ಮೈಸೂರು: ಪ್ರತಿನಿತ್ಯ ಕಾರ್ಯ ನಿರತರಾಗಿರುವ ಪತ್ರಕರ್ತರಿಗೆ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗಳಲ್ಲಿ ಕೇಂದ್ರ ಸರ್ಕಾರದಿಂದ ಶುಲ್ಕ ವಿನಾಯಿತಿ ಕೊಡಿಸುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮನವಿ ಮಾಡಲಾಯಿತು.
ನಗರದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಕೆ.ದೀಪಕ್ ಮತ್ತು ಪ್ರಧಾನ ಕಾರ್ಯ ದರ್ಶಿ ಧರ್ಮಾಪುರ ನಾರಾಯಣ್ ಅವರು ಬಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ನೀಡಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಪತ್ರ ಹೊಂದಿರುವ ಸದಸ್ಯರಿಗೆ ಟೋಲ್ ಗಳಲ್ಲಿ ಶುಲ್ಕ ವಿನಾಯಿತಿ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೂತನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಗೌಡ, ಸುರೇಶ್ ಬಾಬು, ಹನೂರು ಮಂಜುನಾಥ, ಕೆ.ಆರ್.ಪೇಟೆ ಮಂಜುನಾಥ್, ಮಂಜೇಗೌಡ, ವಿವೇಕ್, ಮಾಜಿ ಶಾಸಕ ಸಾ.ರಾ ಮಹೇಶ್, ಉಪಾಧ್ಯಕ್ಷ ರವಿಪಾಂಡವಪುರ, ಸದಸ್ಯ ಸೋಮಶೇಖರ್, ಇದ್ದರು.