Saturday, April 19, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲೂಕಿನ‌ ಚುಂಚನಕಟ್ಟೆಯಲ್ಲಿ ಕಾವೇರಿ ನದಿಗೆ ಬಾಗಿನ‌ ಅರ್ಪಿಸಿದ ಶಾಸಕ ಡಿ.ರವಿಶಂಕರ್

ಸಾಲಿಗ್ರಾಮ ತಾಲೂಕಿನ‌ ಚುಂಚನಕಟ್ಟೆಯಲ್ಲಿ ಕಾವೇರಿ ನದಿಗೆ ಬಾಗಿನ‌ ಅರ್ಪಿಸಿದ ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ನವರು ಗುತ್ತಿಗೆ ನೊಂದಣಿ ಮಾಡಿ ಕೊಂಡು ಕಾರ್ಖಾನೆ ಆರಂಭಿಸಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ‌ ಕಾವೇರಿ ನದಿಗೆ ಬಾಗಿನ‌ ಅರ್ಪಿಸಿ ನಂತರ ಮಾತನಾಡಿದ ಅವರು ಈಗಾಗಲೇ ಕಾರ್ಖಾನೆ ಅರಂಭಕ್ಕೆ ಕ್ರಮಕೈಗೊಳ್ಳಲು ನಿರಾಣಿ ಶುಗರ್ಸ್ ನವರು ನೊಂದಣಿಗೆ ಕ್ರಮಕೈಗೊಳ್ಳುವಂತೆ ಸಕ್ಕರೆ ಸಚಿವರಿಗೆ ಮನವಿ ಮಾಡಲಾಗಿದ್ದು, ಸದ್ಯದಲ್ಲಿಯೇ ಕಾರ್ಖಾನೆಯ ಆರಂಭದ ಬಗ್ಗೆ ಸಿಹಿ ಸುದ್ದಿ ನೀಡುತ್ತೇನೆ ಎಂದರು.

ಕಳೆದ ಬಾರಿ ಬರಗಾಲದ ಹಿನ್ನಲೆಯಲ್ಲಿ ಇಲ್ಲಿ ಆಯೋಜಿಸ ಬೇಕಿದ್ದ ಜಲಪಾತ ಉತ್ಸವ ಕಾರ್ಯಕ್ರಮವನ್ನು ಈ ಬಾರಿ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದು, ಅತಿ ಶೀಘ್ರದಲ್ಲಿಯೇ ಕಾರ್ಯಕ್ರಮದ ರೂಪು-ರೇಷೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಇದಲ್ಲದೇ ಚುಂಚನಕಟ್ಟೆ ಗ್ರಾಮವನ್ನು ಮತ್ತಷ್ಟು ಪ್ರವಾಸಿ ತಾಣ ಮಾಡಲು ಅಗಬೇಕಾದ ಅಭಿವೃದ್ದಿಗೆ ಇನ್ನಷ್ಟು ಅನುಧಾನವನ್ನು ಬಿಡುಗಡೆ ಮಾಡಿಸಲು ತಾವು ಬದ್ದರಾಗಿದ್ದು, ರೈತರಿಗೆ ಭತ್ತ ಸೇರಿದಂತೆ ಇನ್ನಿತರ ಬೆಳೆಯ ಬಿತ್ತನೆ ಕಾರ್ಯಕೈಗೊಳ್ಳಲು ಸಮರ್ಪಕ ಬಿತ್ತನೆ ಬೀಜ ವಿತರಣೆಗೆ ಕ್ರಮಕೈಗೊಳ್ಳುವಂತೆ ಕೃಷಿ ಇಲಾಖೆಯವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲು ಸ್ವೀಕರಿಸಿದರು. ಇದಕ್ಕು ಮೊದಲು ಶಾಸಕರು ಚುಂಚನಕಟ್ಟೆ ಬಸವನ ವೃತ್ತದಿಂದ ಆಂಜನೇಯ ಸ್ವಾಮಿ ದೇವಾಲಯದವರಿಗೆ ಮಂಗಳ ವಾದ್ಯದೊಂದಿಗೆ ತಮ್ಮ ಪತ್ನಿ ಸುನಿತಾ ಅವರ ಜೊತೆ ಕಳಸ ಹೊತ್ತ ಮಹಿಳೆಯರು ಮತ್ತು ಸಾರ್ವಜನಿಕರ ಜೊತೆಗೆ ತೆರಳಿ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿ ಶ್ರೀರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಳಾದ ಸುರೇಂದ್ರ ಮೂರ್ತಿ, ನರಗುಂದ, ಸಣ್ಣರಾಮಪ್ಪ, ದೇವಾಲಯದ ಇಓ ರಘು, ಶಿರಸ್ತೆದಾರ್ ಶಿವಕುಮಾರ್, ಉಪತಹಸೀಲ್ದಾರ್ ಕೆ.ಜೆ.ಶರತ್ ಕುಮಾರ್, ವಿ.ಎ. ಮೌನೇಶ್, ಚುನಾವಣೆಯ ಶಾಖೆಯ ಗುಮಾಸ್ತ ಯಶವಂತ್ ಎಇಇಗಳಾದ ವಿನುತ್,ರಾಜರಾಮ್, ಈಶ್ವರ್, ಗುರುರಾಜ್, ಇಂಜಿನಿಯರ್ ಆಯಾಜ್ , ತೋಟಗಾರಿಕೆ ಅಧಿಕಾರಿ ನವೀನ್ ಹೊಸೂರುಕಲ್ಲಹಳ್ಳಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಜಿ.ಪಂ.ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಮಾರ್ಚಹಳ್ಳಿ ಶಿವರಾಮ್, ಎಪಿಎಂಸಿ ಮಾಜಿಅಧ್ಯಕ್ಷ ರಮೇಶ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಗೋವಿಂದೇಗೌಡ, ಪುರಸಭೆ ಸದಸ್ಯರಾದ ನವೀದ್, ಶಂಕರ್, ಮಾಜಿ ಸದಸ್ಯ ವಿನಯ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಸಿ.ಪ್ರಸಾದ್, ಮುಖಂಡರಾದ ದಿಡ್ಡಹಳ್ಳಿ ಬಸವರಾಜು
ಡೈರಿಮಾದು, ಎಚ್.ಜೆ.ರಮೇಶ್, ಎಲ್.ಐಸಿ ಸ ಜಗದೀಶ್, ಮಂಚನಹಳ್ಳಿ ಧನು, ಸಿ.ಟಿ.ಪಾರ್ಥ, ತಮ್ಮಣ್ಣೇಗೌಡ, ಸಿ.ಬಿ.ಸಂತೋಷ್, ಚಿಕ್ಕಕೊಪ್ಪಲು ಗಿರಿ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲತಮ್ಮ, ಉಷಾ, ಸತ್ಯಮ್ಮ, ವಂದನಾ, ಸುನೀತಾ, ಶಾಸಕರ ಆಪ್ತಕಾರ್ಯದರ್ಶಿ ಮಹದೇವ್,ಪುನೀತ್, ನವೀನ್ ಇದ್ದರು‌.

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಸುವ ಪ್ರಯತ್ನ ಫಲಿಸದು

ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರನ್ನು ಸಿ.ಎಂ.ಸ್ಥಾನದಿಂದ ಕೆಳ ಗಿಳಿಸಲು ಬಿ.ಜೆ.ಪಿ.ಮತ್ತು ಜೆಡಿಎಸ್ ಪಕ್ಷಗಳು ಮುಂದಾಗಿದ್ದು ಇದು ಫಲಗೂಡುವುದಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಚುಂಚನಕಟ್ಟೆಯಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದು ಇವರನ್ನು‌ ಕೆಳಗಿಸಲು ನಡೆಸಿರುವ ಹುನ್ನಾರಕ್ಕೆ ರಾಜ್ಯಪಾಲರು ಸಹಕಾರ ಕೊಡಬಾರದು ಅದರ ವಿರುದ್ದ ಕಾಂಗ್ರೇಸ್ ಪಕ್ಷ ಹೋರಾಟ ಮಾಡಲಿದ್ದು ಈ ಹೋರಾಟದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular