Saturday, April 19, 2025
Google search engine

Homeರಾಜ್ಯಕೇರಳದಲ್ಲಿ ಭೂಕುಸಿತ : 165ಕ್ಕೂ ಹೆಚ್ಚು ಸಾವು

ಕೇರಳದಲ್ಲಿ ಭೂಕುಸಿತ : 165ಕ್ಕೂ ಹೆಚ್ಚು ಸಾವು

200 ಜನ ನಾಪತ್ತೆ, ಮಳೆಗೆ ಕೊಚ್ಚಿಹೋದ ಮುಂಡಕೈ ಸೇತುವೆ

ವಯನಾಡು(ಕೇರಳ) : ನಿರಂತರ ಮಳೆಯಿಂದ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ 165ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ೧೫೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ೨೦೦ ಮಂದಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.

ಭಾರಿ ಮಳೆಯಿಂದ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳು ಉಂಟಾಗಿದ್ದು, ರಾಜ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ನಲ್ಲಿ ಭೂ ಕುಸಿತದಿಂದ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಈ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಭೂಕುಸಿತಗಳ ಸಂತ್ರಸ್ತರಿಗೆ ಆಹಾರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ರಾಜ್ಯದ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ. ‘ಭೂಕುಸಿತದಿಂದ ವೈಥಿರಿ, ವೆಲ್ಲರಿಮಲ ಮತ್ತು ಮೆಪ್ಪಾಡಿ ಬಾಧಿತವಾಗಿದೆ.

ಈ ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು, ಚೂರಲ್ಮಲ ಮತ್ತು ಮುಂಡಕ್ಕೈ ಸಂಪರ್ಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ಅಲ್ಲಿಗೆ ತಲುಪುವುದು ಕಷ್ಟಕರವಾಗಿದೆ. ಸದ್ಯ ಮುಂಡಕ್ಕೈನಲ್ಲಿ ಎನ್‌ಡಿಆರ್‌ಎಫ್‌ನ 20 ಸದಸ್ಯರ ತಂಡವನ್ನು ನಿಗದಿಪಡಿಸಲಾಗಿದೆ, ಸೇತುವೆ ಕುಸಿತದಿಂದ ಹೆಚ್ಚುವರಿ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ತೊಡಕುಂಟಾಗಿದೆ. ಮುಂಡಕ್ಕೈನಲ್ಲಿ ಭೂಕುಸಿತದಿಂದ ಉಂಟಾದ ಹಾನಿಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. `ಘಟನಾ ಸ್ಥಳದಲ್ಲಿ ನೀರು ಹಾಗೂ ಕೆಸರಿನಲ್ಲಿ ಸಿಲುಕಿರುವ ಹಲವು ಮೃತದೇಹಗಳನ್ನು ರಕ್ಷಣಾ ತಂಡ ಹೊರಕ್ಕೆ ತೆಗೆದಿದೆ.

ಈ ಹಂತದಲ್ಲಿ ಮೃತರಾದವರ ನಿಖರ ಸಂಖ್ಯೆಯನ್ನು ಹೇಳುವುದು ಕಷ್ಟ’. ದುರಂತಕ್ಕೆ ತೀವ್ರ ಕಂಬನಿ ಮಿಡಿದಿರುವ ಮುಖ್ಯಮಂತ್ರಿ, `ದುರಂತದಲ್ಲಿ ತಮ್ಮವರನ್ನು, ಮನೆ ಹಾಗೂ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಇದೊಂದು ದೊಡ್ಡ ದುರಂತ. ಬಾಕ್ಸ್ ಕನಿಷ್ಠ 4000ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ. ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ. ಪೋತುಕಲ್ ಗ್ರಾಮದ ಬಳಿಯ ನದಿಯ ದಡದಿಂದ ಐದು ವರ್ಷದ ಮಗು ಸೇರಿದಂತೆ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ.

ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಟ್ಟಡ, ಸ್ವಯಂ ಸೇವಕರು ಮತ್ತು ಸೇನಾ ಹೆಲಿಕಾಪ್ಟರ್‌ಗಳು ಸಹ ಕಾರ್ಯಾಚರಣೆಯಲ್ಲಿ ತೊಡಗಿವೆ. ೨೦೧೯ ರ ಆಗಸ್ಟ್‌ನಲ್ಲಿ ವಯನಾಡಿನ ಪುತ್ತುಮಲದಲ್ಲಿ ಸಂಭವಿಸಿದ ಭೂಕುಸಿತವನ್ನು ಈ ಘಟನೆ ನೆನಪಿಸಿತು, ಅಂದು ಇಡೀ ಗ್ರಾಮವು ಕೊಚ್ಚಿಹೋಗಿತ್ತು. ಆರೋಗ್ಯ ಇಲಾಖೆ- ರಾಷ್ಟ್ರೀಯ ಮಿಷನ್ ತುರ್ತು ಸಹಾಯಕ್ಕಾಗಿ ಆರೋಗ್ಯ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ಸಹಾಯವಾಣಿ ಸಂಖ್ಯೆಗಳನ್ನು 9656938689 ಮತ್ತು 808601083 ನೀಡಲಾಗಿದೆ.

RELATED ARTICLES
- Advertisment -
Google search engine

Most Popular