Saturday, April 19, 2025
Google search engine

Homeರಾಜ್ಯಸುದ್ದಿಜಾಲಯಳಂದೂರು : ೧೮ನೇ ಉಚಿತ ಕುಡಿತದ ಚಟ ಬಿಡಿಸುವ ಶಿಬಿರ

ಯಳಂದೂರು : ೧೮ನೇ ಉಚಿತ ಕುಡಿತದ ಚಟ ಬಿಡಿಸುವ ಶಿಬಿರ

ಯಳಂದೂರು: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮೈಸೂರಿನ ಜೆ ಎಸ್ ಎಸ್ ಮಹಾವಿದ್ಯಾಪೀಠದ ವತಿಯಿಂದ ೧೮ನೇ ಉಚಿತ ಕುಡಿತದ ಚಟ ಬಿಡಿಸುವ ಶಿಬಿರವು ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದುಗ್ಗಹಟ್ಟಿ ರಾಜೇಶ್ ಮಾತನಾಡಿ ಮಧ್ಯವ್ಯಸನಿಗಳನ್ನು ಕುಡಿತದ ಚಟದಿಂದ ಮುಕ್ತಗೊಳಿಸಲು ಕಾರ್ಯಪ್ರವೃತ್ತರಾಗಿರುವ ಮೈಸೂರಿನ ಜೆ ಎಸ್ ಎಸ್ ಮಹಾವಿದ್ಯಾಪೀಠವು ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಇದುವರೆವಿಗೂ ೧೭ ಶಿಬಿರಗಳನ್ನು ಆಯೋಜಿಸಿ೧೫೦೦ಕ್ಕೂ ಹೆಚ್ಚು ಮಂದಿ ಈ ಶಿಬಿರಗಳ ಪ್ರಯೋಜನಗಳನ್ನು ಪಡೆದಿದ್ದಾರೆ. ಮಧ್ಯವ್ಯಸನಿಗಳನ್ನು ತಡೆಗಟ್ಟುವುದರಿಂದ ಸಮಾಜದಲ್ಲಿ ನಡೆಯುವ ಕೌಟುಂಬಿಕ ಕಲಹಗಳನ್ನು ತಡೆಗಟ್ಟಿ, ಸಮಸಮಾಜವನ್ನು ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಮುಖ್ಯಅಥಿತಿಗಳಾಗಿದ್ದ ವೃತ್ತ ನಿರೀಕ್ಷಕರಾದ ಶ್ರೀಕಾಂತ ಮಾತನಾಡಿ ಮಧ್ಯವ್ಯಸನಿಗಳು ಹೆಚ್ಚಾದಷ್ಟು ಸಮಾಜದಲ್ಲಿ ಹಲವಾರು ಬಗೆಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜ ಕಂಟಕರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುತ್ತೂರು ಮಠವು ಇಂತಹ ಉಚಿತ ಕುಡಿತದ ಚಟ ಬಿಡಿಸುವ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವೆಂದರು.

ಈ ಸಂದರ್ಭದಲ್ಲಿ ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿ, ಕೆಸ್ತೂರು ಮಠದ ತೋಂಟದಾರ್ಯಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ತಾಲ್ಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಶಿಬಿರದ ಸಂಚಾಲಕ ಸೋಮಶೇಖರ್, ಶಿಭಿರಾಧಿಕಾರಿ ಮನೋಹರ್, ಹೆಚ್ ಜಿ ಸಂತೋಷ್, ಪ್ರಭುಶಂಕರ್, ರೋಟರಿ ಪ್ರಕಾಶ್, ಗೌಡಳ್ಳಿ ಬಸವಣ್ಣ, ಭೀಮಪ್ಪ, ಜೆ ಶ್ರೀನಿವಾಸ್, ವೈ ಎಂ ನಾಗಣ್ಣ, ಕಟ್ನವಾಡಿ ಸಿದ್ದರಾಜು, ವೈ ಆರ್ ಉಮೇಶ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular