ರಾಮನಗರ: ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ದಿಗ್ವಿಜಯ್ ಬೋಡ್ಕೆರವರು ಭೇಟಿ ನೀಡಿ, FTO ಮಾಡಿರುವ ಕಾಮಗಾರಿಗಳನ್ನು ವೀಕ್ಷಿಸಿ, ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ಸಹಾಯಧನವನ್ನು ಖಾತೆಗೆ ಜಮೆ ಮಾಡುವಂತೆ ತಿಳಿಸಿದರು.
ಅವರು ಇಂದು ಮೊದಲಿಗೆ ತಿಪ್ಪಸಂದ್ರ ಗ್ರಾಮ ಮತ್ತು ಗುಡ್ಡೇಗೌಡನ ಪಾಳ್ಯದ ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಶುಚಿತ್ವವನ್ನು ಕಾಪಾಡುವಂತೆ ಸೂಚಿಸಿದರು.. ತಿಪ್ಪಸಂದ್ರ ಗ್ರಾಮದ ಚರಂಡಿ, ಮತ್ತು ನೀರು ನಿಲ್ಲದಂತೆ ಸ್ವಚ್ಛಗೊಳಿಸಿ, ಈಗಾಗಲೇ ಮಳೆ ಬೀಳುತ್ತಿದ್ದು ಹಸಿರು ಹೆಚ್ಚಾಗುತ್ತದೆ.. ಕಳೆ ಬಂದಾಗ ಸಾಮಾನ್ಯವಾಗಿ ಸೊಳ್ಳೆಗಳ ಕಾಟವೂ ಜಾಸ್ತಿಯಾಗುತ್ತದೆ.. ಆದ್ಧರಿಂದ ಚರಂಡಿ ವ್ಯವಸ್ಥೆ ಸರಿ ಇದ್ದರೆ ಇಂತಹ ಸಮಸ್ಯೆಗಳು ದೂರವಾಗುತ್ತವೆ.. ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛಗೊಳಿಸಿ ಎಂದು ಹೇಳಿದರು..
ತಾಳೆಕೆರೆ ಗ್ರಾಮದ ಮೇಕೆಶೆಡ್, ಬಗಿನಿಗೆರೆ ಗ್ರಾಮದ ದನದಕೊಟ್ಟಿಗೆ ವೀಕ್ಷಿಸಿದ ಸಿಇಓ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜನರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.. ವೈಯಕ್ತಿಕ ಕಾಮಗಾರಿಗಳು ಸಂಕಷ್ಟದಲ್ಲಿರುವ ರೈತರಿಗೆ ಲಾಭವನ್ನು ತಂದು ಕೊಡುತ್ತವೆ.. ಗ್ರಾಮೀಣ ಭಾಗದಲ್ಲಿ ಸಾಕಷ್ಟು ರೈತರಿಗೆ ಸ್ಥಳದ ಲಭ್ಯತೆ ಇದ್ದರೂ ಸೂಕ್ತ ಹಣಕಾಸಿನ ಸಹಾಯ ಇಲ್ಲದೆ ಮೇಕೆ ಶೆಡ್ಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸಾಕಷ್ಟು ಮಂದಿ ರೈತರು ಮೇಕೆಗಳನ್ನು ತಮ್ಮ ಮನೆಯ ಹಿತ್ತಲು ಸೇರಿದಂತೆ ಅಲ್ಲಲ್ಲಿ ಕಟ್ಟಿಹಾಕಿಕೊಂಡು ಸಾಕಾಣಿಕೆ ಮಾಡುತ್ತಿದ್ದರು.

ಜಾನುವಾರುಗಳಿಗೂ ಸೂಕ್ತ ಕೊಟ್ಟಿಗೆ ನಿರ್ಮಿಸಲಾಗದೇ ರೈತರು ಕಷ್ಟದಲ್ಲಿರುತ್ತಿದ್ದರು.. ಹೀಗಾಗಿ ಭದ್ರತೆ ಇಲ್ಲದೆ ಕಳ್ಳರ ಕಾಟವೂ ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಈ ಎಲ್ಲಾ ಸವಲತ್ತುಗಳು ಲಭಿಸುತ್ತಿದ್ದು, ರೈತರು ಕೂಡ ಬಹಳ ಉತ್ಸುಕತೆಯಿಂದ ದನದಕೊಟ್ಟಿಗೆ, ಆಡು ಶೆಡ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ ಇದೇರೀತಿ ರೈತರು ಮುಂದೆ ಬಂದು ನರೇಗಾ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸದರು..
ಇದೇವೇಳೆ ಹಣದ ವಿಚಾರವಾಗಿಯೂ ಫಲಾನುಭವಿಗಳು ಅಲೆಯುವಂತೆ ಆಗಬಾರದು ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಸಹಾಯಧನವನ್ನು ಖಾತೆಗೆ ಜಮಾ ಮಾಡಿ ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.. ಇದೇವೇಳೆ ಮಾನವ ದಿನಗಳನ್ನು ಸೃಜನೆ ಮಾಡಿ ಪ್ರಗತಿ ಸಾಧಿಸುವಂತೆ ತಿಳಿಸಿದರು.. ಮಾಗಡಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಉತ್ತಮ ಕಾಮಗಾರಿಗಳು ನಡೆಯುತ್ತಿದ್ದು, ಜನರು ಕೂಡ ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ.. ಇದೇರೀತಿ ಮುಂದಿನ ದಿನಗಳಲ್ಲಿಯೂ ಕೂಡ ನೀಡಿರುವ ಗುರಿ ಸಾಧಿಸಿ, ಯೋಜನೆ ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪವಂತೆ ಮಾಡಿ ಎಂದು ಹೇಳಿದರು..
ನಂತರ ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನ ಮಾಡಿರುವ ತೆಂಗು ಬೆಳೆಯನ್ನು ವೀಕ್ಷಿಸಿ, ಕಾಮಗಾರಿ ಸಂಬoಧ ಹಲವು ಕಡತಗಳನ್ನು ಪರಿಶೀಲಿಸಿದರು..
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು, ಸಹಾಯಕ ನಿರ್ದೇಶಕರು ಹೆಚ್.ಕೆ ಗಂಗಾಧರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸತೀಶ್, ತಾಂತ್ರಿಕ ಸಂಯೋಜಕ ಅಭಿಯಂತರರು ಮಹೇಶ್, ತಾಂತ್ರಿಕ ಸಹಾಯಕ ಪ್ರದೀಪ್, ತಾಲ್ಲೂಕು ಐಇಸಿ ಸಂಯೋಜಕ ರವಿ ಅತ್ನಿ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.