ದಾವಣಗೆರೆ: ಬೆಂಗಳೂರಿಗೆ ರಾಜಸ್ಥಾನದಿಂದ ರೈಲಿನ ಮೂಲಕ ಸರಬರಾಜು ಆಗಿರುವುದು ನಾಯಿ ಮಾಂಸವಲ್ಲ. ಅದು ಮೇಕೆ ಮಾಂಸ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದಂತ ಮಾಂಸ ನಾಯಿಯದ್ದು ಎಂಬುದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಾಂಸದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ಮೇಕೆ ಮಾಂಸ ಎಂಬುದಾಗಿ ತಿಳಿದು ಬಂದಿದೆ. ಆದರೇ ನಾಯಿ ಮಾಂಸ ಎಂಬುದಾಗಿ ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಅಂತ ಹೇಳಿದರು.
ರಾಜಸ್ಥಾನದಿಂದ ವಾರಕ್ಕೊಮ್ಮೆ, ೧೫ ದಿನಗಳಿಗೊಮ್ಮೆ ಈ ರೀತಿಯಾಗಿ ರೈಲಿನ ಮೂಲಕ ಮಾಂಸವನ್ನು ತರುತ್ತಾರೆ. ಹೀಗೆ ತಂದಂತ ಮಾಂಸವನ್ನು ಮಾರಾಟ ಮಾಡುವುದೇ ಅವರ ಪ್ರವೃತ್ತಿಯಾಗಿದೆ. ಆದರೇ ತಂದಿರೋದು ನಾಯಿಯ ಮಾಂಸವಲ್ಲ. ಅದು ಮೇಕೆಯದ್ದು ಎಂಬುದಾಗಿ ಲ್ಯಾಬ್ ರಿಪೋರ್ಟ್ ನಿಂದ ದೃಢಪಟ್ಟಿದೆ ಎಂದು ಸ್ಪಷ್ಟ ಪಡಿಸಿದರು.