Saturday, April 19, 2025
Google search engine

HomeUncategorizedರಾಷ್ಟ್ರೀಯಜೀವ, ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆಗೆದುಹಾಕಲು ನಿತಿನ್ ಗಡ್ಕರಿ ಆಗ್ರಹ

ಜೀವ, ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆಗೆದುಹಾಕಲು ನಿತಿನ್ ಗಡ್ಕರಿ ಆಗ್ರಹ

ನವದೆಹಲಿ: ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂಗಳ ಮೇಲಿನ ೧೮% ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ತೆಗೆದುಹಾಕುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಜುಲೈ ೨೮ ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ, ಈ ಪ್ರೀಮಿಯಂಗಳಿಗೆ ತೆರಿಗೆ ವಿಧಿಸುವುದು ಜೀವನದ ಅನಿಶ್ಚಿತತೆಗಳಿಗೆ ತೆರಿಗೆ ವಿಧಿಸುವುದಕ್ಕೆ ಸಮನಾಗಿರುತ್ತದೆ ಮತ್ತು ವಿಮಾ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಗಡ್ಕರಿ ವಾದಿಸಿದ್ದಾರೆ.

ಹಿರಿಯ ನಾಗರಿಕರಿಗೆ ತೊಡಕಾಗುವುದರಿಂದ ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್ಟಿಯನ್ನು ಆದ್ಯತೆಯ ಮೇರೆಗೆ ಹಿಂತೆಗೆದುಕೊಳ್ಳುವ ಸಲಹೆಯನ್ನು ಪರಿಗಣಿಸುವಂತೆ ನಿಮ್ಮನ್ನು ವಿನಂತಿಸಲಾಗಿದೆ ಎಂದು ಗಡ್ಕರಿ ಬರೆದಿದ್ದಾರೆ. ಅಂತೆಯೇ, ವೈದ್ಯಕೀಯ ವಿಮಾ ಪ್ರೀಮಿಯಂ ಮೇಲೆ ೧೮% ಜಿಎಸ್ಟಿ ಸಾಮಾಜಿಕವಾಗಿ ಅಗತ್ಯವಾದ ಈ ವಿಭಾಗದ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು.

ಉದ್ಯಮದ ಸವಾಲುಗಳನ್ನು ಎತ್ತಿ ತೋರಿಸುವ ನಾಗ್ಪುರ ವಿಭಾಗೀಯ ಜೀವ ವಿಮಾ ನಿಗಮ ನೌಕರರ ಒಕ್ಕೂಟದ ಜ್ಞಾಪಕ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಗಡ್ಕರಿ ಅವರ ಪತ್ರ ಬಂದಿದೆ ಎಂದು ಅವರು ಹೇಳಿದರು.

RELATED ARTICLES
- Advertisment -
Google search engine

Most Popular