ಮೈಸೂರು: ಕಾರ್ಲ್ಸ್ ಬರ್ಗ್ ಇಂಡಿಯಾದ ಮೈಸೂರು ಬ್ರೂವರಿ ಆರೋಗ್ಯ ಮತ್ತು ಸುರಕ್ಷತೆಯ ಮಾನದಂಡಗಳಿಗೆ ತನ್ನ ಬದ್ಧತೆಗೆ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ನ ಇಂಟರ್ನ್ಯಾಷನಲ್ ಸೇಫ್ಟಿ ಅವಾರ್ಡ್ ಪಡೆದಿದೆ. ಈ ಪ್ರಶಸ್ತಿಯು ಉತ್ತಮವಾದ ಕೆಲಸದ ಸ್ಥಳದ ಆರೋಗ್ಯ ಮತ್ತು ಸುರಕ್ಷತೆಯ ನಿರ್ವಹಣೆಯ ವ್ಯವಸ್ಥೆಗೆ- ಇದು ಕಾರ್ಯಕ್ಷಮತೆಯಲ್ಲಿ ಮುಂಚೂಣಿಯ ಮತ್ತು ಹಿಂದುಳಿಯುವಿಕೆ, ತರಬೇತಿ ಮತ್ತು ಉದ್ಯೋಗಿಗಳ ಎಚ್ ಅಂಡ್ ಎಸ್ ನಲ್ಲಿ ಸಾಮರ್ಥ್ಯ, ಕಾನೂನು ಬದ್ಧತೆ ಮತ್ತು ೨೫ ಮಾನದಂಡಗಳ ಅನುಸರಣೆಯ ವ್ಯವಸ್ಥೆಗೆ ನಮ್ಮ ಬದ್ಧತೆಯನ್ನು ಗುರುತಿಸುತ್ತದೆ.
ಮೈಸೂರು ಬ್ರೂವರಿ ೨೦೧೮ರಲ್ಲಿ ಪ್ರಾರಂಭವಾದ ದಿನದಿಂದಲೂ ಶೂನ್ಯ ಅವಘಡಗಳನ್ನು ದಾಖಲಿಸಿದ್ದು ಅದಕ್ಕೆ ಪ್ರಮುಖ ಮಾನದಂಡಗಳ ಅನುಷ್ಠಾನ ಪರಿಪೂರ್ಣತೆಹೆ ಹತ್ತಿರವಾಗಿದ್ದು ಶೇ.೯೮ರಷ್ಟಿದೆ.
೬೫ನೇ ಇಂಟರ್ನ್ಯಾಷನಲ್ ಸೇಫ್ಟಿ ಅವಾರ್ಡ್ಸ್ ವಿವಿಧ ಕೈಗಾರಿಕೆಗಳು, ಪ್ರಮಾಣಗಳು ಮತ್ತು ಗಾತ್ರಗಳನ್ನು ಯು.ಕೆ., ಆಫ್ರಿಕಾ, ಏಷ್ಯಾ, ಭಾರತ, ಮೇನ್ ಲ್ಯಾಂಡ್ ಯೂರೋಪ್ ಮತ್ತು ಮಧ್ಯ ಪ್ರಾಚ್ಯಗಳಿಂದ ೯೭೫ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿತ್ತು, ಅವುಗಳಲ್ಲಿ ಶೇ.೭೯ ಯಶಸ್ವಿಯಾಗಿ ಡಿಸ್ಟಿಂಕ್ಷನ್, ಮೆರಿಟ್ ಅಥವಾ ಪಾಸ್ ಗ್ರೇಡ್ ಪಡೆದವು. ತೀರ್ಪುಗಾರರ ತಂಡವು ವಿಜೇತರನ್ನು ಆಯ್ಕೆ ಮಾಡಿದ್ದು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಕೆಲಸದ ಸ್ಥಳದ ಗಾಯಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಅನಾರೋಗ್ಯವನ್ನು ತಡೆಯಲು ಸ್ಕೀಂನ ಬದ್ಧತೆಯನ್ನು ಮೌಲ್ಯಮಾಪನ ಮಾಡಿದರು.
ಶೂನ್ಯ ಅಪಫಾತದ ಸಂಸ್ಕೃತಿ ಸೃಷ್ಟಿಸಲು ಸರಿಸಾಟಿ ಇರದ ಸ್ಥಿರತೆ ಮತ್ತು ಬಲವಾದ ಬದ್ಧತೆ ಕೋರುತ್ತದೆ. ಮೈಸೂರು ಬ್ರೂವರಿಯ ನಮ್ಮ ಸಹೋದ್ಯೋಗಿಗಳನ್ನು ಈ ಗುರಿಸಾಧನೆಯಲ್ಲಿ ಅವಿರತವಾಗಿ ಪ್ರಯತ್ನಶೀಲರಾಗಿದ್ದಕ್ಕೆ ನಾವು ಪ್ರಶಂಸಿಸುತ್ತೇವೆ. ಈ ಪ್ರಶಸ್ತಿಯು ಅವರ ಪರಿಶ್ರಮವನ್ನು ಗುರುತಿಸಿದೆ ಮತ್ತು ಸುರಕ್ಷತೆಗೆ ಅವರ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಕೆಲಸದ ಸ್ಥಳವನ್ನು ಪ್ರತಿನಿತ್ಯವೂ ಸುರಕ್ಷಿತವಾಗಿಸುವಲ್ಲಿ ತೊಡಗಿಕೊಂಡ ಎಲ್ಲರಿಗೂ ಅಭಿನಂದನೆಗಳು? ಎಂದು ವಿಪಿ ಆಪರೇಷನ್ಸ್ ಸಂಜೀವ್ ಗುಪ್ತಾ ಹೇಳಿದರು.
ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಕುರಿತು: ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ೧೯೫೭ರಲ್ಲಿ ಪ್ರಾರಂಭವಾಗಿದ್ದು ವಿಶ್ವದಾದ್ಯಂತ ಅಡ್ವೊಕಸಿ, ನೆಟ್ವರ್ಕಿಂಗ್ ಮೂಲಕ ಉದ್ಯೋಗ ಸಂಬಂಧಿತ ಗಾಯಗಳು ಮತ್ತು ಅನಾರೋಗ್ಯ ತಪ್ಪಿಸಲು ಶ್ರಮಿಸುತ್ತದೆ ಮತ್ತು ಸುರಕ್ಷಿತ ಕೆಲಸದ ಪರಿಸರಕ್ಕೆ ಸೇವೆಗಳು ಮತ್ತು ಉತ್ಪನ್ನಗಳನ್ನು ಪೂರೈಸುತ್ತದೆ. ಅವರು ಯು.ಕೆ.ಯಲ್ಲಿ ಸುರಕ್ಷತೆಯ ನಿಯಮಗಳನ್ನು ಪ್ರಭಾವಿಸುವಲ್ಲಿ ಪ್ರಮುಖವಾಗಿದ್ದಾರೆ ಮತ್ತು ೬೦ಕ್ಕೂ ಹೆಚ್ಚು ದೇಶಗಳಲ್ಲಿ ಉದ್ಯೋಗಿಗಳ ಸೌಖ್ಯವನ್ನು ಉನ್ನತೀಕರಿಸಲು ಬದ್ಧವಾಗಿದೆ.
ಕಾರ್ಲ್ಸ್ ಬರ್ಗ್ ಇಂಡಿಯಾ ಕುರಿತು: ಕಾರ್ಲ್ಸ್ ಬರ್ಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಸಿಐಪಿಎಲ್) ೨೦೦೭ರಲ್ಲಿ ಹಿಮಾಚಲ ಪ್ರದೇಶದ ಪನೋಟ ಸಾಹಿಬ್ ನಲ್ಲಿ ಮೊದಲ ಉತ್ಪಾದನೆಯ ಮೂಲಕ ತನ್ನ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಆವಿಷ್ಕಾರ ಮತ್ತು ಉನ್ನತ ಗುಣಮಟ್ಟಕ್ಕೆ ಬದ್ಧತೆಯ ಮೂಲಕ ತನ್ನ ಬ್ರಾಂಡ್ ಪೋರ್ಟ್ ಫೊಲಿಯೊ ಅಭಿವೃದ್ಧಿ ಮತ್ತು ಸದೃಢಗೊಳಿಸಿಕೊಳ್ಳಲು ಆದ್ಯತೆ ನೀಡಿದೆ. ಕಂಪನಿಯ ಉತ್ಪನ್ನದ ವ್ಯಾಪ್ತಿಯಲ್ಲಿ ಕಾರ್ಲ್ಸ್ ಬರ್ಗ್ ಸ್ಮೂಥ್, ಕಾರ್ಲ್ಸ್ ಬರ್ಗ್ ಎಲಿಫೆಂಟ್, ಟುಬೊರ್ಗ್ ಗ್ರೀನ್, ಟುಬೊರ್ಗ್ ಸ್ಟ್ರಾಂಗ್ ಮತ್ತು ಟುಬೊರ್ಗ್ ಕ್ಲಾಸಿಕ್ ಒಳಗೊಂಡಿವೆ. ಕಾರ್ಲ್ಸ್ ಬರ್ಗ್ ಸಮೂಹದ ಸದಸ್ಯನಾಗಿ ಕಾರ್ಲ್ಸ್ ಬರ್ಗ್ ಇಂಡಿಯಾ ಪ್ರತಿ ಸಂದರ್ಭ ಹಾಗೂ ರುಚಿ ಮತ್ತು ಜೀವನಶೈಲಿಗೆ ಬಿಯರ್ ಒದಗಿಸುತ್ತದೆ. ನಮ್ಮ ಇ.ಎಸ್.ಜಿ. ಕಾರ್ಯಕ್ರಮ, `ಟುಗೆದರ್ ಟುವರ್ಡ್ಸ್ ಜೀರೋ ಅಂಡ್ ಬಿಯಾಂಡ್? ನಮ್ಮ ೨೦೩೦ ಮತ್ತು ೨೦೪೦ ಜಾಗತಿಕ ಗುರಿಗಳು, ಶೂನ್ಯ ಇಂಗಾಲದ ಹೆಜ್ಜೆ ಗುರುತು, ಶೂನ್ಯ ಕೃಷಿ ಹೆಜ್ಜೆ ಗುರುತು, ಶೂನ್ಯ ಪ್ಯಾಕೇಜಿಂಗ್ ತ್ಯಾಜ್ಯ, ಶೂನ್ಯ ತ್ಯಾಜ್ಯ ನೀರು, ಶೂನ್ಯ ಜವಾಬ್ದಾರಿಯಿಲ್ಲದ ಮದ್ಯಪಾನ ಮತ್ತು ಶೂನ್ಯ ಅಪಘಾತ ಸಂಸ್ಕೃತಿಯನ್ನು ಒಳಗೊಂಡಿದೆ.