Saturday, April 19, 2025
Google search engine

Homeರಾಜ್ಯಸುದ್ದಿಜಾಲಶ್ಲೋಕ ಪಠಣದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್

ಶ್ಲೋಕ ಪಠಣದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್

ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿ ಪೃಥು ಪಿ ಅದ್ವೈತ್ ಶ್ಲೋಕ ಪಠಣ ದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.‌

ಪುನೀತ್ ಜಿ ಕೂಡ್ಲೂರು ಹಾಗೂ ಪೂಜಾ ಎನ್ ದಂಪತಿಗಳ ಪುತ್ರ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಶಾಲೆಯಲ್ಲಿ ನೆಡೆದ ವಿಶ್ವ ದಾಖಲೆ ಮಹೋತ್ಸವ -2024 ರಲ್ಲಿ ಭಾಗವಹಿಸಿ Most Shlokas Recited in 30 Minutes by an individual Minor Male ಎಂಬ ವಿಭಾಗದಲ್ಲಿ 30 ನಿಮಿಷದಲ್ಲಿ 150 ಶ್ಲೋಕಗಳನ್ನು ಹೇಳಿ ಮೂರು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾನೆ.

Elite World Record, Asian Records Academy ಹಾಗೂ India Records Academy ಎಂಬ ಮೂರು ಸಂಸ್ಥೆಗಳು ಪ್ರತ್ಯೇಕವಾಗಿ ವಿಶ್ವ ದಾಖಲೆಯನ್ನು ದಾಖಲು ಮಾಡಿ ವಿಶ್ವ ದಾಖಲೆಯ ಪ್ರಮಾಣ ಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಷಿಯನ್ ರೆಕಾರ್ಡ್ಸ್ ಅಕಾಡೆಮಿ ವಿಶ್ವ ದಾಖಲೆ ಸಂಸ್ಥೆಯ ಪ್ರತಿಭಾ ರವರು ಪೃಥು ಪಿ ಅದ್ವೈತ್ ರವರು ತಮ್ಮ ಏಳನೇ ವರ್ಷದ ವಯಸ್ಸಿನಲ್ಲಿ ಯಾವುದೇ ತಪ್ಪಿಲ್ಲದೆ, ಸ್ಪಷ್ಟವಾಗಿ 150 ಶ್ಲೊಕಗಳನ್ನು ನಿರಂತರವಾಗಿ ಹೇಳುವುದು ಸಾಮಾನ್ಯವಾದ ಸಂಗತಿಯಲ್ಲ. ಏಳು‌ ವರ್ಷ ವಯಸ್ಸಿನಲ್ಲಿ 10-15 ವಾಕ್ಯಗಳನ್ನು ಒಂದೇ ಸಮನೆ ಹೇಳುವುದು ಸಹ ಕಷ್ಟ ಆದರೆ ಈತ ನಿರರ್ಗಳವಾಗಿ, ಕ್ರಮ ಬದ್ಧವಾಗಿ ಹೇಳಿರುವುದು ಶ್ಲಾಘನೀಯ ಏಷಿಯನ್ ರೆಕಾರ್ಡ್ಸ್ ಅಕಾಡೆಮಿ ಇವನ ಸಾಧನೆಯನ್ನು ಮಣ್ಣಿಸಿ ಅವನಿಗೆ ಏಷಿಯನ್ ರೆಕಾರ್ಡ್ಸ್ ಅಕಾಡೆಮಿ ವಿಶ್ವ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.

ಎಲೈಟ್ ವರ್ಲ್ಡ್ ರೆಕಾರ್ಡ್ ನ ಪ್ರಮುಖರಾದ ಮೀತ್ .ಕೆ. ಹಿಂಗೂರಾಣಿ ರವರು ತಂದೆ ಮನೆಯಲ್ಲಿ ಹೇಳುವ ಶ್ಲೋಕ ಮಂತ್ರಗಳನ್ನು ಕೇಳಿ ಪೃಥು ಕಲೆತು ಇಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ನಮಗೆ ಇನ್ನೂ ಒಂದು ವರ್ಷ ಕಲೆತರು ಇಷ್ಟು ಹೇಳುವುದು ಅಸಾಧ್ಯ ಎಂದು ಪೃಥುವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ದರ್ಶನ್ ಹಾಗೂ ಮಾಧುರ್ಯ ರವರು ಮಾತನಾಡಿ ನಮ್ಮ ಶಾಲೆಯ ಪ್ರತಿ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ನಮ್ಮ ಕರ್ತವ್ಯ. ಪ್ರತಿ ಮಕ್ಕಳ ಸಾಧನೆಗೆ ಶಿಕ್ಷಣ ಸಂಸ್ಥೆಯಾಗಿ ನಮ್ಮ ಸಂಸ್ಥೆ ಸದಾ ಕಾಲ ಬೆನ್ನುಲಾಬಾಗಿ ನಿಂತಿರುತ್ತದೆ ಎಂದು ತಿಳಿಸಿದರು.‌

ಪೃಥು ವಿನ ತಂದೆ ಪುನೀತ್ ಜಿ ಕೂಡ್ಲೂರು ಮಾತನಾಡಿ ಶಾಲೆ ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಶಾಲೆಯ ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ನನ್ನ ಮಗ ಶ್ಲೋಕ ಹೇಳುವುದನ್ನು ಗುರುತಿಸಿ ಇಷ್ಟು ದೊಡ್ಡ ಮಟ್ಟದ ವೇದಿಕೆ ನಿರ್ಮಿಸಿ ವಿಶ್ವ ದಾಖಲೆ ನಿರ್ಮಿಸಿಸಿದ್ದಾರೆ. ಶಾಲೆ ಇವನ ದಾಖಲೆ ಪ್ರಯತ್ನದ ಹಾದಿಯ ತಯಾರಿ ಹಂತದಲ್ಲಿ ಪ್ರತಿ ದಿನ ನಿಗಾವಹಿಸಲು ಶಿಕ್ಷಕಿ ಗೋಮತಿ ರವರವನ್ನು ನಿಗದಿ ಪಡಿಸಿ ಪ್ರತಿ ದಿನ ಪರಿ ಪಕ್ವ ಮಾಡಿದರು. ನಾನು ಶಾಲೆಗೆ   ಹಾಗೂ ಶಿಕ್ಷಕಿಯರಾದ ಗೋಮತಿ‌ , ಶುಭಾ ಹಾಗೂ ಎಲ್ಲಾ ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಗೆ ಕೃತಜ್ಞ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೃಥು ವಿನ ತಂದೆ ಪುನೀತ್ ಜಿ, ತಾಯಿ ಪೂಜಾ ಎನ್, ಕೆ.ಆರ್. ಗಣೇಶ್, ಸರಸ್ವತಿ, ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ , ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಶಾಲಾ ಡೀನ್  ಲಾವಣ್ಯ, ಪ್ರಾಂಶುಪಾಲೆ ಪ್ರಿಯಾಂಕಾ ಹಾಗೂ ಶಾಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular