Saturday, April 19, 2025
Google search engine

Homeರಾಜ್ಯಸುದ್ದಿಜಾಲವ್ಯಸನ ಮುಕ್ತ ಸಮಾಜಕ್ಕಾಗಿ ಜೋಳಿಗೆ ಹಿಡಿದ ಮಹಾತ್ಯಾಗಿ ಡಾ.ಮಹಾಂತ ಯೋಗಿಗಳು-ಜೆ. ಮಂಜುನಾಥ್ ಬಣ್ಣನೆ

ವ್ಯಸನ ಮುಕ್ತ ಸಮಾಜಕ್ಕಾಗಿ ಜೋಳಿಗೆ ಹಿಡಿದ ಮಹಾತ್ಯಾಗಿ ಡಾ.ಮಹಾಂತ ಯೋಗಿಗಳು-ಜೆ. ಮಂಜುನಾಥ್ ಬಣ್ಣನೆ

ಹುಣಸೂರು: ಸಮಾಜದ ಬಡಜನರು ವ್ಯಸನ ಮುಕ್ತರನ್ನಾಗಿಸಲು ಜೋಳಿಗೆ ಹಿಡಿದ ಮಹಾತ್ಯಾಗಿ ಡಾ.ಮಹಾಂತ ಯೋಗಿಗಳು ಎಂದು ತಹಶೀಲ್ದಾರ್ ಜೆ. ಮಂಜುನಾಥ್ ತಿಳಿಸಿದರು.

ನಗರದ ಜೂನಿಯರ ಕಾಲೇಜಿನ ಆವರಣದ ಫ್ರೌಡಶಾಲೆಯಲ್ಲಿ ಡಾ.ಮಹಾಂತ ಯೋಗಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ, ವ್ಯಸನ ಮುಕ್ತ ಸಮಾಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವ್ಯಸನ ಮುಕ್ತ ಸಮಾಜಕ್ಕಾಗಿ ಯೋಗಿಗಳು 1972 ರಲ್ಲೆ ಬಡವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನ ಮುಡುಪಾಗಿಟ್ಟವರು ಎಂದರು.

ನಾಲ್ಕು ದಶಕಗಳ ಕಾಲ ಬೀದಿ, ಬೀದಿ ಸುತ್ತುವ ಮೂಲಕ ಪರಿಶಿಷ್ಟ ವರ್ಗಗಳು ದುಶ್ಚಟಕ್ಕೆ ದಾಸರಾಗಿದ್ದನ್ನು ಮನಗೊಂಡ ಅವರು ಮನೆಮನೆಗೆ ತೆರಳಿ ಅವರು ಕಲಿತಿದ್ದ ಬೀಡಿ, ಸಿಗರೇಟು, ಮದ್ಯಪಾನ ಗುಟುಕ ಇನ್ನಿತರೆ ವ್ಯಸನಗಳನ್ನು ನನ್ನ ಜೋಳಿಗೆಗೆ ಹಾಕಿ ಇನ್ನು ಮುಂದೆ ಕೆಟ್ಟದನ್ನು ಮುಟ್ಟಬಾರದು ಎಂದು ಅರಿವು ಮೂಡಿಸಿ ಸಮಾಜದಿಂದ ವ್ಯಸನವನ್ನು ಬದಿಗೆ ಸರಿಸಿದ ಮಹಾಯೋಗಿ ಇವರು ಎಂದರು.

ತಾಲೂಕು ಶಿಕ್ಷಣಾಧಿಕಾರಿ ಮಹದೇವಸ್ವಾಮಿ ಮಾತನಾಡಿ, ಇತ್ತೀಚೆಗೆ ಈ ಮದ್ಯಪಾನ ಎಂಬ ಮಹಾಮಾರಿ ಅರಿವಿನ ಕೊರತೆಯಿಂದ, ನಮ್ಮ ಕುಟುಂದ ಸದಸ್ಯರನ್ನೆ ಬಲಿ ಪಡೆಯುತ್ತಿದ್ದು ಅದರ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು.

ಕುಡಿತ ಎಷ್ಟು ಮಾರಕವೆಂದರೆ, ಒಮ್ಮೆ ಅದರ ದಾಸನಾದರೆ ಅದರಿಂದ ಹೊರ ಬರುವುದು ಅಸಾಧ್ಯವಾದ ಸಂಗತಿ. ಇದಕ್ಜೆ ಉದಾಹರಣೆ ನಮ್ಮ ಮೈಸೂರಿನ ಸುಪ್ರಸಿದ್ದ ಹಿನ್ನಲೆ ಗಾಯಕ ಅನಂತಸ್ವಾಮಿ ಮದ್ಯಪಾನದಿಂದ ದೂರವಾಗದ ಕಾರಣ. ಒಬ್ಬ ಉತ್ತಮ ಕಲಾವಿದನನ್ನು ನಾವು ಕಳದುಕೊಳ್ಳಬೇಕಾಯಿತು. ಆದ್ದರಿಂದ ಯಾವುದೇ ವ್ಯಸನವಾಗಿರಲಿ ಅದರಿಂದ ಮುಕ್ತರಾಗಬೇಕೆಂದರು.

ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನ ಕೆ.ಪಿ. ಮಾತನಾಡಿ, ಸಮಾಜದ ಏಳುಬೀಳುಗಳನ್ನು ರೂಪಿಸಬೇಕಾದ ನೀವುಗಳು. ದುಶ್ಚಟಗಳ ಬಗ್ಗೆ ಅರಿವು ಪಡೆದು ತಂದೆ, ತಾಯಿ, ಸುತ್ತಮುತ್ತಲಿನವರಿಗೆ ಮತ್ತ ಮುಂದಿನ‌ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕೆಂದರು.

ಕಾರ್ಯಕ್ರಮದಲ್ಲಿ , ಉಪತಹಶೀಲ್ದಾರ್ ಶ್ರೀ ಪಾದ, ರೊ.ಸಂತೋಷ್ ಕುಮಾರ್, ಪ್ರಾಂಶುಪಾಲೆ ಭವಾನಿ, ಶಿಕ್ಷಕರಾದ ತ್ರೀನೇಶ್, ಪ್ರಭಾಕರ್, ರೋಟರಿ ಕಾರ್ಯದರ್ಶಿ ಹೆಚ್.ಆರ್ ಕೃಷ್ಣಕುಮಾರ್ ಇದ್ದರು.

RELATED ARTICLES
- Advertisment -
Google search engine

Most Popular