Saturday, April 19, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರ ಧ್ವಜದ ವಿಶೇಷತೆ , ಮಹತ್ವ ಕುರಿತು ಜಾಗೃತಿಯ ಕಾರ್ಯಕ್ರಮ ರೂಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯ-ಸುರೇಶ್...

ರಾಷ್ಟ್ರ ಧ್ವಜದ ವಿಶೇಷತೆ , ಮಹತ್ವ ಕುರಿತು ಜಾಗೃತಿಯ ಕಾರ್ಯಕ್ರಮ ರೂಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯ-ಸುರೇಶ್ ಎನ್ ಋಗ್ವೇದಿ

ಪಿಂಗಲಿ ವೆಂಕಯ್ಯ ಭಾವಚಿತ್ರ ಹಾಗು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಕೆ

ಚಾಮರಾಜನಗರ: ಭಾರತದ ರಾಷ್ಟ್ರಧ್ವಜದ ಪರಿಕಲ್ಪನೆ ವಿನ್ಯಾಸಕಾರ ಪಿಂಗಲಿ ವೆಂಕಯ್ಯ ಅಪ್ಪಟ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಬಹುಭಾಷಾವಾದಿ, ಉಪನ್ಯಾಸಕ, ಶಿಕ್ಷಣ ತಜ್ಞ, ಭೂ ವಿಜ್ಞಾನಿ, ಸೈನಿಕರಾಗಿ ಸೇವೆ ಸಲ್ಲಿಸಿದ ವೆಂಕಯ್ಯ ರವರನ್ನು ಗೌರವಿಸುವುದು ಭಾರತೀಯರ ಕರ್ತವ್ಯವೆಂದು ರಾಷ್ಟ್ರ ಯುವ ಪ್ರಶಸ್ತಿ ವಿಜೇತ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಸುಭಾಷ್ ಚಂದ್ರ ಬೋಸ್ ರವರ ನೆನಪಿನಲ್ಲಿ ನಿರ್ಮಿಸಿರುವ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಪಿಂಗಲಿ ವೆಂಕಯ್ಯ ಭಾವಚಿತ್ರ ಹಾಗು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಮಾತನಾಡುತ್ತಾ ರಾಷ್ಟ್ರಧ್ವಜ ನಿರ್ಮಾಣವು ಪ್ರತಿಯೊಬ್ಬ ನಾಗರಿಕನ ಮತ್ತು ದೇಶದ ಗೌರವ ಸಂಕೇತ. ಭಾರತದಲ್ಲಿ ಪುರಾತನ ಕಾಲದಿಂದಲೂ ತಮ್ಮದೇ ಆದ ಧ್ವಜಗಳನ್ನು ಹೊಂದಿ ರಾಜ ಮಹಾರಾಜರು ಗೌರವಿಸುವ ಮೂಲಕ ಅಖಂಡ ಭಾರತದ ಶ್ರೇಷ್ಠ ಚಿಂತನೆಗಳನ್ನು ಮೂಡಿಸಿದ್ದರು. ನಂತರದ ಕಾಲದಲ್ಲೂ ರಾಷ್ಟ್ರ ಧ್ವಜದ ಪರಿಕಲ್ಪನೆ ನಿರಂತರವಾಗಿ ಪ್ರತಿ ದೇಶದಲ್ಲೂ ಮೂಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವೆಂಕಯ್ಯನವರು ರೂಪಿಸಿದ ರಾಷ್ಟ್ರ ಧ್ವಜವನ್ನು 19201 ರಲ್ಲಿ ಗಾಂಧೀಜಿಯವರು ಅನುಮೋದಿಸಿ ಅಂತಿಮ ಪರಿಷ್ಕರಣೆ ಮಾಡಿ 1947 ರಲ್ಲಿ ಅಂಗೀಕರಿಸಲಾಯಿತು.

ಕೇಸರಿ ತ್ಯಾಗ ಬಲಿದಾನದ ಸಂಕೇತವಾಗಿದ್ದು ,ಬಿಳಿ ಬಣ್ಣ ಸತ್ಯ,ಶಾಂತಿ ಹಾಗೂ ಹಸಿರು ಸಮೃದ್ಧಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ .ಅಶೋಕ ಚಕ್ರವು ನ್ಯಾಯ ಧರ್ಮದ ಸಂಕೇತವಾಗಿ ಪ್ರತಿಯೊಬ್ಬ ಭಾರತೀಯನ ಉತ್ಸಾಹವನ್ನು ,ದೇಶಭಕ್ತಿಯನ್ನು, ರಾಷ್ಟ್ರ ಚಿಂತನೆಯನ್ನು ಮೂಡಿಸುತ್ತದೆ.

ರಾಷ್ಟ್ರಧ್ವಜವು ಸ್ವತಂತ್ರ ದೇಶದ ಸಂಕೇತವಾಗಿದ್ದು, ಪ್ರತಿ ಮನೆ ಮನಯಲ್ಲೂ ರಾಷ್ಟ್ರಧ್ವಜಕ್ಕೆ ಗೌರವಿಸುವ ಮನೋ ಧರ್ಮವನ್ನು ಬೆಳೆಸಿಕೊಳ್ಳಬೇಕು .ರಾಷ್ಟ್ರ ಧ್ವಜದ ವಿಶೇಷತೆ ಮತ್ತು ಮಹತ್ವದ ಕುರಿತು ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸುವುದು ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಗ ಸುಂದರ್, ಶ್ರಾವ್ಯ ಋಗ್ವೇದಿ,.ಕುಸುಮ, ಮುರುಗೇಶ್, ರವಿ, ಶಂಕರ, ರಾಜು, ಪ್ರಕಾಶ, ಮಂಜು, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular