ಪಾಂಡವಪುರ: ಕಾವೇರಿ ಪ್ರವಾಹದಿಂದ ಜಲಾವೃತವಾಗಿದ್ದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಕೊಪ್ಪಲು ಗ್ರಾಮಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿಕೊಟ್ಟು ನೆರೆ ಪೀಡಿತ ಪ್ರದೇಶಗಳನ್ನ ವೀಕ್ಷಿಸಿದರು . ಸ್ಥಳೀಯ ನಾಯಕರು, ಮುಖಂಡರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು .

ನಿಖಿಲ್ ಕುಮಾರಸ್ವಾಮಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಹೆಚ್.ಟಿ.ಮಂಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಯುವ ಮುಖಂಡ ಸಿ.ಪಿ.ಶಿವರಾಜ್ ಮತ್ತಿತರರ ಸಾಥ್ ನೀಡಿದರು.
ಕಾವೇರಿ ನದಿ ಪ್ರವಾಹದಿಂದ ಪದೇಪದೇ ಸಮಸ್ಯೆಗೆ ಒಳಗಾಗುತ್ತಿದ್ದು ಗ್ರಾಮಕ್ಕೆ ಬಂದ ನಿಖಿಲ್ ಬಳಿ ಸಮಸ್ಯೆ ಹೇಳಿ ಪರಿಹಾರಕ್ಕೆ ಗ್ರಾಮಸ್ಥರು ಮನವಿ ಮಾಡಿಕೊಂಡರು.