Sunday, April 20, 2025
Google search engine

Homeರಾಜ್ಯ14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 3ರಂದು ಪ್ರತಿಭಟನೆ

14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್ 3ರಂದು ಪ್ರತಿಭಟನೆ

ಬೆಂಗಳೂರು: ಐಟಿ ವಲಯದಲ್ಲಿ ಕೆಲಸ ಮಾಡುವ ನೌಕರರ ಕೆಲಸದ ಅವಧಿಯನ್ನು ೧೪ ಗಂಟೆಗಳಿಗೆ ಏರಿಸುವ ಪ್ರಸ್ತಾಪವನ್ನು ಹಲವು ಕಂಪೆನಿಗಳ ಐಟಿ ಉದ್ಯೋಗಿಗಳು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.ಆಗಸ್ಟ್ ೩ರಂದು ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಷ್ಕರ ನಡೆಯಲಿದೆ.

ಕೆಲಸದ ಅವಧಿಯನ್ನು ೧೪ ಗಂಟೆಗೆ ವಿಸ್ತರಣೆ ಮಾಡಲು ಕರ್ನಾಟಕ ಸಚಿವ ಸಂಪುಟ ಚಿಂತಿಸಿತ್ತು. ಈ ಬಗ್ಗೆ ಐಟಿ ಕಂಪನಿಗಳು ಮಗುಂ ಆಗಿದ್ದವು. ಇದು ಐಟಿ ಉದ್ಯೋಗಿಗಳನ್ನು ಕೆರಳಿಸಿದೆ. ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಐಟಿ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿಯಲು ಐಟಿ ಉದ್ಯೋಗಿಗಳು ನಿರ್ಧರಿಸಿದ್ದಾರೆ. ಐಟಿ ಎಂಪ್ಲಾಯೀಸ್ ಅಸೋಸಿಯೇಷನ್ ಈ ಬಗ್ಗೆ ಹೋರಾಡಲು ತೀರ್ಮಾನಿಸಿದ್ದು, ಸಾವಿರಾರು ಐಟಿ ಉದ್ಯೋಗಿಗಳು ಸೇರಿ ಆಗಸ್ಟ್ ೩ರಂದು ಪ್ರತಿಭಟಿಸಲು ಮುಂದಾಗಿದ್ದಾರೆ.

೧೪ ಗಂಟೆ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿದ್ದ ಸಾಫ್ಟ್‌ವೇರ್ ಉದ್ಯೋಗಿಗಳು ಮೊನ್ನೆ ಮಡಿವಾಳ, ಬಿಟಿಎಂ ಲೇಔಟ್‌ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನಂತರ ಈ ಕುರಿತು ಇಮೇಲ್ ಚಳುವಳಿ ಆರಂಭಿಸಿದ್ದರು.

RELATED ARTICLES
- Advertisment -
Google search engine

Most Popular