನಿಭಾಯಿಸಿ ಅಂದಿನ ಕೆಲಸವನ್ನು ಅಂದೇ ಮಾಡಿದರೆ ಯಶಸ್ಸು ಮತ್ತು ಆರೋಗ್ಯ ಎಲ್ಲವೂ ಸಿಗುತ್ತದೆ ಎಂದರು.

ಯಾವುದೇ ಕೆಲಸಕ್ಕೂ ಹೊಗಳಿಕೆಯ ಜೊತೆಗೆ ಕೊಂಕು ಮಾತುಗಳು ಬರುವುದು ಸಹಜ, ಈ ನಿಟ್ಟಿನಲ್ಲಿ ಯಾರೋ ಏನೋ ಹೇಳುತ್ತಾರೆ ಎಂದು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡದೆ ಕೈಬಿಟ್ಟರೆ ಅದು ನಮಗೆ ನಷ್ಟವಾಗುತ್ತದೆ. ಶ್ರೀರಾಮಲಲ್ಲನ ವಿಗ್ರಹದ ಕೆತ್ತನೆಗೆ ಆದೇಶ ಬಂದಾಗ ನನ್ನಲ್ಲೂ ಅಳುಕು ಇತ್ತು. ಕಾರಣ ಇಡೀ ವಿಶ್ವವೇ ಮೆಚ್ಚುವಂತೆ ವಿಗ್ರಹ ಕೆತ್ತನೆ ಮಾಡುವುದು ಅಷ್ಟೊಂದು ಸುಲಭವಲ್ಲ. ಅಲ್ಲದೆ ಜನರು ತಮ್ಮದೇ ಕಲ್ಪನೆಯಲ್ಲಿ ದೇವರನ್ನು ಕಲ್ಪಿಸಿಕೊಂಡಿರುತ್ತಾರೆ, ದೇವರು ಈ ರೀತಿ ಆಭರಣ ಹಾಕುತ್ತಾನೆ, ಈ ರೀತಿ ವಸ್ತ್ರ ಹಾಕುತ್ತಾನೆ, ಕಣ್ಣು ಹೀಗಿರಬೇಕು, ಕಿವಿ ಹೀಗಿರಬೇಕು ಎಂದೆಲ್ಲಾ ಕಲ್ಪನೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಬಾಲ ರಾಮ, ಬಾಲ ಕೃಷ್ಣರ ವೇಷ ಹಾಕಿ ಸಂತಸ ಪಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ವಿಗ್ರಹ ಕೆತ್ತನೆಗೆ ಮುನ್ನ ಶಿಲ್ಪಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡುವ ಜೊತೆಗೆ ೫ ಸಾವಿರಕ್ಕೂ ಹೆಚ್ಚು ರಾಮರ ಭಾವಚಿತ್ರಗಳನ್ನು ಸಂಗ್ರಹಿಸಿ ದೇವರನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಕಲ್ಲಿಗೆ ರಾಮಲಲ್ಲನ ರೂಪ ನೀಡುವ ಪ್ರಯತ್ನ ಮಾಡಿದ್ದು ನನ್ನ ಶ್ರದ್ಧೆ ಮತ್ತು ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ ಎಂದು ಶ್ರೀರಾಮಲಲ್ಲ ವಿಗ್ರಹ ಕೆತ್ತನೆಯ ವೇಳೆ ತಮಗಾದ ಅನುಭವಗಳನ್ನು ಹಾಗೂ ಇದಕ್ಕೆ ತಾವು ಮಾಡಿದ ಸಾಧನೆಗಳನ್ನು ಸ್ಮರಿಸಿಕೊಂಡರು.

ಸಾಂತ್ವನ ಪೌಂಡೇಷನ್‌ನ ಸಂಸ್ಥಾಪಕರಾದ ಪವಿತ್ರ ಆರ್. ಪ್ರಭಾಕರ್ ರೆಡ್ಡಿ ಅವರು ಮಾತನಾಡಿ ದೇವರು ಸೃಷ್ಠಿಸಿದ ಪ್ರಕೃತಿಗೆ ಸುಂದರ ರೂಪು ನೀಡುವಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದ್ದು ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣಗಳು, ದೇವಸ್ಥಾನಗಳು ಬೃಹತ್ ಕಟ್ಟಡಗಳು, ಹೀಗೆ ಕಣ್ಮನ ಸೆಳೆಯುವ ದೃಶ್ಯ ವೈಭವಗಳನ್ನು ಸೃಷ್ಠಿಸುವಲ್ಲಿ ವಿಶ್ವಕರ್ಮ ಸಮುದಾಯದ ಕೊಡಗೆ ಅಪಾರ, ಆದರೂ ವಿಶ್ವಕರ್ಮ ಸಮುದಾಯದ ಆಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದಿದೆ ಎಂಬುದು ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರಚಾರ್ ಹಾಗೂ ಅಯೋಧ್ಯೆಯ ಶ್ರೀ ರಾಮಲಲ್ಲ ವಿಗ್ರಹ ರೂವಾರಿ ಅರುಣ್ ಯೋಗಿರಾಜ್ ವಿಶ್ವಕರ್ಮಅವರು ವಿಶ್ವಕರ್ಮ ಸಮುದಾಯದವರು ಎಂಬುದು ನಮ್ಮ ಹೆಮ್ಮೆಯಾಗಿದ್ದು ಎಂದು ಬಣ್ಣಿಸಿದರು.

ವೇದಿಕೆಯಲ್ಲಿ ಅರುಣ್ ಯೋಗಿರಾಜ್‌ಅವರ ತಾಯಿ ಸರಸ್ವತಮ್ಮ, ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ವೀರಭದ್ರಾಚಾರ್, ಉಪಾಧ್ಯಕ್ಷರುಗಳಾದ ಹೆಚ್.ಪಿ. ನಾಗರಾಜಚಾರ್, ಬ್ರಹ್ಮಾಚಾರ್, ಲೆಕ್ಕಪರಿಶೋದಕ ಚಿನ್ನಸ್ವಾಮಾಚಾರ್, ಪ್ರಧಾನ ಕಾರ್ಯದರ್ಶಿ ಜೆ.ಎಸ್. ರಾಜು, ಲಿಂಗರಾಜು ಇತರರು ಇದ್ದರು. ಸಂದರ್ಭದಲ್ಲಿ ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರಚಾರ್ ಹಾಗೂ ಅಯೋಧ್ಯೆಯ ಶ್ರೀ ರಾಮಲಲ್ಲ ವಿಗ್ರಹ ರೂವಾರಿ ಅರುಣ್ ಯೋಗಿರಾಜ್ ವಿಶ್ವಕರ್ಮಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾಳಿಕಾಂಭ ಕಮಟೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರು, ವೀರಭದ್ರಚಾರ್, ಉಪಾಧ್ಯಕ್ಷರುಗಳಾದ ಹೆಚ್.ಪಿ ನಾಗರಾಜಚಾರ್, ಬ್ರಹ್ಮಚಾರ್, ಪ್ರಧಾನ ಕಾರ್ಯದಶಿ ಜೆ.ಎಸ್ ರಾಜು, ಸಹ ಕಾರ್ಯದರ್ಶಿ ಅಶ್ವಥ್‌ಚಾರ್, ಖಜಾಂಚಿ ಎ.ಸಿ ದೇವರಾಜಚಾರ್ (ಭಾಸ್ಕರ್), ಸಹ ಖಜಾಂಚಿ ಕೃಷ್ಣಚಾರ್, ಲೆಕ್ಕಪರಿಶೋಧಕರು ಚಿನ್ನಸ್ವಾಮಚಾರ್, ನಿರ್ದೇಶಕರುಗಳಾದ ರಘುಚಾರ್, ಪದ್ಮಚಾರ್, ಭಾಸ್ಕರ್‌ಚಾರ್, ಮೋಹನ್(ಪ್ರಕಾಶ್) ಮತ್ತು ವಿಶ್ವಕರ್ಮ ಜನಾಂಗದ ಮುಖಂಡರುಗಳಾದ ಪದ್ಮಮ್ಮ, ಅರುಣ್‌ಯೋಗಿರಾಜು ಅವರ ಮಾತೃಶ್ರೀ ಸರಸ್ವತಮ್ಮ, ಪವಿತ್ರ ಆರ್. ಪ್ರಭಾಕರ್ ರೆಡ್ಡಿ, ನಾಗೇಶ್‌ಚಾರ್, ಸಿ.ಜಿ ರಮೇಶ್‌ಕುಮಾರ್, ರಾಜೇಂದ್ರ (ಪಾಲಿಸ್‌ರಾಜು), ರಾಜಶೇಖರ್ ಶಿಕ್ಷಕರು, ರಮೇಶ್ ಸುಮಂಗಲಿ ಜ್ಯೂಯಲೆರಿ, ನಿಂಗರಾಜು ಎ.ವಿ ಹಳ್ಳಿ, ಸುರೇಶ್ ಮಂಗಾಡಹಳ್ಳಿ, ನಾಗರಾಜು ಹೊಂಗನೂರು, ಜಗ ಮಂಗಳವಾರಪೇಟೆ, ಚಂದ್ರ, ರವಿ ಬ್ರಹ್ಮಣಿಪುರ, ರಾಜೇಶ್ ಚಕ್ಕೆರೆ, ಬೆಳಕೆರೆ ರಾಜೇಶ್, ಚಂದು ಸುಣ್ಣಘಟ್ಟ, ಸುರೇಶ್ ಹಾರ್ಡ್‌ವೇರ್, ಭೂಹಳ್ಳಿ ಕುಮಾರ್, ಅರವಿಂದ್, ಚರಣ್, ಚಂದನ, ರಾಖಿ, ಸುಮಂತ್, ವಿನಯ್, ಕೆಂಪಣ್ಣ, ತಾಂಡವಚಾರ್, ರಾಜು ಮಾರ್ಚನಹಳ್ಳಿ, ರಂಜಿತ್, ಸಿದ್ದರಾಜು ಮಂಗಳವಾರಪೇಟೆ, ಬಾಬು, ಕೃಷ್ಣ, ಪುಟ್ಟಸ್ವಾಮಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular