ಮಂಗಳೂರು (ದಕ್ಷಿಣ ಕನ್ನಡ): ಬೀದಿ ಬದಿಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವಿಗಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ನಡೆಯುತ್ತಿದ್ದ ಟೈಗರ್ ಕಾರ್ಯಾಚರಣೆ ಮುಂದುವರಿಯಿತು.

ಮಂಗಳೂರು ನಗರದ ಆರ್ ಟಿಓ ಬಳಿ ಆರಂಭಗೊಂಡ ಕಾರ್ಯಾಚರಣೆ ಸ್ಟೇಟ್ ಬ್ಯಾಂಕ್‌ನ ಮೀನು ಮಾರುಕಟ್ಟೆಯ ಬಳಿ ಫುಟ್ ಪಾತ್ ಅತಿಕ್ರಮಿಸಿಕೊಂಡ ತರಕಾರಿ ಅಂಗಡಿ ಸೇರಿ ಹಲವು ಅಂಗಡಿಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಯಿತು. ಮುಟ್ಟುಗೋಲು ಹಾಕಿದ ಅಂಗಡಿಗಳ ಸರಂಜಾಮುಗಳನ್ನು ಟಿಪ್ಪರ್ ಗಳಲ್ಲಿ ತುಂಬಿಸಿ ಕೊಂಡೊಯ್ಯಲಾಗಿದೆ.
ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಹಾಗೂ ಆಯುಕ್ತರಾದ ಸಿ.ಎಲ್. ಆನಂದ್ ನಿರ್ದೇಶನದಂತೆ ನಿಯಮ ಮೀರಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.
